2 ಸಾವಿರ ರೂ. ನೋಟುಗಳೊಂದಿಗೆ ಸಿಕ್ಕಿಬಿದ್ದ ನಕ್ಸಲ್ ಬೆಂಬಲಿಗ!; 10 ಲಕ್ಷ ರೂ. ವಶ

Naxal
Published on

ನವದೆಹಲಿ: ದೇಶದಲ್ಲಿ ಎರಡು ಸಾವಿರ ರೂಪಾಯಿ ನೋಟುಗಳನ್ನು ಈಗಾಗಲೇ ಹಿಂಪಡೆದುಕೊಳ್ಳಲಾಗಿದ್ದು, ಇರುವವರು ಅದನ್ನು ಸೆಪ್ಟೆಂಬರ್​ ತಿಂಗಳೊಳಗೆ ಬ್ಯಾಂಕ್​ಗೆ ನೀಡಿ ಬದಲಿಸಿಕೊಳ್ಳುವಂತೆಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ.

ಈ ಮಧ್ಯೆ ನಕ್ಸಲ್ ಬೆಂಬಲಿಗನೊಬ್ಬ ಕಂತೆಗಟ್ಟಲೆ 2 ಸಾವಿರ ರೂ. ನೋಟುಗಳೊಂದಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಆತನ ಬಳಿ ಹಾಗೆ ಸಿಕ್ಕಿದ್ದು ಬರೋಬ್ಬರಿ 10 ಲಕ್ಷ ರೂಪಾಯಿ. ಅಷ್ಟೂ ಮೊತ್ತ ಎರಡು ಸಾವಿರ ರೂ. ನೋಟುಗಳೇ ಆಗಿರುವುದು ಕುತೂಹಲ ಕೆರಳಿಸಿದೆ. ಕಾನೂನುಬಾಹಿರ ಶಕ್ತಿಗಳು ಎರಡು ಸಾವಿರ ರೂಪಾಯಿ ನೋಟುಗಳನ್ನು ಬಳಸಿಕೊಳ್ಳುತ್ತಿವೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.

ಅಂದಹಾಗೆ ಈ ನಕ್ಸಲ್ ಬೆಂಬಲಿಗ ಸಿಕ್ಕಿಬಿದ್ದಿರುವುದು ಛತ್ತೀಸ್​ಘಡದ ಬಿಜಾಪುರ ಜಿಲ್ಲೆಯಲ್ಲಿ. ಈ ಪ್ರದೇಶದಲ್ಲಿ 23 ವರ್ಷದ ನಕ್ಸಲ್ ಬೆಂಬಲಿಗನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 10 ಲಕ್ಷ ರೂ. ಮೊತ್ತದ 2 ಸಾವಿರ ರೂ. ನೋಟುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net