ನವಾಜುದ್ದೀನ್​ ಸಿದ್ಧೀಕಿಗೆ ಡಿವೋರ್ಸ್​ ನೋಟಿಸ್ ನೀಡಿ ಬೇರೆ ಪ್ರಿಯಕರನನ್ನು ಆರಿಸಿಕೊಂಡ ಪತ್ನಿ!?

nawaz
Published on

ನವಾಜುದ್ದೀನ್​ ಸಿದ್ಧೀಕಿ ಲಾಕ್​ಡೌನ್​ ನಡುವೆಯೂ ಅಮ್ಮನ ಅನಾರೋಗ್ಯ, ಸಹೋದರಿಯ ಅಕಾಲಿಕ ಸಾವು, ಪತ್ನಿ ವಿಚ್ಛೇದನ ಹೀಗೆ ಒಂದರ ಮೇಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತ ಒಂದಷ್ಟು ಕಾರಣಗಳನ್ನು ಗುಡ್ಡೆ ಹಾಕಿಕೊಂಡು, ಪತಿಯ ವಿರುದ್ಧ ತಿರುಗಿ ಬಿದ್ದಿರುವ ಪತ್ನಿ ಆಲಿಯಾ ಸಿದ್ಧೀಕಿ/ಅಂಜನಾ ಪಾಂಡೆ, ಇದೀಗ ನವಾಜುದ್ದೀನ್​ಗೆ ವಿಚ್ಛೇದನ ನೋಟಿಸ್​ ನೀಡುತ್ತಿದ್ದಂತೆ ಬೇರೆ ಹುಡುಗನನ್ನು ನೋಡಿಕೊಂಡಿದ್ದಾರೆ!

ಹೌದು, ಈಗಾಗಲೇ ಆ ವಿಚಾರ ಎಲ್ಲೆಡೆ ಹರಿದಾಡಿದ್ದು, ಒಂದಷ್ಟು ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ. ಹಾಗಾದರೆ, ಆಲಿಯಾ ಕಂಡುಕೊಂಡ ಆ ವ್ಯಕ್ತಿ ಯಾರು? ಬೇರಾರು ಅಲ್ಲ ಪಿಯೂಷ್​ ಪಾಂಡೆ. ಅಚ್ಚರಿ ವಿಚಾರ ಏನೆಂದರೆ ಈ ಪಿಯೂಷ್​ ಪಾಂಡೆಯನ್ನು ಆಲಿಯಾಗೆ ಪರಿಚಯ ಮಾಡಿಕೊಟ್ಟಿದ್ದು ಪತಿ ನವಾಜುದ್ದೀನ್​ ಸಿದ್ಧೀಕಿ. ಆಲಿಯಾ ವಾಟ್ಸ್​ಆಪ್​ ಡಿಸ್ಲೇ ಪಿಕ್ಚರ್​ನಲ್ಲಿ ಪಿಯೂಷ್​ ಫೋಟೋ ಇಟ್ಟಿದ್ದೇ ತಡ, ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಸದ್ಯ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೀಗೆ ಹರಿದಾಡುತ್ತಿರುವ ಸುದ್ದಿಗೆ ಆಲಿಯಾ ಕಡೆಯಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ.

ಇನ್ನು, ನವಾಜ್​ ಅಷ್ಟೇ ಅಲ್ಲದೆ, ಆತನ ಸಹೋದರ ಶಮಾಸ್ ವಿರುದ್ಧವೂ ಆಲಿಯಾ ತಿರುಗಿ ಬಿದ್ದಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆ ವಿಚಾರದ ಬಗ್ಗೆ ಮಾತನಾಡುತ್ತಾರಂತೆ. ಸದ್ಯ ಇಬ್ಬರು ಮಕ್ಕಳನ್ನು ಜತೆಗೆ ಕರೆದೊಯ್ದಿರುವ ಆಲಿಯಾ, ಮೂಲ ಹೆಸರು ಅಂಜನಾ ಕಿಶೋರ್​ ಪಾಂಡೆಯಾಗಿ ಬದಲಾಗುವುದಾಗಿಯೂ ಹೇಳಿಕೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net