

ನೊಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾ ಬಳಿ ಅಪಘಾತದಲ್ಲಿ ನೌಕಾಪಡೆ ಅಧಿಕಾರಿಯೋರ್ವರು ಮೃತಪಟ್ಟಿದ್ದು, ಮತ್ತಿಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂವರೂ 35 ವರ್ಷದ ಆಸುಪಾಸಿನವರಾಗಿದ್ದು, ಕಾರಿನಲ್ಲಿ ದೆಹಲಿಯಿಂದ ಅಲಹಾಬಾದ್ಗೆ ತೆರಳುತ್ತಿದ್ದರು. ಯಮುನಾ ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ಅವರ ವಾಹನ ಅಪಘಾತಕ್ಕೀಡಾಗಿದೆ. ಬುಧವಾರ ಮುಂಜಾನೆ ಸುಮಾರು 3.25ಗಂಟೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ನೇವಿ ಅಧಿಕಾರಿಯನ್ನು ಸತೀಶ್ ಚಂದ್ ಗಂಗ್ವಾರ್ ಎಂದು ಗುರುತಿಸಲಾಗಿದೆ. ಕುಲದೀಪ್ ದಾಸ್ ಮತ್ತು ಧನಂಜಯ್ ದಾಸ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಇವರ ಕಾರಿಗೆ ಡಿಕ್ಕಿಯಾದ ವಾಹನ ಯಾವುದು ಎಂಬುದು ಇನ್ನೂ ಗೊತ್ತಾಗಲಿಲ್ಲ ಎಂದಿದ್ದಾರೆ.
ಈ ಮೂವರೂ ಅಲಹಾಬಾದ್ನ ನಿವಾಸಿಗಳು ಎಂದು ತಿಳಿದುಬಂದಿದೆ. (ಏಜೆನ್ಸೀಸ್)