ಚಂದ್ರಗುತ್ತಿಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

sor dasara (1)
ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಕಲಶ, ಘಟಸ್ಥಾಪನೆಯೊಂದಿಗೆ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀ ಯೋಗೀಶ್ವರಮಠ ಸುಖದೇವನಾಥಜೀ, ಪ್ರಮೀಳಾಕುಮಾರಿ ಇತರರಿದ್ದರು.
Published on

ಸೊರಬ: ನವರಾತ್ರಿ ಉತ್ಸವಕ್ಕೆ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ದೇವಾಲಯದ ಶ್ರೀ ಯೋಗೀಶ್ವರಮಠ ಸುಖದೇವನಾಥಜೀ ಅವರ ನೇತೃತ್ವದಲ್ಲಿ ಶರನ್ನವರಾತ್ರಿ ಮೊದಲ ದಿನ ಕಲಶ ಸ್ಥಾಪನೆ ಮತ್ತು ಘಟಸ್ಥಾಪನೆಯೊಂದಿಗೆ ಸಾಂಪ್ರದಾಯಿಕ, ಧಾರ್ಮಿಕ ಪೂಜಾ ವಿಧಿ ವಿಧಾನಗಳು ಆರಂಭವಾದವು.

ಶರನ್ನವರಾತ್ರಿ ಉತ್ಸವದ ಧಾರ್ಮಿಕ ಪೂಜಾ ಕಾರ್ಯಗಳಿಗೆ ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾಕುಮಾರಿ ಚಾಲನೆ ನೀಡಿದರು. ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಬೈರಪ್ಪ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವಸ್ಥಾನದಲ್ಲಿ ನವಧಾನ್ಯಗಳಿಂದ ಘಟಸ್ಥಾಪನೆ, ಕಲಶ ಸ್ಥಾಪನೆ ಮಾಡಲಾಯಿತು. ಧಾರ್ಮಿಕ ಪೂಜಾ ವಿಧಿ ವಿಧಾನಗಳ ನೇತೃತ್ವವನ್ನು ಪ್ರಧಾನ ಅರ್ಚಕ ಅರವಿಂದ್ ಭಟ್ ವಹಿಸಿದ್ದರು. ದೇವಾಲಯಕ್ಕೆ ನವರಾತ್ರಿಯ ಮೊದಲನೇ ದಿನ ಸ್ಥಳೀಯ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ತಾಪಂ ಮಾಜಿ ಸದಸ್ಯರಾದ ಸುನಿಲ್ ಗೌಡ, ಎನ್.ಜಿ.ನಾಗರಾಜ್, ಗ್ರಾಪಂ ಸದಸ್ಯ ಎಂ.ಪಿ.ರತ್ನಾಕರ, ಸಮಿತಿಯ ಯಶವಂತಪ್ಪ, ಗಣಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net