

ಸಾಗರ: ಸಾಗರದ ರೈಲ್ವೆ ಸ್ಟೇಷನ್ ರಸ್ತೆಯ ಚಾರೋಡಿ ಕೊಂಕಣಿ ಆಚಾರ್ ಸಮಾಜದ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಅ.3ರಿಂದ 12ರವರೆಗೆ ನವರಾತ್ರಿ ಉತ್ಸವ ನೆರವೇರಲಿದೆ.
3ರಂದು ಯೋಗನಿದ್ರಾ ಪೂಜಾ, 4ರಂದು ದೇವಜಾತಾ ಪೂಜಾ, 5ರಂದು ಮಹಿಷಮರ್ದಿನಿ ಪೂಜೆ, 6ರಂದು ಶೈಲಜಾ ಪೂಜೆ, 7ರಂದು ದೂಮ್ರಹಾ ಪೂಜೆ, 8ರಂದು ಚಂಡ-ಮುಡಾಹ ಪೂಜೆ, 9ರಂದು ರಕ್ತಬೀಜಾಹ ಪೂಜೆ ಮತ್ತು ಕದಲಿ ಮಂಟಪ ಸೇವೆ ನೆರವೇರಲಿದೆ. 10ರಂದು ನಿಶುಂಭಹಾ ಪೂಜೆ, 11ರಂದು ದುರ್ಗಾಷ್ಟಮಿ ಮಹಾನವಮಿ ಅಂಗವಾಗಿ ವಿಶೇಷ ಪೂಜೆ ಇರುತ್ತದೆ. 12ರಂದು ವಿಜಯದಶಮಿ ಅಂಗವಾಗಿ ಶಮೀಪೂಜೆ, ಪಲ್ಲಕ್ಕಿ ಉತ್ಸವ ಇನ್ನಿತರೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್ ಹೇಳಿಕೆ ನೀಡಿದ್ದಾರೆ.