1988ರ ಹಲ್ಲೆ ಪ್ರಕರಣ; ನವಜೋತ್​ ಸಿಂಗ್​ ಸಿಧು ನಾಳೆ ಜೈಲಿನಿಂದ ಬಿಡುಗಡೆ

Navjoth singh sidhu
Published on

ಪಟಿಯಾಲ: 1988ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್​ ಸಿಂಗ್​ ಸಿಧು ಶನಿವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ನವಜೋತ್​ ಸಿಂಗ್​ ಸಿಧು ಅವರ ಟ್ವಿಟರ್​ ಖಾತೆಯಿಂದ ಟ್ವೀಟ್​ ಮಾಡಲಾಗಿದ್ದು ಏಪ್ರಿಲ್​ 1ರಂದು ಪಟಿಯಾಲ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ.

ನವಜೋತ್​ ಸಿಂಗ್​ ಸಿಧು ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ವಕೀಲ ಎಚ್​.ಪಿ.ಎಸ್​.ವರ್ಮಾ ಏಪ್ರಿಲ್​ 1ರಂದು ಸಿಧು ಬಿಡುಗಡೆಯಾಗುತ್ತಿರುವ ಕುರಿತು ಖಚಿತಪಡಿಸಿದ್ದಾರೆ. ಪಂಜಾಬ್ ಸರ್ಕಾರದ​ ಕಾರಾಗೃಹ ನಿಯಮಗಳ ಪ್ರಕಾರ ಆರೋಪಿ ಸ್ಥಾನದಲ್ಲಿರುವವರ ನಡುವಳಿಕೆಯಲ್ಲಿ ಬದಲಾವಣೆಯಾಗಿದ್ದರೆ ಅಂಥವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೇ 19, 2022ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ಸಿಧು ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು ಮತ್ತು ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ಮೇ 20, 2022ರಂದು ಸಿಧು ಪಟಿಯಾಲ ಜೈಲ್ಲಿನಲ್ಲಿ ಶರಣಾಗಿದ್ದರು.

1988ರಲ್ಲಿ ಗಾಡಿ ನಿಲ್ಲಿಸುವ ವಿಚಾರವಾಗಿ ಸಿಧು ಹಾಗೂ ಗುರ್ನಾಮ್​ ಸಿಂಗ್​(65) ನಡುವೆ ಗಲಾಟೆಯಾಗಿತ್ತು. ಈ ವೇಳೆ ಸಿಧು ಹಾಗೂ ಅವರ ಸ್ನೇಹಿತ ರೂಪಿಂದರ್​ ಸಿಂಗ್​ ಸಂಧು ಗುರ್ನಾಮ್​ ಅವರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಯ ತೀವ್ರತೆಗೆ ಗುರ್ನಾಮ್​ ಸಿಂಗ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net