ನವೀನ ಹೆಸರಿನಲ್ಲಿ ಶಿವಾಲಯ ನಿಮಿರ್ಸಿದ ತಂದೆ-ತಾಯಿ

24-RNR-01
Published on

ರಾಣೆಬೆನ್ನೂರ: ಎಂಬಿಬಿಎಸ್​ ಓದುವ ಕನಸ್ಸು ಹೊತ್ತು ಯುಕ್ರೇನ್​ಗೆ ತೆರಳಿದ್ದ ತಾಲೂಕಿನ ಚಳಗೇರಿ ಗ್ರಾಮದ ವಿದ್ಯಾಥಿರ್ ನವೀನ ಗ್ಯಾನಗೌಡರ ಯುಕ್ರೇನ್​&ರಷ್ಯಾ ಯುದ್ಧದಲ್ಲಿ ಮೃತಪಟ್ಟು ಮೂರು ವರ್ಷ ಗತಿಸಿದ ಹಿನ್ನೆಲೆಯಲ್ಲಿ ಆತನ ಪಾಲಕರು ನವೀನಗಾಗಿ ಆಸ್ಪತ್ರೆ ನಿಮಿರ್ಸಲು ಮೀಸಲಿಟ್ಟ ಜಾಗದಲ್ಲಿ ಶಿವಧ್ಯಾನ ಮಂದಿರ ನಿಮಿರ್ಸುವ ಮೂಲಕ ಪುತ್ರನನ್ನು ಚಿರಸ್ಥಾಯಿಯಾಗಿಸಿದ್ದಾರೆ.

ಯುಕ್ರೇನ್​ ದೇಶದಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡುವಾಗ ರಷ್ಯಾ ಯುಕ್ರೇನ್​ ದೇಶದ ಮೇಲೆ ಬಾಂಬ ದಾಳಿ ಆರಂಭಿಸಿತ್ತು. 2022 ಮಾರ್ಚ್​ 1ರಂದು ಅಲ್ಲಿನ ಸೂಪರ್​ ಮಾರ್ಕೆಟ್​ ಬಳಿ ನವೀನ ಗುಂಡಿನ ದಾಳಿಗೆ ಬಳಿಯಾಗಿದ್ದ. ಈ ಎರಡು ದೇಶದ ಯುದ್ಧದಲ್ಲಿ ಭಾರತದ ಲಾಂತರ ವಿದ್ಯಾಥಿರ್ಗಳ ನಡುವೆ ನವೀನ್​ ಮಾತ್ರ ಅಸುನಿಗಿದ್ದರಿಂದ ಈ ಟನೆ ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು.

ಆಸ್ಪತ್ರೆ ಬದಲು ಶಿವಧ್ಯಾನ ಮಂದಿರ...

ನವೀನ ಎಂಬಿಬಿಎಸ್​ ಮುಗಿದ ಮೇಲೆ ತಮ್ಮ ಸ್ವಂತ ಊರಾದ ಚಳಗೇರಿ ಗ್ರಾಮದಲ್ಲಿಯೆ ಆಸ್ಪತ್ರೆ ನಿಮಿರ್ಸಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುವ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದ. ಅದರಂತೆ ಆತನಿಗೆ ಆಸ್ಪತ್ರೆ ನಿಮಿರ್ಸುವ ಸಲುವಾಗಿ ತಂದೆ ಶೇಖರಪ್ಪ 4 ಗುಂಟೆ ಜಾಗ ಸಹ ಖರೀದಿಸಿಟ್ಟಿದ್ದರು.

ಆದರೆ, ನವೀನ ವಿಧಿಯಾಟಕ್ಕೆ ಬಲಿಯಾದ ಹಿನ್ನೆಲೆಯಲ್ಲಿ ಆತ ಚಿರಸ್ಥಾಯಿಯಾರಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಗೆ ಮೀಸಲಿಟ್ಟ ಜಾಗದಲ್ಲಿ ಶಿವಧ್ಯಾನ ಮಂದಿರ ನಿಮಿರ್ಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಕುಟುಂಬದವರು ಮುಂದಾಗಿದ್ದಾರೆ.

ಶಿವರಾತ್ರಿಯಂದು ಲೋಕಾರ್ಪಣೆ...

ನವೀನ ಯೂಕ್ರೇನ್​ನಲ್ಲಿ ಮೃತಪಟ್ಟಿದ್ದು ಮಹಾಶಿವರಾತ್ರಿ ದಿನದಂದು. ಆದ್ದರಿಂದ ಆತನಿಗೆ ಪ್ರೀಯವಾದ ಶಿವನ ಮಂದಿರ ನಿಮಿರ್ಸಲಾಗಿದೆ. 21*17 ಅಡಿ ಅಗಲದಲ್ಲಿ ದೇವಸ್ಥಾನ ನಿಮಿರ್ಸಿದ್ದು, ಎರಡೂವರೆ ಅಡಿ ಎತ್ತರದ ಶಿವಲಿಂಗು ಪ್ರತಿಷ್ಠಾಪಿಸಲಾಗುವುದು.

ಪುತ್ರ ನಮ್ಮನ್ನಗಲಿ ಶಿವರಾತ್ರಿಗೆ ಮೂರು ವರ್ಷ ಆಗಲಿದೆ. ಆದ್ದರಿಂದ ಆತನ ಪುಣ್ಯಸ್ಮರಣೆ ನಿಮಿತ್ತ ಶಿವರಾತ್ರಿ ದಿನದಂದು ದೇವಸ್ಥಾನವನ್ನು ಸಕಲ ವಿಧಿವಿಜ್ಞಾನಗಳ ಪ್ರಕಾರ ನಾಡಿನ ಹಲವು ಶರಣರ ಪೂಜೆಯೊಂದಿಗೆ ಲೋಕಾರ್ಪಣೆ ಮಾಡಲಾಗುವುದು. ನಂತರದಲ್ಲಿ ಶಿವಧ್ಯಾನ ಮಂದಿರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ನವೀನ ತಂದೆ ಶೇಖರಪ್ಪ ಗ್ಯಾನಗೌಡರ "ವಿಜಯವಾಣಿ' ಎದುರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net