ನಾವಿಕದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಹಾಸನದ ವಲ್ಲೀಶ್ ಶಾಸ್ತ್ರಿ ಆಯ್ಕೆ

Vallish Shastri 15 march 20
Published on

ಬೆಂಗಳೂರು: ಉತ್ತರ ಅಮೆರಿಕ ವಿಶ್ವ ಕನ್ನಡ ಸಂಘ (ನಾವಿಕ) ದ 2020-21ನೇ ಸಾಲಿನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಹಾಸನದ ಮತ್ತಿಗೋಡಿನ ವಲ್ಲೀಶ್​ ಶಾಸ್ತ್ರಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶಿವಕುಮಾರ್​, ಆರುಡಿ ರಾಜಗೋಪಾಲ್​, ಅಲಮೇಲು ಅಯ್ಯಂಗಾರ್​, ಖಜಾಂಚಿಯಾಗಿ ನಾಗರಾಜ ರೆಡ್ಡಿ, ಕಾರ್ಯದರ್ಶಿಯಾಗಿ ಮಂಜುರಾವ್​, ಜಂಟಿ ಕಾರ್ಯದರ್ಶಿಗಳಾಗಿ ರಾಮರಾವ್​, ಪುಷ್ಪಲತಾ ನವೀನ್​, ಪ್ರಾದೇಶಿಕ ನಿರ್ದೇಶಕರಾಗಿ ಶ್ರೀಕಾಂತ್ ಪ್ರಧಾನ್​, ಡಾ.ಅಶೋಕ್​ ಕಟ್ಟಿಮನೆ, ಅನಿಲ್ ಭಾರದ್ವಾಜ್​, ಡಾ.ಜಯಂತಿ ಶ್ರೀನಿವಾಸಯ್ಯ, ಪ್ರಕಾಶ್​ ಬಾಣಾವರ, ಬಸವರಾಜ ಬೆಂಕಿ ಅವರನ್ನು ಆಯ್ಕೆ ಮಾಡಲಾಗಿದೆ.

ಅಲ್ಲದೆ, 12 ಮಂದಿಯನ್ನು ಬೋರ್ಡ್​ ಆಫ್​ ಟ್ರಸ್ಟಿಗಳನ್ನಾಗಿ, ತಲಾ ಐವರನ್ನು ಸಲಹಾ ಸಮಿತಿ ಮತ್ತು ಆರ್ಥಿಕ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಸಲಹಾ ಸಮಿತಿ: ಕುಮಾರ್​ ಕೆ.ವಿ. ಮುಖ್ಯಸ್ಥರು. ಸದಸ್ಯರು: ಡಾ. ವಾಸು ಚಿಕ್ಕತ್ತೂರ್​, ನಟರಾಜ್​ ಕೋಟೆ, ವಿಶ್ವನಾಥ್​ ಹಂಸೋಗೆ, ಡಾ. ಶ್ರೀಕಾಂತ್​ ದೇವಂಗಿ. ಹಣಕಾಸು ಸಮಿತಿ: ಮುಖ್ಯಸ್ಥ: ಡಾ. ಕೇಶವ್​ ಬಾಬು. ಸದಸ್ಯರು: ಡಾ. ರೇಣುಕಾ ರಾಮಪ್ಪ, ಸುರೇಶ್​ ರಾಮಚಂದ್ರ, ನಾಗರಾಜ್​ ರೆಡ್ಡಿ, ವಲ್ಲೀಶ್​ ಶಾಸ್ತ್ರಿ.

ಅಧ್ಯಕ್ಷ ವಲ್ಲೀಶ್​ ಶಾಸ್ತ್ರಿಯವರ ಕಿರುಪರಿಚಯ

ವಲ್ಲೀಶ್​ ಶಾಸ್ತ್ರಿಯವರು ಮೂಲತಃ ಹಾಸನದ ಮತ್ತಿಗೋಡು ಗ್ರಾಮದವರು. ಬೆಂಗಳೂರಿನಲ್ಲಿ ಕಾಲೇಜು ಅಭ್ಯಾಸ ಮುಗಿಸಿದ್ದಾರೆ. ಬೆಂಗಳೂರು, ಧಾರವಾಡ, ಹರಿಹರ ಅಲ್ಲದೆ ಸೌದಿಅರೇಬಿಯಾ, ದುಬೈ, ಇಟಲಿ, ಇಂಗ್ಲೆಂಡ್​, ಫ್ರಾನ್ಸ್​, ಸಿಂಗಪೂರದಲ್ಲೂ ಕೆಲಸ ಮಾಡಿದ್ದಾರೆ.

1997ರಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡಿದ್ದರೂ ಕನ್ನಡದ ಪ್ರೇಮವನ್ನು ಹಾಗೇ ಉಳಿಸಿಕೊಂಡಿದ್ದಾರೆ. ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಸಂಘಗಳಲ್ಲಿ ಸಕ್ರಿಯವಾಗಿದ್ದಾರೆ.

ನಾವಿಕ ಸಂಸ್ಥೆಯ ಸಂಸ್ಥಾಪಕರಾಗಿ, ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಯುಎಸ್​ಎದಲ್ಲಿರುವ ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರಾಗಿದ್ದರು.

ಬೆಂಗಳೂರಿನ ಬೆನಕ ತಂಡದಲ್ಲಿ ಪಳಗಿ, ಹಲವು ನಾಟಕಗಳನ್ನು ಬರೆದು ನಿರ್ದೇಶಿಸಿದ ವಲ್ಲೀಶ್​ ಶಾಸ್ತ್ರಿ ಅವರು ಕರ್ನಾಟಕ ನಾಟಕ ಅಕಾಡೆಮಿಯಿಂದ ಪುರಸ್ಕೃತರು. ತಮ್ಮ ರಂಗಧ್ವನಿ ಎಂಬ ಒಂದು ಪೂರ್ಣ ತಂಡನ್ನು ಅಮೆರಿಕದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಬೆಂಗಳೂರು ಮತ್ತು ಮೈಸೂರಿನಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಸಂಘಟಕರಾಗಿ ಹೆಸರು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net