ಸಂಕಷ್ಟ ಕಳೆಯುವ ಚಂದ್ರಘಂಟಾ ದೇವಿ: ನವರಾತ್ರಿ ವೈಭವ-3

Navarathri
Published on
| ಸ್ವಾಮಿ ಶಾಂತಿವ್ರತಾನಂದ ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ನವರಾತ್ರಿಯ ಮೂರನೇ ದಿವಸ, ತೃತೀಯಾದಂದು ದೇವಿ ದುರ್ಗೆಯ ಮೂರನೇ ರೂಪವಾದ ಚಂದ್ರಘಂಟಾ ಶಕ್ತಿಯನ್ನು ಸಾಧಕರು ಅರ್ಚಿಸುತ್ತಾರೆ.

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಘಂಟಾಕಾರದ ಅರ್ಧಚಂದ್ರನನ್ನು ಶಿರಸ್ಸಿನಲ್ಲಿ ಧರಿಸಿರುವವಳು ಚಂದ್ರಘಂಟಾ. ಇವಳ ಶರೀರದ ಕಾಂತಿ ಚಿನ್ನದಂತೆ ಹೊಳೆಯುತ್ತಿರುವುದು. ಖಡ್ಗ, ಧನಸ್ಸು, ತ್ರಿಶೂಲ ಮುಂತಾದ ದಿವ್ಯಾಸ್ತ್ರಗಳನ್ನು ಹತ್ತು ಕೈಯಲ್ಲಿ ಧರಿಸಿದ್ದಾಳೆ. ಸಿಂಹಾರೂಢಳಾಗಿ ಯುದ್ಧಕ್ಕೆ ಸನ್ನದ್ಧಳಾಗಿರುವಂತೆ ತೋರುವಳು. ಒಂದೊಂದು ಕೈಯಲ್ಲೂ ಒಂದೊಂದು ಆಯುಧ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ‘ಮಣಿಪೂರ’ ಚಕ್ರ ಪ್ರವೇಶ ಮಾಡುತ್ತದೆ. ಸ್ವಾದಿಷ್ಠಚಕ್ರದ ಮೇಲ್ಭಾಗದ ನಾಭಿಯ ಕೇಂದ್ರಬಿಂದುವಿನಲ್ಲಿ ಬಣ್ಣವನ್ನು ಹೊಂದಿರುವ ಈ ಚಕ್ರವನ್ನು ಅಗ್ನಿತತ್ತ್ವ ನಿಗ್ರಹಿಸುತ್ತದೆ. ಘಂಟಾನಾದದಂತೆ ಈಕೆಯ ಗಂಭೀರಧ್ವನಿ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ದೇವಿ ದುಷ್ಟರನ್ನು ಶಿಕ್ಷಿಸುತ್ತಾಳೆ, ಸಜ್ಜನರಿಗೆ ರಕ್ಷಾಕವಚವಾಗಿ ನಿಂತಿದ್ದಾಳೆ. ಈಕೆಯನ್ನು ಆರಾಧಿಸುವ ಭಕ್ತರಿಗೆ ನಿರ್ಭಯತೆ, ಪರಾಕ್ರಮ ಮತ್ತು ಆತ್ಮಶಕ್ತಿಗಳು ದೊರೆಯುತ್ತವೆ.

ಈ ಆದಿಶಕ್ತಿಯ ಉಪಾಸನೆಯಿಂದ ಸಂಸಾರದ ತ್ರಿತಾಪಗಳು ದೂರವಾಗುತ್ತವೆ. ಇಹ-ಪರದಲ್ಲಿ ಸದ್ಗತಿ ದೊರಕುತ್ತದೆ. ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ತಾಯಿ ಬೆಳಕಾಗುತ್ತಾಳೆ. ಸಾಧಕನು ಈಕೆಯನ್ನು ಪೂಜಿಸುವುದರಿಂದ ಮನಸ್ಸು ಮಣಿಪುರ ಚಕ್ರವನ್ನು ಪ್ರವೇಶಿಸುತ್ತದೆ. ಸಾಧಕನಿಗೆ ದೇವಿಯ ಕೃಪೆಯಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ಮಂಗಳ ಧ್ವನಿಗಳು ಕೇಳಿಬರುತ್ತವೆ. ಸಾಧಕನು ಧ್ಯಾನಸಿದ್ಧನಾದಾಗ ಘಂಟೆಯ ಧ್ವನಿಯೂ ಅಂದರೆ ಅನಾಹತ ಧ್ವನಿಯೂ ಕೇಳಿಬರುತ್ತದೆ ಎಂದು ತಂತ್ರಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ರಹಸ್ಯಂ ಶ್ರೀನನಿ ವಕ್ಷಾ್ಯಮಿ ಶೈವೇಶಿ ಕಮಲಾನನೇ

ಶ್ರೀ ಚಂದ್ರಘಂಟಸ್ಯ ಕವಚಂ ಸರ್ವಸಿದ್ಧಿದಾಯಕಂ

ಬಿನಾ ನ್ಯಾಸಂ ಬಿನಾ ವಿನಿಯೋಗಂ ಬಿನಾ ಶಪೋಧ ಬಿನಾ ಹೋಮಂ

ಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನ ಸಿದ್ದಿದಾಂ

ಕೌಶಿಶ್ಯಾಂ ಕೌಟಿಲ್ಯ ವಂಚಕಾಯ ನಿಂದಕಾಯ ಚ

ನ ದಾತಾವ್ಯಂ ನ ದಾತಾವ್ಯಂ ನ ದಾತಾವ್ಯಂ ಕದಾಚಿತಂ

ದೇವಿ ಚಂದ್ರಘಂಟೆಯ ಮಂತ್ರ: ಓಂ ದೇವಿ ಚಂದ್ರಘಂಟಾಯೈ ನಮಃ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net