ಹೃದಯ ಸಮಸ್ಯೆಗೆ ನಿಸರ್ಗ ಚಿಕಿತ್ಸೆ

heart feb 17 2020
Published on

ನರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೃದಯರೋಗ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಈ ರೋಗ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರಿಗೂ ಬರಬಹುದಾದ ಕಾಯಿಲೆಯಾಗಿದೆ. ಇಂಥ ಯಾವುದೇ ರೀತಿಯಾದ ಹೃದಯ ತೊಂದರೆಗಳಿಗೆ ಶಾಶ್ವತ ಪ್ರಾಕೃತಿಕವಾದ ಚಿಕಿತ್ಸೆಯಿಂದ ಶಾಶ್ವತ ಪರಿಹಾರವನ್ನು ನಿಸರ್ಗ ಹಾರ್ಟ್​ಕೇರ್/ ವೆರಿಕೋಸ್ ವೇನ್ಸ್ ಕೇರ್​ನಲ್ಲಿ ಕಂಡುಕೊಳ್ಳಬಹುದು.

ವೈದ್ಯಲೋಕದಲ್ಲಿಯೇ ವಿಸ್ಮಯಗೊಳಿಸಬಹುದಾದ ಫಲಿತಾಂಶವನ್ನು ನಿಸರ್ಗ ಹಾರ್ಟ್​ಕೇರ್ ಔಷಧ ಸೇವನೆ ಮೂಲಕ ಕಂಡುಕೊಳ್ಳಬಹುದಾಗಿದೆ. ಹಾರ್ಟ್ ಪಂಪ್ ಕಡಿಮೆಯಾಗಿದ್ದರೆ ಅಂದರೆ (EF Value) ಕಡಿಮೆಯಾಗುತ್ತಿದ್ದರೆ ಇಲ್ಲಿನ ಔಷಧ ಹಾರ್ಟ್ ತನ್ನ ಪಂಪಿಂಗ್ ಕೆಲಸವನ್ನು ಸರಳೀಕರಣಗೊಳಿಸುವ ಶಕ್ತಿ ಹೊಂದಿರುತ್ತದೆ. ನೈಸರ್ಗಿಕವಾಗಿ ಲಭ್ಯವಾಗುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸಿರುವ ರೋಗಿಯ ದೇಹದಲ್ಲಿ ವಿಶೇಷ ರೀತಿಯಲ್ಲಿ ಸಂಜೀವಿನಿಯೋಪಾದಿಯಲ್ಲಿ ಕೆಲಸ ಮಾಡುವ ದಿವ್ಯ ಔಷಧಿ ನಿಸರ್ಗ ಹಾರ್ಟ್/ ವೆರಿಕೋಸ್ ವೇನ್ಸ್ ಕೇರ್.

ಮಾನವ ದೇಹದಲ್ಲಿನ ಅಧಿಪತಿ ಹೃದಯ. ಹೃದಯವು ಮನುಷ್ಯನ ಹುಟ್ಟಿನಿಂದ ಕೊನೆಯವರೆಗೂ ನಿರಂತರ ಕೆಲಸ ಮಾಡುತ್ತಿರುತ್ತದೆ. ಇದರ ಕಾರ್ಯದಲ್ಲಿ ಸ್ವಲ್ಪ ವ್ಯತ್ಯವಾದರೂ ದೊಡ್ಡ ಮಟ್ಟದ ಅನಾಹುತವಾಗುತ್ತದೆ. ಹಾಗಾಗಿ ಹೃದಯವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳಬೇಕಾದ ಕರ್ತವ್ಯ ಎಲ್ಲರದೂ ಆಗಿರುತ್ತದೆ. ತಲೆಯ ನೆತ್ತಿಯಿಂದ ಕಾಲಿನ ಹೆಬ್ಬೆಟ್ಟಿನವರೆಗೂ ಎಲ್ಲಿ ಬೇಕಾದರೂ ನರಗಳಲ್ಲಿ ಬ್ಲಾಕೇಜ್ ಆಗಬಹುದು. ಹೃದಯದಲ್ಲಾದರೆ Heart Blockages, , ಸೊಂಟದ ಕೆಳಭಾಗದಲ್ಲಾದರೆ ವೆರಿಕೋಸ್ ವೇನ್ಸ್, ಕಾಲಿನ ರಕ್ತನಾಳ Blockageನಿಂದ ಪಾದಗಳು ಕಪ್ಪು ಬಣ್ಣಕ್ಕೆ ತಿರುಗಿ ಚಿಕ್ಕ ಚಿಕ್ಕ ಬಣ್ಣದ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಕಾಲುಗಳು ರಕ್ತ ಚಲನೆಯಿಲ್ಲದೆ ನರಗಳಲ್ಲಿ ಊತ ಕಾಣಿಸಿಕೊಂಡು ಮುಂದೊಂದು ದಿನ ಗ್ಯಾಂಗ್ರೀನ್ ಸಮಸ್ಯೆ ಕಾಣಿಸಿಕೊಳ್ಳಲಿದೆ. ಈ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರು ಗ್ಯಾಂಗ್ರೀನ್ ಸೋಂಕಿದ ಭಾಗವನ್ನು ತೆಗೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ ಇಲ್ಲಿ ಕೊಡುವ ಔಷಧ ಸೇವನೆ ಮಾಡಿದರೆ ಈ ಎಲ್ಲ ರೋಗಗಳಿಗೂ ಅಂತ್ಯ ಕಾಣಿಸಬಹುದಾಗಿದೆ.

ಈ ನಿಸರ್ಗದತ್ತವಾದ ಔಷಧ ತಯಾರಿಸಲು ಕಳೆದೆರಡು ದಶಕಗಳಿಂದಲೂ ಪಟ್ಟಿರುವ ಪರಿಶ್ರಮ ಹೇಳತೀರದು. ಮನುಷ್ಯನ ದೇಹ ವಾತ, ಪಿತ್ತ, ಕಫದಿಂದ ಕೂಡಿರುತ್ತದೆ. ಇದೆಲ್ಲ ವ್ಯಕ್ತಿಯ ದೇಹದಲ್ಲಿ ವ್ಯತಿರಿಕ್ತವಾಗಿ ಕಾಡಿದಾಗ ಹಲವಾರು ರೋಗ ಲಕ್ಷಣಗಳು ಉದ್ಬವಿಸುತ್ತವೆ ಎಂಬ ಅಂಶವನ್ನು ಮನಗಂಡ ಡಾ|| ವಿ.ಅಶೋಕ್ ಕುಮಾರ್​ರವರು ಗಿಡಮೂಲಿಕೆ ಔಷಧ ಸಂಶೋಧಿಸಿ ಮೆಟಲ್, ಸ್ಟಿರಾಯಿಡ್ ಹಾಗೂ ಕೆಮಿಕಲ್ ಬಳಕೆ ಮಾಡದೆ ಗುಣಮಟ್ಟದ ಹಾಗೂ ದೇಹದಲ್ಲಿ ಅಡ್ಡಪರಿಣಾಮ ಬೀರದಂತಹ ಔಷಧವನ್ನು ನಿಸರ್ಗದಲ್ಲಿ ದೊರೆಯುವ ವಸ್ತುಗಳನ್ನು ಬಳಸಿ ತಯಾರಿಸಲಾಗಿರುತ್ತದೆ ಎಂಬುದು ಬಹುಮುಖ್ಯವಾದ ಅಂಶ. ಈ ರೋಗಗಳ ನಿಯಂತ್ರಣಕ್ಕೆ ಸರಿಯಾದ ಆಹಾರ ಪದ್ದತಿ ಅನುಸರಿಸುವುದನ್ನು ರೂಢಿಸಿಕೊಳ್ಳಬೇಕು. ಸೊಪ್ಪುಗಳು, ತರಕಾರಿಗಳು, ಮೊಳಕೆ ಕಾಳುಗಳನ್ನು ಹೆಚ್ಚು ಉಪಯೋಗ ಮಾಡಬೇಕು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಬೇಕು. ಬೆಳಗ್ಗೆ ಅರ್ಧ ಗಂಟೆ ವಾಕಿಂಗ್ ಮತ್ತು free Hand exercise ಮಾಡುತ್ತಿದ್ದರೆ ಯಾವುದೇ ರೋಗಗಳನ್ನು ನಿಯಂತ್ರಣದಲ್ಲಿಡುವುದರಲ್ಲಿ ಸಂದೇಹವೇ ಇಲ್ಲ. ಅಡುಗೆಗೆ ಬಳಸುವ ಎಣ್ಣೆ ಮತ್ತು ಕೊಲೆಸ್ಟ್ರಾಲ್ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಡಾ|| ವಿ. ಅಶೋಕ್ ಕುಮಾರ್. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಸಂಶೋಧನೆ ಮಾಡಿರುವ ಔಷಧ ಇಂದು ಇಡೀ ಪ್ರಪಂಚದಲ್ಲೇ ಮೊಟ್ಟ ಮೊದಲನೆಯದಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net