ಜುಬೀನ್ ಗಾರ್ಗ್ ಸಾವು ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿರುವ ಅಸ್ಸಾಂ ಸರ್ಕಾರ | Zubeen Garg

ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಿದೆ ಎಂದು ಭಾನುವಾರ(ಅ. 18) ವರದಿಯಾಗಿದೆ.
Untitled design (61)
Published on: 

ಗುವಾಹಟಿ: ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಿದೆ ಎಂದು ಭಾನುವಾರ(ಅ. 18) ವರದಿಯಾಗಿದೆ.

ಗಾಯಕನ ಸೋದರಸಂಬಂಧಿ ಸಂದೀಪನ್ ಗಾರ್ಗ್ ಮತ್ತು ಸಹ-ಗಾಯಕ ಅಮೃತಪ್ರವ ಮಹಾಂತ ಅವರಿಗೆ ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ. ಈ ಕುರಿತು ಮಾತನಾಡಿರುವ ಅಸ್ಸಾಂ ಪೊಲೀಸ್ ವಿಶೇಷ ಮಹಾನಿರ್ದೇಶಕ (ಸಿಐಡಿ) ಮತ್ತು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಮುನ್ನಾ ಪ್ರಸಾದ್ ಗುಪ್ತಾ, ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನೀಡಲಾದ ಜಾಮೀನನ್ನು ಸಿಐಡಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಿದೆ ಎಂದು ಹೇಳಿದ್ದಾರೆ.

ತನಿಖಾ ಸಂಸ್ಥೆಯು ನ್ಯಾಯಾಲಯದ ಜಾಮೀನು ಆದೇಶಗಳನ್ನು ಪರಿಶೀಲಿಸಿದೆ. ಮತ್ತು ಅವುಗಳನ್ನು ಪ್ರಶ್ನಿಸಲು ನಿರ್ಧರಿಸುವ ಮೊದಲು ಕಾನೂನು ಅಭಿಪ್ರಾಯವನ್ನು ಕೋರಿದೆ. ರಜಾದಿನಗಳ ನಂತರ ನ್ಯಾಯಾಲಯಗಳು ಮತ್ತೆ ತೆರೆದ ತಕ್ಷಣ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

Also Read
ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ! ಕೊದಲೆಳೆ ಅಂತರದಲ್ಲಿ ಪಾರಾದ ಬಾಲಿವುಡ್​ ಸ್ಟಾರ್​ಗೆ​ ಬಿಷ್ಣೋಯಿ ಗ್ಯಾಂಗ್ ಎಚ್ಚರಿಕೆ | Tiger Shroff
Untitled design (61)

ಆರೋಪಿಗಳ ವಿರುದ್ಧದ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅವಲೋಕನಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ತನಿಖಾ ಸಂಸ್ಥೆ ಜಾಮೀನು ಆದೇಶಗಳನ್ನು ಪ್ರಶ್ನಿಸಲು ನಿರ್ಧರಿಸಿದೆ ಎಂದು ಪುನರುಚ್ಚರಿಸಿದ್ದಾರೆ.

ತನಿಖೆಯ ಪ್ರಗತಿಯ ಕುರಿತು ಮಾತನಾಡಿರುವ ಅವರು, 2025ರಲ್ಲಿ ಸಿಐಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಇದೀಗ ನಿಗದಿತ ತ್ವರಿತ ನ್ಯಾಯಾಲಯದಲ್ಲಿ ಪ್ರತಿದಿನ ವಿಚಾರಣೆ ನಡೆಯುತ್ತಿದೆ. 134 ಸಾಕ್ಷಿಗಳನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net