ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ! ಕೊದಲೆಳೆ ಅಂತರದಲ್ಲಿ ಪಾರಾದ ಬಾಲಿವುಡ್​ ಸ್ಟಾರ್​ಗೆ​ ಬಿಷ್ಣೋಯಿ ಗ್ಯಾಂಗ್ ಎಚ್ಚರಿಕೆ | Tiger Shroff

ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕಿಡಿಗೇಡಿಗಳು ಟೈಗರ್​ ಶ್ರಾಫ್​ಗೆ ಎಚ್ಚರಿಕೆ ಕೂಡ ನೀಡಿದ್ದಾರೆ ಎಂದು ವರದಿಯಾಗಿದೆ.
ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ! ಕೊದಲೆಳೆ ಅಂತರದಲ್ಲಿ ಪಾರಾದ ಬಾಲಿವುಡ್​ ಸ್ಟಾರ್​ಗೆ​ ಬಿಷ್ಣೋಯಿ ಗ್ಯಾಂಗ್ ಎಚ್ಚರಿಕೆ | Tiger Shroff
Published on: 

ಮುಂಬೈ: ಬಾಲಿವುಡ್ ಚಿತ್ರರಂಗದ ಸ್ಟಾರ್​ ಹೀರೋ ಟೈಗರ್ ಶ್ರಾಫ್‌ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್​ ನಟ ಸಣ್ಣ-ಪುಟ್ಟ ಗಾಯಗಳಿಂದ ಪವಾಡ ಸದೃಶ್ಯದಂತೆ ಬದುಕುಳಿದ ಘಟನೆ ಜುಹು ಪ್ರದೇಶದಲ್ಲಿ ವರದಿಯಾಗಿದೆ.

ಇದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ ನಡೆಸಿರುವ ದಾಳಿ ಎನ್ನಲಾಗಿದ್ದು, ಶ್ರಾಫ್​ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿನ ಮೇಲೆ ಮೂರು ಸುತ್ತಿನ ಗುಂಡು ಹಾರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕಿಡಿಗೇಡಿಗಳು ಟೈಗರ್​ ಶ್ರಾಫ್​ಗೆ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಜುಹು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿರುವುದು ನಿಜ ಎಂದಿರುವ ಮುಂಬೈ ಪೊಲೀಸರು, ಟೈಗರ್ ಶ್ರಾಫ್‌ ಅವರಿಗೆ ಯಾವುದೇ ಗುಂಡೇಟು ಬಿದ್ದಿಲ್ಲ. ಅವರೊಂದಿಗೆ ಕಾರಿನಲ್ಲಿದ್ದ ಉಳಿದ ಮೂವರಲ್ಲಿ ಚಾಲಕನಿಗೆ ಗಾಯಗಳಾಗಿವೆ. ನಟನಿಗೆ ಗುಂಡೇಟು ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಡಿಸಿಪಿ ಮೋಹಿತ್ ಗಾರ್ಗ್ ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್​ನ ಹಿರಿಯ ನಟ ಸಲ್ಮಾನ್​ ಖಾನ್​ ಜತೆ ಕೆಲಸ ಮಾಡುತ್ತಿದ್ದಾರೆ, ನಮ್ಮ ಮಾತುಗಳನ್ನು ಕೇಳುತ್ತಿಲ್ಲ. ನಾವು ಹಾಕಿರುವ ಕಂಡೀಷನ್​ಗಳನ್ನು ಪಾಲನೆ ಮಾಡುತ್ತಿಲ್ಲ. ಇದೇ ನಮ್ಮ ಕೊನೆಯ ಎಚ್ಚರಿಕೆ ಎಂದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನ ಅನಿಲ್​ ಪಂಡಿತ್​​, ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ವಿಡಿಯೋ ಹರಿಬಿಟ್ಟು ಘಟನೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಗುಂಡು ಹಾರಿಸಿದವರು ನಾನು ಮತ್ತು ಹರ್ಮನ್​ ಸಂದು ಎಂದು ಹೇಳಿಕೊಂಡಿರುವುದು ಸದ್ಯ ಬಾಲಿವುಡ್​ ಅಂಗಳದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಬಾಲಿವುಡ್​ನ ಮತ್ತೊಬ್ಬ ಹಿರಿಯ ನಟ ಜಾಕಿ ಶ್ರಾಫ್​ ಅವರ ಪುತ್ರ ಟೈಗರ್ ಶ್ರಾಫ್​ ಮೇಲೆ ಬಿಷ್ಣೋಯಿ ಗ್ಯಾಂಗ್​ ದಾಳಿ ನಡೆಸಲು ಸಲ್ಮಾನ್​ ಖಾನ್​ ಮೇಲಿನ ದ್ವೇಷ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಹಿಂದೆ, ಜಾಕಿ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ಸಲ್ಮಾನ್​ ನಟಿಸಿದ್ದು, ಈಗ ಅವರ ಪುತ್ರನ ಚಿತ್ರಗಳಿಗೆ ಸಾಥ್​ ನೀಡುತ್ತಿರುವುದೇ ಈ ಭೀಕರ ದಾಳಿಗೆ ಕಾರಣವಿರಬಹುದು ಎನ್ನಲಾಗಿದೆ. ಇದಕ್ಕೂ ಮೊದಲು, ಖಾನ್​ ಮನೆ ಮೇಲೆ ಗುಂಡಿನ ದಾಳಿ ನಡೆಸಿರುವ ಲಾರೆನ್ಸ್​ ಗ್ಯಾಂಗ್​, ಈಗ ಸಲ್ಮಾನ್​ ಆಪ್ತರನ್ನು ಟಾರ್ಗೆಟ್​ ಮಾಡಿರುವುದು ಸದ್ಯ ಚಿತ್ರರಂಗದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net