ಬಸ್​ನಲ್ಲಿ ಅಸಭ್ಯಕರ ಟಚ್​ ಮಾಡ್ತಿದ್ದಾರೆಂದು ರೆಕಾರ್ಡ್​ ಮಾಡಿ ವಿಡಿಯೋ ಪೋಸ್ಟ್​ ಮಾಡಿದ ಯುವತಿ: ವ್ಯಕ್ತಿ ಆತ್ಮಹತ್ಯೆ | Suicide

ಮೃತ ದೀಪಕ್
ಮೃತ ದೀಪಕ್
Published on
ತಿರುವನಂತಪುರಂ: ಬಸ್​ವೊಂದರಲ್ಲಿ ಪ್ರಯಾಣಿಸುವಾಗ ಯುವತಿಯೊಬ್ಬಳು ಮುಂದಿರುವ ವ್ಯಕ್ತಿಯೊಬ್ಬ ತನ್ನನ್ನು ಉದ್ದೇಶಪೂರ್ವಕವಾಗಿ ಮುಟ್ಟುತ್ತಿದ್ದಾನೆ ಎಂದು ಭಾವಿಸಿ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ವಿಡಿಯೋದಲ್ಲಿದ್ದ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಸೋಮವಾರ(ಜ. 19) ವರದಿಯಾಗಿದೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಗೋವಿಂದಪುರಂನ ದೀಪಕ್ (42) ಎಂಬ ವ್ಯಕ್ತಿ ಶುಕ್ರವಾರ (ಜನವರಿ 16) ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದೆ ಇದ್ದ ಯುವತಿಯೊಬ್ಬಳು ತನ್ನನ್ನು ಉದ್ದೇಶಪೂರ್ವಕವಾಗಿ ಅಸಭ್ಯಕರವಾಗಿ ದೀಪಕ್ ಮುಟ್ಟುತ್ತಿದ್ದಾನೆ ಎಂದು ಭಾವಿಸಿ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ಯುವತಿಯನ್ನು ಸ್ಪರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುಮಾರು 20 ಲಕ್ಷ ವೀಕ್ಷಣೆ ಕಂಡು ಭಾರಿ ವೈರಲ್ ಆಗಿದೆ. ಇದರಿಂದ ಮನನೊಂದ, ತಮ್ಮ ಮರ್ಯಾದೆ ಹಾಳಾಗಿದೆ ಎಂದು ಭಾವಿಸಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ದೀಪಕ್ ನನ್ನು ಎಬ್ಬಿಸಲು ಕುಟುಂಬಸ್ಥರು ಪ್ರಯತ್ನಿಸಿದಾಗ ಬಹಳ ಹೊತ್ತು ಬಾಗಿಲು ತೆರೆಯದ ಕಾರಣ, ಬಾಗಿಲು ಒಡೆದು ಒಳಗೆ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ. ಯುವತಿ ಪೋಸ್ಟ್ ಮಾಡಿದ ವಿಡಿಯೋದಿಂದಲೇ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಸದಸ್ಯರು ಮತ್ತು ಆಪ್ತರು ಆರೋಪಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net