ಮಾತುಕತೆಯ ಸಂದರ್ಭದಲ್ಲಿ ಆ ವ್ಯಕ್ತಿಯು ತನ್ನ ವಿಚಿತ್ರ ನಿಬಂಧನೆಗಳನ್ನು ಸಮರ್ಥಿಸಿಕೊಳ್ಳುತ್ತಾ, 'ಹಲವು ಪ್ರೇಮ ಸಂಬಂಧಗಳನ್ನು ಹೊಂದಿರುವ ಮಹಿಳೆಯರು ಭವಿಷ್ಯದಲ್ಲಿ ನಂಬಿಕೆ ದ್ರೋಹ ಮಾಡುವ ಸಾಧ್ಯತೆ ಹೆಚ್ಚು' ಎಂದು ಯಾವುದೋ ಸಂಶೋಧನೆಯನ್ನು ಉಲ್ಲೇಖಿಸಿದ್ದಾನೆ. ಆದರೆ, ಮ್ಯಾಚ್ಮೇಕರ್ ಓಂದ್ರಿಲಾ ಅವರು ಸ್ವತಃ ವಿಚ್ಛೇದಿತನಾಗಿರುವ ನಿಮಗೆ ಇಂತಹ ನಿಬಂಧನೆಗಳು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಿಮ್ಮ ನಿಯಮ ಎರಡೂ ಕಡೆ ಅನ್ವಯಿಸಬೇಕಲ್ಲವೇ ಎಂದು ಕೇಳಿದಾಗ, ಆತ ಆ ಹೋಲಿಕೆಯನ್ನೇ ತಿರಸ್ಕರಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ನಡೆಗೆ ಸಮರ್ಥನೆಯಾಗಿ "ಯಾಕೆಂದರೆ ನಾನು ಪುರುಷ" ಎಂಬ ಹಾರಿಕೆಯ ಉತ್ತರ ನೀಡಿದ್ದಾನೆ. ಆತನ ಈ ಬೇಜವಾಬ್ದಾರಿಯುತ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಆತನ ಸಂಕುಚಿತ ಮನೋಭಾವವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.