ಹೌದು, ಬಾಲಿವುಡ್ ಹಂಗಾಮಾ ವರದಿ ಮಾಡಿರುವಂತೆ, 'ಧುರಂಧರ್' ಚಿತ್ರದ ನಿರ್ಮಾಪಕರಾದ ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಅವರು ರಾಕೇಶ್ ಬೇಡಿ ಅವರಿಗೆ 1 ಕೋಟಿ ರೂಪಾಯಿಗಳ ಬೋನಸ್ ಚೆಕ್ ನೀಡಿದ್ದಾರೆ. ಜಮೀಲ್ ಜಮಾಲಿ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಅಪಾರ ಜನಪ್ರಿಯತೆ ಗಳಿಸಿದ ಬೇಡಿ ಅವರ ಶ್ರಮಕ್ಕೆ ಮೆಚ್ಚುಗೆಯಾಗಿ ಈ ಸಂಭಾವನೆಯನ್ನು ನೀಡಲಾಗಿದೆ. ಅವರ ಸಂಭಾಷಣೆಗಳು ಮೀಮ್ ಲೋಕದಲ್ಲಿ ಅಮರವಾಗಿದ್ದು, ಚಿತ್ರದ ಸೀಕ್ವೆಲ್ನಲ್ಲಿ ಅವರ ಪಾತ್ರ ನೀಡಿದ ಟ್ವಿಸ್ಟ್ ಪ್ರೇಕ್ಷಕರ ಮೇಲೆ ಬೀರಿದ ಪ್ರಭಾವವನ್ನು ಪರಿಗಣಿಸಿ, ನಿರ್ಮಾಪಕರು ಈ ಕೃತಜ್ಞತಾ ಪೂರ್ವಕ ಉಡುಗೊರೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.