ಪಂದ್ಯದ ನಂತರ ಪಿಚ್ ಕುರಿತ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್ ಪಾಂಡ್ಯ, ಸೋಲಿಗೆ ಪಿಚ್ ಬದಲಾವಣೆಯ ನೆಪ ನೀಡದೆ ಮುಕ್ತವಾಗಿ ಸೋಲನ್ನು ಒಪ್ಪಿಕೊಂಡರು. ಸಿಎಸ್‌ಕೆ ಉತ್ತಮವಾಗಿ ಬ್ಯಾಟಿಂಗ್ ಮಾಡಿ 207 ರನ್ ಗಳಿಸಿತು ಮತ್ತು ಅದೇ ಪಿಚ್‌ನಲ್ಲಿ ನಾವು ಉತ್ತಮವಾಗಿ ಆಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಹಾರ್ದಿಕ್ ಅವರ ಈ ಹೇಳಿಕೆ ಅವರ ಪ್ರಬುದ್ಧತೆಯನ್ನು ನೆನಪಿಸುತ್ತದೆ. ಬೌಲಿಂಗ್‌ನಲ್ಲಿ ಮುಂಬೈ ಪರ ಅಲ್ಲಾ ಗಜನ್ಫರ್ 25 ರನ್‌ಗಳಿಗೆ 2 ವಿಕೆಟ್ ಪಡೆದು ಗಮನ ಸೆಳೆದರೆ, ಚೆನ್ನೈ ತಂಡದ ಸ್ಪಿನ್ನರ್ ಅಕೀಲ್ ಹೊಸೈನ್ ಕೇವಲ 17 ರನ್‌ಗಳಿಗೆ 4 ವಿಕೆಟ್ ಕಬಳಿಸುವ ಮೂಲಕ ಮುಂಬೈ ಬ್ಯಾಟಿಂಗ್ ಬೆನ್ನೆಲುಬು ಮುರಿದರು.