ಇಡೀ ಭಾರತ ಹುಡುಕಿದ್ರೂ ಅವಳಂತಹ ಮತ್ತೊಬ್ಬ ಸೀತೆ ಕಾಣಲು ಸಾಧ್ಯವಿಲ್ಲ: ಸಾಯಿ ಪಲ್ಲವಿಯನ್ನು ಸಮರ್ಥಿಸಿಕೊಂಡ ಧನುಷ್ | Dhanush

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಭರ್ಜರಿ ಪ್ರರ್ದಶನ ಕಾಣುತ್ತಿದೆ. ಆದ್ರೆ ಸೀತಾ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ನಟನೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಆ ಪಾತ್ರಕ್ಕೆ ಹೊಂದಿಕೆಯಾಗಲ್ಲ ಎಂದು ಟ್ರೋಲ್ ಮಾಡಿದ್ದರು. ಆದ್ರೆ ಈಗ ತಮಿಳು ಖ್ಯಾತ ನಟ ಧನುಷ್ ಸಾಯಿ ಪಲ್ಲವಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಡೀ ಭಾರತ ಹುಡುಕಿದ್ರೂ ಅವಳಂತಹ ಮತ್ತೊಬ್ಬ ಸೀತೆ ಕಾಣಲು ಸಾಧ್ಯವಿಲ್ಲ: ಸಾಯಿ ಪಲ್ಲವಿಯನ್ನು ಸಮರ್ಥಿಸಿಕೊಂಡ ಧನುಷ್ | Dhanush
Published on: 

Dhanush: ಇತ್ತೀಚೆಗೆ ಬಿಡುಗಡೆಯಾಗಿರುವ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಭರ್ಜರಿ ಪ್ರರ್ದಶನ ಕಾಣುತ್ತಿದೆ. ಆದ್ರೆ ಸೀತಾ ಪಾತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ನಟನೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಆ ಪಾತ್ರಕ್ಕೆ ಹೊಂದಿಕೆಯಾಗಲ್ಲ ಎಂದು ಟ್ರೋಲ್ ಮಾಡಿದ್ದರು. ಆದ್ರೆ ಈಗ ತಮಿಳು ಖ್ಯಾತ ನಟ ಧನುಷ್ ಸಾಯಿ ಪಲ್ಲವಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ' ಓಂ' ಪ್ರಿ ರೀಲಿಸ್ ಇವೆಂಟ್​ನಲ್ಲಿ ಸಾಯಿ ಪಲ್ಲವಿ ಅವರನ್ನು ನಟ ದನುಷ್ ಹೊಗಳಿದ್ದು, ಇಡೀ ಭಾರತದಾದ್ಯಂತ ಹುಡುಕಿದರೂ ಅವಳಂತಹ ಸೀತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೀತೆಯ ಪಾತ್ರದಲ್ಲಿ ಆಕೆಯ ಅಭಿನಯದ ಬಗ್ಗೆ ಸಾಕಷ್ಟು ಚರ್ಚೆಗಳು, ಮಾತುಕತೆಗಳು ನಡೆಯುತ್ತಿವೆ. ಇದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ಚಿತ್ರೀಕರಣದ ನಡುವಿನ ವಿರಾಮದ ಸಮಯದಲ್ಲೂ ಆಕೆ ಸದಾ ಪ್ರಾರ್ಥನೆಯಲ್ಲಿ ನಿರತಳಾಗಿರುತ್ತಿದ್ದಳು. ಇಡೀ ಭಾರತವನ್ನೇ ಹುಡುಕಿದರೂ, ಆಕೆಯಂತಹ ಮತ್ತೊಬ್ಬ ಸೀತೆಯನ್ನು ನೀವು ಕಾಣಲು ಸಾಧ್ಯವಿಲ್ಲ. ಆಕೆ ದೇವರೆಡೆಗೆ ಅಪಾರ ಭಕ್ತಿ ಮತ್ತು ಅತ್ಯಂತ ಶುದ್ಧ ಹೃದಯವನ್ನು ಹೊಂದಿರುವ ವ್ಯಕ್ತಿ. ಆಕೆ ನೋಡಲು ಬಹಳ ಸುಂದರವಾಗಿದ್ದಾಳೆ ಮತ್ತು ಅದ್ಭುತ ನಟಿಯೂ ಹೌದು ಎಂದಿದ್ದಾರೆ.

Also Read
ಬಾಂಗ್ಲಾಕ್ಕೆ ಮರುಳುವ ಮೊದಲ ಹೆಜ್ಜೆ: ಹೊಸ ಪಾಸ್​ಪೋರ್ಟ್, ಐಡಿಗೆ ಅರ್ಜಿ ಸಲ್ಲಿಸಿದ ಶೇಖ್ ಹಸೀನಾ | Sheikh Hasina
ಇಡೀ ಭಾರತ ಹುಡುಕಿದ್ರೂ ಅವಳಂತಹ ಮತ್ತೊಬ್ಬ ಸೀತೆ ಕಾಣಲು ಸಾಧ್ಯವಿಲ್ಲ: ಸಾಯಿ ಪಲ್ಲವಿಯನ್ನು ಸಮರ್ಥಿಸಿಕೊಂಡ ಧನುಷ್ | Dhanush

ಮುಂದುವರೆದು, ನಾನು ಮಾರಿ 2 ಸಮಯದಲ್ಲಿ ಸಾಯಿ ಪಲ್ಲವಿಯನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರು ತುಂಬಾ ಮುಗ್ಧರಾಗಿದ್ದರು ಮತ್ತು ತುಂಬಾ ಕಡಿಮೆ ಮಾತನಾಡುತ್ತಿದ್ದರು. ಏನನ್ನಾದರೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸುತ್ತಿದ್ದರು ಮತ್ತು ಮಾತನಾಡಲು ಹಿಂಜರಿಯುತ್ತಿದ್ದರು. ಈಗ ಒಂಬತ್ತು ವರ್ಷಗಳ ಬಳಿಕ ನೋಡಿದಾಗ ಅವರು ತುಂಬಾ ಬದಲಾಗಿದ್ದಾರೆ. ಸಿನಿಮಾವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡಂತಿದ್ದಾರೆ. ಅವರ ಮಾತು, ನಡಿಗೆ ಮತ್ತು ಹಾವಭಾವ ಎಲ್ಲವೂ ಅಪಾರ ಆತ್ಮವಿಶ್ವಾಸ, ಘನತೆ ಎದ್ದು ಕಾಣುತ್ತಿತ್ತು ಎಂದು ಹೊಗಳಿದ್ದಾರೆ.

ಮಾರಿ-2 ಚಿತ್ರದ ಬಳಿಕ ನಟ ಧನುಷ್ಯ ಜೊತೆ ಎರಡನೇ ಬಾರಿ ಸಾಯಿ ಪಲ್ಲವಿ ಓಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು, ಶ್ರೀಗಂಧದ ಮರದ ಅಕ್ರಮ ವ್ಯಾಪಾರದ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಿಬಿಐ ಅಧಿಕಾರಿ ನಿತ್ಯಾ ರೆಡ್ಡಿ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ. ಮಲಯಾಳಂ ನಟ ಮುಮ್ಮಟ್ಟಿಯೂ ಚಿತ್ರದಲ್ಲಿ ನಟಿಸಿದ್ದಾರೆ (ಏಜೆನ್ಸೀಸ್).