

ಕುರ್ಚಿಯ ಮೇಲೆ ಕುಳಿತಿದ್ದ ಸೆಕ್ಯುರಿಟಿ ಗಾರ್ಡ್ ಬಳಿ ಹೋಗಿ ಆಕೆ ಒದೆಯಲು ಮುಂದಾಗಿದ್ದಾರೆ. ಇನ್ನೊಬ್ಬ ಗಾರ್ಡ್‌ಗೂ ಕೈಯಿಂದ ಹೊಡೆದಿರುವುದು ವಿಡಿಯೋನಲ್ಲಿ ಸೆರೆಯಾಗಿದೆ. ನೀವೆಲ್ಲ ನಮ್ಗೆ ಸರಿ ಸಮಾನರಲ್ಲ, ನನ್ನ ಬೂಟು ಸ್ವಚ್ಛಗೊಳಿಸೋದಕ್ಕೂ ನೀವು ಯೋಗ್ಯರಲ್ಲ ಎಂದು ಗಾರ್ಡ್‌ಗಳನ್ನು ಕೀಳಾಗಿ ಕಾಣುವಂತೆ ಮಾತನಾಡಿದ್ದಾರೆ. ಯಾರಿಗೆ ಬೇಕಾದರೂ ಕಾಲ್ ಮಾಡಿ ಕರೆಯಿಸಿ, ಪೊಲೀಸರನ್ನು ಕರೆದರೂ ನನಗೆ ಭಯವಿಲ್ಲ ಎಂದು ಗಾರ್ಡ್‌ಗಳಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.