ಇದೇ ವೇಳೆ ಕಿಡಿಗೇಡಿಗಳ ವಿರುದ್ಧದ ಈ ತ್ವರಿತ ಕ್ರಮವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಅವರಿಗೂ ಒಂದು ಖಡಕ್ ಸಲಹೆ ನೀಡಿದ್ದಾರೆ. ಅಖಿಲೇಶ್ ಜೀ, ನೀವು ಇತರರಿಗೆ ಸಲಹೆ ನೀಡುತ್ತೀರಿ, ಆದರೆ ನಿಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರು ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಹಿರಿಯ ನಾಯಕರ ವಿರುದ್ಧ ಬಳಸುವ ಭಾಷೆಯ ಮೇಲೆಯೂ ನಿಗಾ ಇಡಬೇಕು. ಮೊದಲು ನಿಮ್ಮ ಜನರಿಗೆ ಸಂಸ್ಕಾರ ಕಲಿಸಿ, ಅವರಿಗೆ ಅರ್ಥಮಾಡಿಸುವುದು ಒಳ್ಳೆಯದು, ಒಂದು ವೇಳೆ ಅವರಿಗೆ ಅರ್ಥವಾಗದಿದ್ದರೆ ಅವರನ್ನು ನಮಗೆ ಒಪ್ಪಿಸಿ, ನಾವು ಅವರಿಗೆ ಸರಿಯಾದ ರೀತಿಯಲ್ಲೇ ಅರ್ಥಮಾಡಿಸುತ್ತೇವೆ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಕಾರ್ಯಕರ್ತರ ವರ್ತನೆ ಹಾಗೂ ಗೂಂಡಾ ಸಂಸ್ಕೃತಿಗೆ ಸಿಎಂ ಯೋಗಿ ತೀಕ್ಷ್ಣವಾಗಿ ಟಾಂಗ್ ನೀಡಿದ್ದಾರೆ, (ಏಜೆನ್ಸೀಸ್).