ಜಗತ್ತು ಹೊಸ ವ್ಯವಸ್ಥೆಗೆ ಹುಡುಕುತ್ತಿದ್ರೆ, ಕೆಲವರು ಅವ್ಯವಸ್ಥೆಯ ಕನಸು ಕಾಣ್ತಿದ್ದಾರೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಕಿಡಿ | PM Modi

ದೇಶದಲ್ಲಿ ಎಸ್​ಐಆರ್ ವಿರೋಧಿ ಪ್ರತಿಭಟನೆ ಮತ್ತು ಆಡಳಿತ ಬದಲಾವಣೆ ಬಗ್ಗೆ ವಿಪಕ್ಷಗಳು ಚರ್ಚೆ ನಡೆಸುತ್ತಿರುವ ಹೊತ್ತಿನಲ್ಲಿ ಜಗತ್ತು ಹೊಸ ವ್ಯವಸ್ಥೆಗಾಗಿ ಹುಡುಕುತ್ತಿದ್ದರೆ, ದೇಶದಲ್ಲಿ ಕೆಲವರು ಅವ್ಯವಸ್ಥೆಯ ಕನಸು ಕಾಣುತ್ತಿದ್ದಾರೆ ಎಂದು ಗುರುವಾರ(ಅ. 22) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
Published on: 

ನವದೆಹಲಿ: ದೇಶದಲ್ಲಿ ಎಸ್​ಐಆರ್ ವಿರೋಧಿ ಪ್ರತಿಭಟನೆ ಮತ್ತು ಆಡಳಿತ ಬದಲಾವಣೆ ಬಗ್ಗೆ ವಿಪಕ್ಷಗಳು ಚರ್ಚೆ ನಡೆಸುತ್ತಿರುವ ಹೊತ್ತಿನಲ್ಲಿ ಜಗತ್ತು ಹೊಸ ವ್ಯವಸ್ಥೆಗಾಗಿ ಹುಡುಕುತ್ತಿದ್ದರೆ, ದೇಶದಲ್ಲಿ ಕೆಲವರು ಅವ್ಯವಸ್ಥೆಯ ಕನಸು ಕಾಣುತ್ತಿದ್ದಾರೆ ಎಂದು ಗುರುವಾರ(ಅ. 22) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

2026ರ ಎನ್‌ಡಿಟಿವಿ ವರ್ಲ್ಡ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಎಷ್ಟು ಕಾಲದವರೆಗೆ ಒಂದು ವಿಫಲ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಿದ್ದಾರೆ.

Also Read
ನಾಮಿನೇಷನ್ ವೇಳೆ ಗಲಾಟೆ, ಹಿಂಸಾಚಾರ, ನಾಮಪತ್ರ ಕಸಿಯುವಿಕೆ: ಆಂಧ್ರದಲ್ಲಿ ಪುರಸಭೆಗಳ ಚುನಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ | Andhra Pradesh
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷವನ್ನು ಪರಾವಲಂಬಿ ಎಂದು ಬಣ್ಣಿಸಿದ ಅವರು, ಕಾಂಗ್ರೆಸ್ ಇತರರನ್ನು ಪ್ರಗತಿ ಹೊಂದಲು ಬಿಡದ ಒಂದು ಪರಾವಲಂಬಿ ಪಕ್ಷವಾಗಿದೆ. ಅಧಿಕಾರ ಕಳೆದುಕೊಂಡ ಬಳಿಕ ದ್ರಾಕ್ಷಿ ಸಿಗದೆ ಅದು ಹುಳಿ ಎಂದು ಹೇಳಿದಂತೆ, ಕಾಂಗ್ರೆಸ್ ಈಗ ದ್ರಾಕ್ಷಿ ಬಳ್ಳಿಯನ್ನೇ ನಾಶಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಡೀ ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿರುವಾಗ, ಕೆಲವರು ಭಾರತದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಲು ಕನಸು ಕಾಣುತ್ತಿದ್ದಾರೆ. ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಅವ್ಯವಸ್ಥೆಯಿರುವಾಗ ಭಾರತ ಹೊಸದಾಗಿ ಬಲವಾದ ಚಿತ್ರವಣವನ್ನು ಜಗತ್ತಿನ ಮುಂದಿಡಬೇಕು. ಆದ್ರೆ, ಇವರು ದೇಶದ ಘನತೆಯನ್ನು ಹಾಳುಮಾಡುವುದರಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ. ವಿದೇಶಗಳಿಗೆ ಹೋಗಿ ಭಾರತವನ್ನು ಅವಹೇಳನ ಮಾಡುತ್ತಾರೆ. ವಿದೇಶಿಯರನ್ನು ಮಧ್ಯಪ್ರವೇಶಿಸುವಂತೆ ಕೋರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net