ನಾಮಿನೇಷನ್ ವೇಳೆ ಗಲಾಟೆ, ಹಿಂಸಾಚಾರ, ನಾಮಪತ್ರ ಕಸಿಯುವಿಕೆ: ಆಂಧ್ರದಲ್ಲಿ ಪುರಸಭೆಗಳ ಚುನಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ | Andhra Pradesh

ಆಂಧ್ರ ಪ್ರದೇಶದಲ್ಲಿ ಆರಂಭವಾಗಿದ್ದ ಪುರಸಭೆಗಳ ಚುನಾವಣೆಯ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಗಲಾಟೆ, ಹಿಂಸಾಚಾರ ಹಾಗೂ ನಾಮಪತ್ರ ಕಸಿಯುವ ಘಟನೆಗಳು ಜರುಗಿದ ಹಿನ್ನೆಲೆ ರಾಜ್ಯ ಚುನಾವಣೆಯೂ ಚುನಾವಣೆಗೆ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದೆ.
ನಾಮಿನೇಷನ್ ವೇಳೆ ಗಲಾಟೆ, ಹಿಂಸಾಚಾರ, ನಾಮಪತ್ರ ಕಸಿಯುವಿಕೆ: ಆಂಧ್ರದಲ್ಲಿ ಪುರಸಭೆಗಳ ಚುನಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ | Andhra Pradesh
Published on: 

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಆರಂಭವಾಗಿದ್ದ ಪುರಸಭೆಗಳ ಚುನಾವಣೆಯ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಗಲಾಟೆ, ಹಿಂಸಾಚಾರ ಹಾಗೂ ನಾಮಪತ್ರ ಕಸಿಯುವ ಘಟನೆಗಳು ಜರುಗಿದ ಹಿನ್ನೆಲೆ ಗುರುವಾರ(ಅ. 22) ರಾಜ್ಯ ಚುನಾವಣೆ ಆಯೋಗವೂ ಚುನಾವಣೆಗೆ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ 13 ಪಾಲಿಕೆಗಳು, 87 ಪುರಸಭೆಗಳು ಹಾಗೂ ನಗರ ಪಂಚಾಯತ್‌ಗಳು ಸೇರಿದಂತೆ ಒಟ್ಟು 100 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಮತ್ತು ಮುಂದಿನ ಆದೇಶ ಹೊರಡಿಸುವವರೆಗೂ ಯಾವುದೇ ಪ್ರಕ್ರಿಯೆ ನಡೆಸದಂತೆ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಚುನಾವಣಾ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ರಾಯಚೋಟಿ, ಪುಂಗನೂರು, ಪುಲಿವೆಂದುಲು ಸೇರಿ ಸೇರಿ ರಾಜ್ಯದ ಅನೇಕ ಕಡೆ ಗಲಾಟೆ, ಹಿಂಸಾಚಾರ ನಡೆದಿತ್ತು. ಮತ್ತು ಟಿಡಿಪಿ ಮತ್ತು ವೈಸಿಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದರು.

Also Read
ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ಹೌತಿ ಬಂಡುಕೋರರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರು ಸಾವು, 8 ಮಂದಿಗೆ ಗಾಯ| Saudi airport
ನಾಮಿನೇಷನ್ ವೇಳೆ ಗಲಾಟೆ, ಹಿಂಸಾಚಾರ, ನಾಮಪತ್ರ ಕಸಿಯುವಿಕೆ: ಆಂಧ್ರದಲ್ಲಿ ಪುರಸಭೆಗಳ ಚುನಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ | Andhra Pradesh

ಅಷ್ಟೇ ಅಲ್ಲದೇ ವೈಸಿಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸದಂತೆ ಆಡಳಿತರೂಢ ಟಿಡಿಪಿ ಕಾರ್ಯಕರ್ತರೂ ನಾಮಪತ್ರಗಳನ್ನು ಕಸಿದುಕೊಳ್ಳುವ, ಅವುಗಳನ್ನು ಹರಿದು ಹಾಕುವ ಘಟನೆಗಳು ನಡೆದ ಹಿನ್ನೆಲೆ ನಾಮಪತ್ರ ಸಲ್ಲಿಕೆ ಗಡುವು ವಿಸ್ತರಣೆ ಮಾಡುವಂತೆ ನಿರ್ದೇಶನ ಕೋರಿ ವೈಸಿಪಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದ್ರೆ ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಹಿನ್ನೆಲೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

ಬುಧವಾರ(ಅ. 21) ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಪುರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಮತ್ತು ನಾಮಪತ್ರ ಸಲ್ಲಿಕೆಯಲ್ಲಿ ಎದುರಾದ ಅಡೆತಡೆಗಳನ್ನು ಪರಿಶೀಲಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಿತ್ತು. ಎಲ್ಲಾ ಸರಿಯಾಗುವವರೆಗೂ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಘೋಷಿಸದಂತೆ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆ ಇಂದು ರಾಜ್ಯ ಚುನಾವಣಾ ಆಯೋಗ, 19 ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯಾಪ್ತಿಯಲ್ಲಿ ಹಿಂಸಾಚಾರ, ಗಲಾಟೆ ನಡೆದಿದ್ರೂ ಎಲ್ಲಾ 100 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net