ವರ್ಕ್ ಫ್ರಂ ಹೋಮ್ ನೀತಿ ಅಂತ್ಯ: ಹಳೇ ನಿಯಮ ಮತ್ತೆ ಜಾರಿ; ದೆಹಲಿ ಸಿಎಂ ರೇಖಾ ಗುಪ್ತಾ ಮಹತ್ವದ ಆದೇಶ! Rekha Gupta on Work From Home
ದೆಹಲಿಯಲ್ಲಿ ವರ್ಕ್ ಫ್ರಂ ಹೋಮ್ ನೀತಿ ಅಂತ್ಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೆಹಲಿಯಲ್ಲಿ ವರ್ಕ್ ಫ್ರಂ ಹೋಮ್ ನೀತಿ ಅಂತ್ಯ
ದೆಹಲಿ ಸಿಎಂ ರೇಖಾ ಗುಪ್ತಾ ಮಹತ್ವದ ಆದೇಶ
ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ದೇಶದಲ್ಲಿ ಹೆಚ್ಚಿದ ತಾಪಮಾನಕ್ಕಾಗಿ ಜಾರಿಗೆ ತಂದಿದ್ದ ನೀತಿ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹಾಗೂ ವಿಪರಿತ ಬಿಸಿಲಿನಿಂದ ತತ್ತರಿಸುತ್ತಿದ್ದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ರಾಜ್ಯದಲ್ಲಿ ವರ್ಕ್ ಫ್ರಂ ಹೋಮ್ (Rekha Gupta on Work From Home) ನೀತಿಯನ್ನು ಜಾರಿ ಮಾಡಿತ್ತು. ಈಗ ಈ ಸಮಸ್ಯೆಗಳು ಪರಿಹಾರ ಕಂಡಿರುವ ಹಿನ್ನಲೆಯನ್ನು ಈ ನಿಯಮವನ್ನು ಹಿಂಪಡೆಯಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೂರಿದ್ದ ಹಿನ್ನಲೆ ತೈಲದ ಬಳಕೆಯನ್ನು ಕಡಿಮೆ ಮಾಡಲು ಈ ಕ್ರಮವನ್ನು ದೆಹಲಿ ಸರ್ಕಾರ ಕೈಗೊಂಡಿತ್ತು.
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರವಾಗಿದ್ದ ಹಿನ್ನಲೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶದ ನಾಗರಿಕರಿಗೆ ಇದು ಸಂಕಷ್ಟದ ಸಮಯ, ಚಿನ್ನದ ಖರೀದಿಯನ್ನು ಕಡಿಮೆ ಮಾಡಿ, ಪೆಟ್ರೋಲ್-ಡೀಸೆಲ್ ಬಳಕೆಯನ್ನು ಮಿತಗೊಳಿಸಿ, ದುಂದುವೆಚ್ಚ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ, ರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಎರಡು ದಿನ ವರ್ಕ್ ಫ್ರಂ ಹೋಮ್ ನೀತಿಯನ್ನು ಜಾರಿಗೆ ತಂದಿದ್ದರು. ಹಾಗೆಯೇ ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಅಧಿಕವಾಗಿದ್ದ ಹಿನ್ನಲೆ ಕಚೇರಿ ವೇಳೆಯನ್ನು ಬೆಳಿಗ್ಗೆ 10 ರಿಂದ ಸಂಜೆ 6 ಕ್ಕೆ ಬದಲಿಸಲಾಗಿತ್ತು.
ಈಗ ಮಧ್ಯಪ್ರಾಚ್ಯದಲ್ಲಿ ಮೊದಲಿದ್ದ ಉದ್ವಿಗ್ನ ಪರಿಸ್ಥಿತಿ ಇಲ್ಲವಾಗಿದೆ. ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ ಹೀಗಾಗಿ ವರ್ಕ್ ಫ್ರಂ ಹೋಮ್ ನೀತಿಯ ಅಗತ್ಯವಿಲ್ಲ. ಹಾಗೆಯೇ ಬಿಸಿಲಿನ ಆರ್ಭಟ ಕೂಡ ಕಡಿಮೆ ಆಗಿದ್ದು, ಈಗ ಮೊದಲಿದ್ದ ಬೆಳಿಗ್ಗೆ 8.30 ರಿಂದ ಸಂಜೆ 5 ರ ಕಚೇರಿ ಸಮಯವನ್ನು ಮತ್ತೆ ಮರುಸ್ಥಾಪನೆ ಮಾಡಲಾಗಿದೆ ಎಂದು ಸಿಎಂ ರೇಖಾ ಗುಪ್ತಾ ತಿಳಿಸಿದ್ದಾರೆ, (ಏಜನ್ಸೀಸ್).