ರೈಲಿನಲ್ಲಿ ಮಹಿಳೆಯರ ದಂಗಲ್​: ಜಗಳ ಬಿಡಿಸಲು ಬಂದವನಿಗೂ ಬಿತ್ತು ಗೂಸಾ;ವಿಡಿಯೋ ವೈರಲ್​! Viral Video

ರೈಲಿನಲ್ಲಿ ಇಬ್ಬರು ಮಹಿಳೆಯರ ನಡುವೆ ಜಗಳ
ರೈಲಿನಲ್ಲಿ ಇಬ್ಬರು ಮಹಿಳೆಯರ ನಡುವೆ ಜಗಳ
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಇಬ್ಬರು ಮಹಿಳೆಯರ ನಡುವೆ ಜಗಳ
  • ಕಿತ್ತಾಟ ಬಿಡಿಸಲು ಹೋದ ಪಾಪದ ಯುವಕನಿಗೂ ಬಿತ್ತು ಧರ್ಮದೇಟು
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ವೈರಲ್​: ಇಬ್ಬರ ಜಗಳದಲ್ಲಿ ಮೂರನೇ ಅವರಿಗೆ ಲಾಭ ಎಂಬ ನಾಣ್ಣುಡಿಯನ್ನು ಬಹುತೇಕ ಜನ ಕೇಳಿರುತ್ತೇವೆ. ಅಂದರೆ ಎರಡು ವ್ಯಕ್ತಿಗಳ ನಡುವೆ ಏನಾದರೂ ಮನಸ್ಥಾಪ ನಡೆಯುತ್ತಿದರೆ ಅದರಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶ ಮಾಡಿದರೆ ಆತನು ಆ ಪರಿಸ್ಥಿತಿಯ ಲಾಭ ಪಡೆಯುತ್ತಾನೆ ಎನ್ನುವುದು ಇದರ ಅರ್ಥವಾಗಿದೆ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್​ (Viral Video) ಆಗುತ್ತಿದ್ದು, ಅದರಲ್ಲಿ ಜಗಳ ಬಿಡಿಸಲು ಬಂದವನಿಗೆ ಧರ್ಮದೇಟು ಬಿದ್ದಿರುವುದು ಕಂಡುಬಂದಿದೆ.

ವಿಡಿಯೋನಲ್ಲಿ ಏನಿದೆ?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ರೈಲಿನಲ್ಲಿ ಇಬ್ಬರು ಮಹಿಳೆಯರ ನಡುವೆ ವಾಗ್ವಾದ ನಡೆಯುತ್ತಿದ್ದು, ಪರಸ್ಪರ ಬೈದುಕೊಳ್ಳುತ್ತಾ, ಒಬ್ಬರನೊಬ್ಬರು ಹೊಡೆದುಕೊಳ್ಳುತ್ತಿದ್ದರು.
ಇವರಿಬ್ಬರ ಈ ನಡುವಳಿಕೆಯನ್ನು ಸಹಿಸದ ಹುಡುಗನೊಬ್ಬ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದರೆ ಜಗಳದಲ್ಲಿ ನಿರತವಾಗಿದ್ದ ಒಬ್ಬ ಹುಡುಗಿ ಆ ಹುಡುಗನನ್ನೇ ಹಿಡಿದು ಹೊಡೆಯಲಾರಂಭಿಸಿದ್ದಾಳೆ.

ನಕ್ಕು-ನಕ್ಕು ಸುಸ್ತಾದ ಜನ!

ಈ ಹೊಡೆದಾಟ ನಡೆಯುತ್ತಿದ್ದರೆ ಅಕ್ಕ-ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಇದನ್ನು ನಿಲ್ಲಿಸುವ ಬದಲು ಕಿಸಿ-ಕಿಸಿ ಎಂದು ನಗುತ್ತಿರುವುದು ಸಹ ವಿಡಿಯೋನಲ್ಲಿ ಸೆರೆಯಾಗಿದೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೋ ಸೋಶಿಯಲ್ ಮೀಡಿಯಾನಲ್ಲಿ ವೈರಲ್​ ಆಗಿದ್ದೆ ನೆಟ್ಟಿಗರು ಫುಲ್​ ಸಕ್ರೀಯರಾಗಿದ್ದಾರೆ. ಇದಕ್ಕೆ ಹೇಳುವುದು ಇಬ್ಬರು ಮಹಿಳೆಯರ ನಡುವೆ ಒಬ್ಬ ಪುರುಷ ಹೋಗಬಾರದೆಂದು ಒಬ್ಬರು ಹೇಳಿದರೆ, ಹೀರೊ ಆಗಲು ಹೋಗಿ ಜಿರೋ ಆದ ಪಾಪ ಎಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ.
ಇವರಿಗೆ ಹೊಡೆದಾಡಿಕೊಳ್ಳಲು ಬೇರೆಲ್ಲೂ ಜಾಗ ದೊರೆಯಲಿಲ್ಲವೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಾರ್ವಜನಿಕರು ನಗುತ್ತಿರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಮತ್ತೊರ್ವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net