

60 ದಿನಗಳು ಸರಿಯಾಗಿ ನಿದ್ರೆ ಮಾಡಿ 9.6 ಲಕ್ಷ ಗೆದ್ದುಕೊಂಡ ಮುಂಬೈ ಹುಡುಗಿ.
ಹತ್ತು ಜನರ ಮಧ್ಯೆ ಸ್ಪರ್ಧಿಸಿ ಒಬ್ಬ ವಿಜೇತರಾಗಿ ಹೊರ ಹೊಮ್ಮಿದ ಜಿನಿಯಾ ಚಟರ್ಜಿ.
ಸರಿಯಾಗಿ ನಿದ್ರೆ ಮಾಡು, ನಿದ್ರೆ ಟ್ರ್ಯಾಕ್ ಮಾಡಿ ಲಕ್ಷ ಲಕ್ಷ ಗೆದ್ದುಕೊಂಡ ಯುವತಿ.
Jiniya Chatterjee from Mumbai: ಕೆಲವೊಂದು ನಿದ್ದೆ ನಿಶ್ಚಿಂತೆ..ನೆಮ್ಮದಿಯ ದಿನಕ್ಕೆ ಅನುವು ಮಾಡಿಕೊಟ್ಟರೆ. ಕೆಲವೊಂದು ಸುಖ ನಿದ್ದೆ ಉತ್ತಮ ಜೀವನವನ್ನು ನೀಡುತ್ತದೆ ಎನ್ನುವುದಕ್ಕೆ ಉದಾಹರಣೆ ಮುಂಬೈನ ಜಿನಿಯಾ ಚಟರ್ಜಿ ಎನ್ನುವ ಹುಡುಗಿ. ಹೌದು, ಈಕೆ ಅವರು ವೇಕ್‌ಫಿಟ್ ಆಯೋಜಿಸಿದ್ದ 'ಸ್ಲೀಪ್ ಇಂಟರ್ನ್‌ಶಿಪ್' ಐದನೇ ಸೀಸನ್‌ನ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಸರಿಯಾಗಿ ನಿದ್ದೆ ಮಾಡಿದ್ದಕ್ಕೆ 9.6 ಲಕ್ಷ ಗೆದ್ದುಕೊಂಡಿದ್ದಾರೆ
ವೇಕ್‌ಫಿಟ್ ಆಯೋಜಿಸಿದ್ದ 'ಸ್ಲೀಪ್ ಇಂಟರ್ನ್‌ಶಿಪ್' ಐದನೇ ಸೀಸನ್ಗೆ 2 ಲಕ್ಷ್ಕ್ಕೂ ಹೆಚ್ಚು ಅರ್ಜಿಗ:ಉ ಬಂದಿದ್ದರು. ಇದರಲ್ಲಿ ಹತ್ತು ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 10 ಮಂದಿ ಮಾತ್ರ ಆಯ್ಕೆಯಾಗಿದ್ದರು. 60 ದಿನಗಳು ಅಂದರೆ, ಎರಡು ತಿಂಗಳು ಈ ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಪ್ರತೀ ಸ್ಪರ್ಧಿಗಳು ನಿತ್ಯ ಸರಿಯಾಗಿ ನಿದ್ರೆ ಮಾಡಬೇಕು. ನಿಯಮಿತ ದಿನಚರಿಯನ್ನು ಕಾಯ್ದುಕೊಳ್ಳಬೇಕು ಮತ್ತು ಸಾಪ್ತಾಹಿಕ ಸವಾಲುಗಳಲ್ಲಿ ಭಾಗವಹಿಸಿ ಲೀಡರ್‌ಬೋರ್ಡ್‌ನಲ್ಲಿ ಸ್ಥಾನ ಪಡೆಯಬೇಕು. 60 ದಿನಗಳ ಕಾಲ ಸ್ಪರ್ಧೆದಾರರು ತಮ್ಮ ನಿದ್ರೆಯ ಮಾದರಿಯನ್ನು ಟ್ರ್ಯಾಕ್ ಮಾಡಿ, ದೈನಂದಿನ ಸ್ಕೋರ್‌ಗಳನ್ನು ಸುಧಾರಿಸಿಕೊಳ್ಳಲು ಶ್ರಮಿಸಿದರು.
'ಸ್ಲೀಪ್ ಇಂಟರ್ನ್‌ಶಿಪ್' ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿದ್ರೆ ಮಾಡಲು ಮಾತ್ರ ಸೀಮಿತವಲ್ಲ. ತಂಡ ಆಯೋಜಿಸುವ ಪ್ರತಿ ಚಟುವಟಿಕೆಯಲ್ಲಿಯೂ ಸರಿಯಾಗಿ ಭಾಗಿಯಾಗಬೇಕು. ಜನಪ್ರಿಯ ಚಲನಚಿತ್ರಗಳ ದೃಶ್ಯಗಳನ್ನು ನಿದ್ರೆಗೆ ಸಂಬಂಧಿಸಿದ ತಿರುವುಗಳೊಂದಿಗೆ ಮರುಸೃಷ್ಟಿಸುವುದು. ಒಂದು ವಾರದಲ್ಲಿ ನಿದ್ರೆ ಅಭ್ಯಾಸವನ್ನು ಅವಲೋಕಿಸುವುದು.
ಅಂಡರ್‌ಕವರ್ ಸ್ಲೀಪ್ ಮಿಷನ್ ಮೂಲಕ ಸಂಭಾಷಣೆಯ ಸಮಯದಲ್ಲಿ ಯಾರೂ ಗಮನಿಸದಂತೆ 'ಕಂಬಳಿ', ದಿಂಬು ಎಂಬ ಪದಗಳನ್ನು 10 ಬಾರಿ ಬಳಸುವುದು. ಪ್ರತಿ ವಾರ ಉತ್ತಮ ಪ್ರದರ್ಶನ ನೀಡಿದವರನ್ನು 'ಪ್ರೊ ಸ್ಲೀಪರ್ ಆಫ್ ದಿ ವೀಕ್' ಎಂದು ಘೋಷಿಸಲಾಯಿತು.
ಜಿನಿಯಾ ಚಟರ್ಜಿ ಮತ್ತು ರತ್ಲಗಿರಿ ಮಣಿಕಂಠ, ಮೆಹೆಕ್ ಖೋಟ್ ಎನ್ನುವ ಮೂವರು ಸ್ಪರ್ಧಿಗಳು ಉಳಿದುಕೊಂಡರು. ಒಬ್ಬರು ಇವರೊಂದಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಒಟ್ಟಾರೆಯಾಗಿ ರಿಯಾಲಿಟಿ ಟೆಲಿವಿಷನ್ ಶೋ ಮಾದರಿಯಲ್ಲಿ ಇದು ನಡೆಯಿತು.
ಹೀಗಿತ್ತು ಸ್ಪರ್ಧೆ ಮೊದಲನೇ ಸವಾಲು ಮೆಮೋರಿ ಫೋಮ್ , ಉಲ್ಲೇಖಿತ ಚಿತ್ರಗಳನ್ನು ನೋಡಿ ಮಲಗುವ ಕೋಣೆಯ ಸೆಟಪ್ ಅನ್ನು ಮರುಸೃಷ್ಟಿಸುವುದು. ಇದು ಅವರ ಜ್ಞಾಪಕ ಶಕ್ತಿ, ವೀಕ್ಷಣೆ ಮತ್ತು ತಂಡದ ಕೆಲಸವನ್ನು ಪರೀಕ್ಷಿಸಿತು.
ಮಲಗುವ ವ್ಯವಸ್ಥೆಗಳು ಸಿದ್ಧವಾದ ಬಳಿಕ, ಫೈನಲಿಸ್ಟ್‌ಗಳು ಸ್ಪರ್ಧೆಯಲ್ಲಿ ತಮ್ಮ ಕೊನೆಯ ರಾತ್ರಿಯನ್ನು ಕಳೆದರು. ಆ ರಾತ್ರಿಯ ಅವರ ನಿದ್ರೆಯ ಸ್ಕೋರ್‌ಗಳು ವಿಜೇತರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಅಂತಿಮ ಸ್ಕೋರ್‌ಗಳ ತುಲನೆಯ ನಂತರ ಜಿನಿಯಾ ಚಟರ್ಜಿ ವಿಜೇತೆಯಾಗಿ ಹೊರಬಂದರು, (ಏಜೆನ್ಸೀಸ್).