ಐಷಾರಾಮಿ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು: ರಾಜ್ಯಸಭಾ ಸಂಸದನ ಪುತ್ರನ ವಿರುದ್ಧ FIR! Lingamaneni Sanjush

ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಪುತ್ರ ಲಿಂಗಮನೆನಿ ಸಂಜುಷ್ ವಿರುದ್ಧ ಪ್ರಕರಣ ದಾಖಲು
ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಪುತ್ರ ಲಿಂಗಮನೆನಿ ಸಂಜುಷ್ ವಿರುದ್ಧ ಪ್ರಕರಣ ದಾಖಲು
Published on

ಪ್ರಮುಖ ಮುಖ್ಯಾಂಶಗಳು

  • ವೇಗವಾಗಿ ಬಂದ ಐಷಾರಾಮಿ ಕಾರು
  • ಡಿಕ್ಕಿಹೊಡೆದ ಪರಿಣಾಮ ಮಹಿಳೆ ಸಾವು
  • ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಪುತ್ರ ಲಿಂಗಮನೆನಿ ಸಂಜುಷ್ ವಿರುದ್ಧ ಪ್ರಕರಣ ದಾಖಲು
ಹೈದರಾಬಾದ್​: ಆಂಧ್ರಪ್ರದೇಶದ ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಪುತ್ರ ಲಿಂಗಮನೆನಿ ಸಂಜುಷ್ (LingamaneniSanjush) ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 
ಈ ಘಟನೆ ಭಾನುವಾರ (ಆ.16) ನಡೆದಿದ್ದು, ಸಂಜುಷ್ ಅವರ ಐಷಾರಾಮಿ ಆಸ್ಟನ್ ಮಾರ್ಟಿನ್ ಕಾರು ಅತ್ಯಂತ ವೇಗದಿಂದ, ನಿರ್ಲಲ್ಷವಾದ ಕಾರು ಚಾಲನೆಯಿಂದಾಗಿ, ಮಾಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಮುಖಿ (26) ಎಂಬಾಕೆ ಪ್ರಾಣ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ. 
ಅಪಘಾತ ನಡೆದ ನಂತರ, ಸಂಜುಷ್ ಅದೇ ಕಾರಿನಲ್ಲಿ ಭಾರತಿ ಮುಖಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಹಿನ್ನಲೆ ಆಸ್ಪತ್ರೆ ತಲುಪುವ ಮುನ್ನವೇ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಪ್ರಕರಣ ದಾಖಲು, ಮುಂದುವರಿದ ತನಿಖೆ!


ಭಾರತಿ ಮುಖಿ ಸಾಯುತ್ತಿದ್ದಂತೆ ಲಿಂಗಮನೆನಿ ಸಂಜುಷ್ ಮೇಲೆ ಕಾರಿನ್ನು ಅಸಮರ್ಪಕವಾಗಿ ಚಾಲನೆ ಮಾಡಿದ ಹಿನ್ನಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಮೇಲ್ನೋಟಕ್ಕೆ ಸಂಜುಷ್ ಅವರ ಅತೀ ವೇಗದ ಚಾನಲೆಯಿಂದಲೇ ಅಪಘಾತವಾಗಿದೆ ಎಂದು ಹೇಳಲಾಗುತ್ತಿದ್ದರು, ಪೊಲೀಸ್​ ತನಿಖೆ ಮುಗಿದು, ವರದಿ ಸಲ್ಲಿಕೆಯಾದ ನಂತರ ಸತ್ಯಾಸತ್ಯತೆ ತಿಳಿಯಬೇಕಾಗಿದೆ.
ಇನ್ನೂ ಈ ಸಂಜುಷ್, ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್​ ಕಲ್ಯಾಣ್​ ಅವರ ಜನ ಸೇನಾ ಪಾರ್ಟಿಯ ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಅವರ ಪುತ್ರನೆಂದು ತಿಳಿದು ಬಂದಿದೆ. ಆದರೆ ಈ ಘಟನೆ ಬಗ್ಗೆ ಅವರ ತಂದೆ ರಮೇಶ್​ ಆಗಲೀ ಅಥವಾ ಪವನ್​ ಕಲ್ಯಾಣ್​ ಆಗಲೀ ಇಲ್ಲಿವರೆಗೆ ಯಾವುದೇ ಹೇಳಿಕೆ ನೀಡಿಲ್ಲ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net