

ಹತ್ತು ಗಂಟೆಗಳ ಕಾಲ ಟೇಕಾಫ್ ಆಗದ ವಿಮಾನ ತಾಯಿ-ಮಗುವಿಗೆ ಸಂಕಷ್ಟ
ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಬಿತ್ತು 1.5 ಲಕ್ಷ ದಂಡ
ಸಂತ್ರಸ್ತ ಮಹಿಳೆಗೆ 1.5 ಲಕ್ಷ ಹಣ ಸಂತ್ರಸ್ತೆಗೆ ನೀಡಲು ತಾಕೀತು
ನವದೆಹಲಿ: ಲಾಸ್ ಏಂಜಲೀಸ್ನಿಂದ ಮುಂಬೈಗೆ ತೆರಳಬೇಕಿದ್ದ ವಿಮಾನವೊಂದರ ಪ್ರಯಾಣವು ವಿಳಂಬವಾಗಿ, ರದ್ದಾಗಿತ್ತು. ಇದರಿಂದ ಹಸುಗೂಸನ್ನು ಹೊಂದಿದ್ದ ತಾಯಿಯೊಬ್ಬರು ಹತ್ತು ಗಂಟೆಗಳ ಕಾಲ ಆಹಾರ, ನೀರು ಇಲ್ಲದೆ ಪರದಾಡಿದ್ದರು. ಈ ನಿರ್ಲಕ್ಷ್ಯಕ್ಕೆ ಕಾರಣವಾದ ವಿಮಾನಯಾನ ಸಂಸ್ಥೆಗೆ ದೆಹಲಿ ಗ್ರಾಹಕರ ಆಯೋಗವು( Delhi consumer commission) ದಂಡ ವಿಧಿಸಿದೆ.
ಹೌದು, ಸೇವೆಯಲ್ಲುಂಟಾದ ವ್ಯತ್ಯಯ ಹಾಗೂ ನಿರ್ಲಕ್ಷ್ಯದ ಹೊಣೆಯನ್ನು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೊರಬೇಕು. ನಂತರ 10 ಗಂಟೆ ವಿಮಾನದಲ್ಲಿ ಸಿಲುಕಿದ ತಾಯಿಗೆ 1.5 ಲಕ್ಷ ನೀಡಬೇಕು ಗ್ರಾಹಕರ ವೇದಿಕೆಯು ನಿರ್ದೇಶಿಸಿದೆ.
2017ರಲ್ಲಿ ಮಹಿಳೆ ಅನುಭವಿಸಿದ ಸಮಸ್ಯೆ ವಿರುದ್ಧ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು. ಈ ಕೇಸ್ ವಿಚಾರಣೆಯನ್ನು ಅಧ್ಯಕ್ಷೆ ಪೂನಂ ಚೌಧರಿ ಮತ್ತು ಸದಸ್ಯ ಶೇಖರ್ ಚಂದ್ರ ಹಾಗೂ ಬರಿಕ್ ಅಹ್ಮದ್ ನಡೆಸಿದ್ದು, ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಯು 1 ಲಕ್ಷರೂ ಆಯೋಗದ ಪರಿಹಾರವಾಗಿ ಮತ್ತು ಮೊಕದ್ದಮ್ಮೆ ವೆಚ್ಚ 50 ಸಾವಿರ ನೀಡಬೇಕು ಎಂದು ನಿರ್ದೇಶನ ಕೊಟ್ಟಿದೆ.
ದಿ ಇಂಡಿಯನ್ ಎಕ್ಸ್ಪ್ರೆಸ್ನ ವರದಿ ಪ್ರಕಾರ ಮಹಿಳೆ 2017ರಲ್ಲಿ ಲಾಸ್ ಏಂಜಲೀಸ್ನಿಂದ ಮುಂಬೈಗೆ ಪ್ರಯಾಣಿಸಲು ಟ್ರಾವೆಲ್ ಏಜೆಂಟ್ಮೂಲಕ ಬಿಸಿನಸ್ ಕ್ಲಾಸ್ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದರು. ಜು.19ರಂದು ಅವರು ಪ್ರಯಾಣಿಸಬೇಕಿತ್ತು. ವಿಮಾನ ನಿಲ್ದಾಣಕ್ಕೆ ಬಂದಾಗ ಬೋರ್ಡಿಂಗ್ನಲ್ಲಿ 2 ಗಂಟೆಗಳ ಕಾಲ ತಡ ಮಾಡಲಾಯಿತು ಎಂದು ಹೇಳಿದ್ದಾರೆ.
ವಿಮಾನ 10 ಗಂಟೆಗಳ ಕಾಲ ಟೇಕಾಫ್ ಆಗಲಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ನೀರಿನ ವ್ಯವಸ್ಥೆ, ಆಹಾರ ಯಾವುದನ್ನು ನೀಡಿರಲಿಲ್ಲ. ನನ್ನೊಂದಿಗೆ ಮಗು ಇದ್ದ ಕಾರಣ ಸಾಕಷ್ಟು ಸಮಸ್ಯೆಯಾಗಿತ್ತು. ಮಗುವಿಗೆ ಹಾಲು ತಯಾರಿಸಿ ಕೊಡಲು ಬಿಸಿ ನೀರನ್ನು ಸಹ ಕೊಡಲು ಸಿಬ್ಬಂದಿ ನಿರಾಕರಿಸಿದರು ಎನ್ನುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ.
ಸೇವೆ ವಿಳಂಬಕ್ಕೆ ಹವಾಮಾನ ವೈಪರೀತ್ಯವೇ ಕಾರಣ. ಅಂದು ಸಾಕಷ್ಟು ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಸಂಸ್ಥೆ ಸಮಸ್ಯೆಯಲ್ಲ. ಇಂತಹ ತೊಂದರೆಯಾದರೆ ಪ್ರಯಾಣಿಕರು ಪರಿಹಾರಕ್ಕೆ ಹೇಗೆ ಅರ್ಹರು ಎಂದು ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಪ್ರಶ್ನಿಸಿದೆ, (ಏಜೆನ್ಸೀಸ್).