ಈ ಕುರಿತು ಹಿರಿಯ ಪೊಲೀಸ್ ಅಧಿಕಾರ ಮನೀಷಾ ಸಿಂಗ್ ಪ್ರತಿಕ್ರಿಯಿಸಿ, ನೋಯ್ಡಾದ ಸೆಕ್ಟರ್ 168ರ ಯುವತಿ, ಭಾರತದ ಪ್ರಧಾನಿಯವರ ವಿರುದ್ಧ ಜಂತರ್ ಮಂಥರ್ನಲ್ಲಿ ನಿಂದನೀಯ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಘಾಜಿಯಾಬಾದ್ ನಿವಾಸಿಯೊಬ್ಬರು ದೂರು ನೀಡಿದ್ದಾರೆ. ಇದೊಂದು ಝೀರೋ ಎಫ್ಐಆರ್ ಆಗಿದ್ದು, ಮುಂದಿನ ತನಿಖೆಗಾಗಿ ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.