ನ್ಯಾಯಕ್ಕಾಗಿ ಹೋರಾಡಿದ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವ ರೀತಿ ಇದೇನಾ?. ವಿದ್ಯಾರ್ಥಿಗಳ ಮನವಿ ಆಲಿಸದೇ ಹೋದರೆ, ಅವರು ಮತ್ತೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಪ್ರಧಾನಿ ಮೋದಿಯವರಿಗೆ ಸಂಸತ್ನಿಂದ ಹೊರಗೆ ಮಾತನಾಡಲು ಸಾಧ್ಯವಾದರೆ, ಕಲಾಪದಲ್ಲಿಯೂ ಈ ಬಗ್ಗೆ ಮಾತನಾಡಲಿ. ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬಟ್ಟೆ ಹರಿದು ಹಾಕಿದ್ರು, ಹೊಡೆದರು, ಹಿಂಸೆ ಮಾಡಿದರು ನಮ್ಮ ಮಕ್ಕಳನ್ನು ನಡೆಸುಕೊಳ್ಳುವ ರೀತಿ ಹೀಗಾ ಎಂದು ಆಕ್ರೋಶ ವ್ಯಕ್ತಪಡಿಸಿದರು.