ನವದೆಹಲಿ: ಜಾಗತಿಕ ರಾಜಕೀಯದಲ್ಲಿ ಅಸ್ಥಿರತೆ ಮತ್ತು ಯುದ್ಧದ ಮೋಡಗಳು ಕವಿದಿರುವ ಈ ಹೊತ್ತಿನಲ್ಲಿ, ಭಾರತವು ತನ್ನ ರಾಜತಾಂತ್ರಿಕ ಶಕ್ತಿಯನ್ನು ಮತ್ತಷ್ಟು ಹರಿತಗೊಳಿಸಿದೆ. ನವದೆಹಲಿಯಲ್ಲಿ ಬುಧವಾರ ನಡೆದ 11ನೇ ರಾಯಭಾರಿಗಳ ಮತ್ತು ಹೈಕಮಿಷನರ್‌ಗಳ ಸಮ್ಮೇಳನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್(Jaishankar) ಅವರು ಮುಂದಿನ ದಶಕದ ಭಾರತದ ಭವಿಷ್ಯದ ನೀಲನಕ್ಷೆಯನ್ನು ಮಂಡಿಸಿದರು. ಭಾರತ ಈಗ ಕೇವಲ ಪ್ರೇಕ್ಷಕನಲ್ಲ, ಬದಲಾಗಿ ಜಾಗತಿಕ ಹಿತಾಸಕ್ತಿಗಳನ್ನು ಕಾಯುವ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅವರು ಗುಡುಗಿದ್ದಾರೆ.