ಸಿಂಗ್ರೌಲಿ ಜಿಲ್ಲೆಯ ಅತರ್ವಾ ಗ್ರಾಮದಲ್ಲಿ ನಿನ್ನೆ(ಫೆ.12) ಬೆಳಗಿನ ಜಾವ 4 ರಿಂದ 5 ಗಂಟೆಯ ನಡುವೆ ಈ ಘಟನೆ ನಡೆದಿದೆ. ಬಲಿಯಾದವರು ನೆರೆ ಮನೆಯ ಫೂಲ್ ಕುಮಾರಿ ಸಿಂಗ್ (50) ಮತ್ತು ಕೆಮ್ಲಾ ಸಿಂಗ್ (65) ಎಂದು ಗುರುತಿಸಲಾಗಿದೆ. ಆರೋಪಿ 21 ವರ್ಷದ ಛತ್ರಪತಿ ಸಿಂಗ್ ಮನೆಗೆ ಪೂಜೆಗೆ ಆಹ್ವಾನಿಸಿ ಕೊಲೆ ಮಾಡಿದ್ದು, ಕಿರುಚಾಟ ಕೇಳಿ ಬಂದ ಸುಮಿತ್ರಾ ಸಿಂಗ್ ಮತ್ತು ರಾಮ್ಭಜನ್ ಸಿಂಗ್ ಎಂಬುವರ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.