ಸ್ಥಳೀಯ ಕಾನೂನು ಪಾಲಿಸದಿದ್ದಕ್ಕೆ ರಷ್ಯಾದಲ್ಲಿ ವಾಟ್ಸಾಪ್ ಮೇಲೆ ನಿಷೇಧ ಹೇರಿದ ಪುಟಿನ್ ಸರ್ಕಾರ | WhatsApp

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಾಸ್ಕೋ: ಸ್ಥಳೀಯ ಕಾನೂನುಗಳನ್ನು ಪಾಲಿಸಲು ವಿಫಲವಾದ ಕಾರಣ ರಷ್ಯಾದಲ್ಲಿ ಮೆಟಾ ಒಡೆತನದ ವಾಟ್ಸಾಪ್ ಆ್ಯಪ್(WhatsApp) ಸೇವೆಯನ್ನು​ ನಿರ್ಭಂದಿಸಲಾಗಿದೆ. ವಾಟ್ಸಾಪ್​ನ 100 ಮಿಲಿಯನ್ ಬಳಕೆದಾರರು ಪರ್ಯಾಯವಾಗಿ ದೇಶಿಯ ಆ್ಯಪ್​ಗೆ ಬದಲಾಗುವಂತೆ ಪುಟಿನ್ ಕಚೇರಿ ಕ್ರೆಮ್ಲಿನ್ ಒತ್ತಾಯಿಸಿದೆ.
ಇತ್ತೀಚಿನವರೆಗೂ ರಷ್ಯಾದಲ್ಲಿ ಕನಿಷ್ಠ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದ ವಾಟ್ಸಾಪ್ ಅನ್ನು ರಷ್ಯಾದ ಅಧಿಕಾರಿಗಳು, ಇಂಟರ್ನೆಟ್ ನಿಯಂತ್ರಕ ರೋಸ್ಕೊಮ್ನಾಡ್ಜೋರ್ ನಡೆಸುತ್ತಿರುವ ಆನ್‌ಲೈನ್ ಡೈರೆಕ್ಟರಿಯ ಸಮಾನದಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ವಾಟ್ಸಾಪ್ ರಷ್ಯಾದ ಕಾನೂನಿನ ಮಾನದಂಡಗಳು ಮತ್ತು ಪತ್ರವನ್ನು ಅನುಸರಿಸಲು ಹಿಂಜರಿಯುತ್ತಿದೆ. ಈ ಕಾರಣದಿಂದಾಗಿ ವಾಟ್ಸಾಪ್ ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಾಟ್ಸಾಪ್​ಗೆ ಪರ್ಯಾಯವಾಗಿ ಜನ ದೇಶದ ಸ್ವಂತ ಆ್ಯಪ್ ಆದ ಮ್ಯಾಕ್ಸ್ ಅಪ್ಲಿಕೇಶನ್ ಅನ್ನು ಬಳಸುವಂತೆ ಕೇಳಿಕೊಂಡಿದ್ದಾರೆ.
ಕಳೆದ ವರ್ಷ ರಷ್ಯಾ ದೇಶದಲ್ಲಿ ತಯಾರಾಗುವ ಮತ್ತು ಆಮದಾಗುವ ಎಲ್ಲಾ ಹೊಸ ಫೋನ್​ಗಳಲ್ಲಿ ಮತ್ತು ಟ್ಯಾಬ್ಲೆಟ್​ಗಳಲ್ಲಿ ಮ್ಯಾಕ್ಸ್ ಅಪ್ಲಿಕೇಷನ್ ಅನ್ನು ಸೇರಿಸಲು ತಯಾರಕರಿಗೆ ನಿರ್ದೇಶನ ನೀಡಿತ್ತು. ಮತ್ತು ಈ ಕುರಿತು ಪ್ರಚಾರವನ್ನು ಮಾಡಿತ್ತು.
ಇನ್ನೂ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ವಾಟ್ಸಾಪ್, ಇಂದು ರಷ್ಯಾ ಸರ್ಕಾರವು ಬಳಕೆದಾರರನ್ನು ಸರ್ಕಾರಿ ಸ್ವಾಮ್ಯದ ಕಣ್ಗಾವಲು ಅಪ್ಲಿಕೇಶನ್‌ಗೆ ಕರೆದೊಯ್ಯುವ ಪ್ರಯತ್ನದಲ್ಲಿ ವಾಟ್ಸಾಪ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಪ್ರಯತ್ನಿಸಿದೆ. ಖಾಸಗಿ ಮತ್ತು ಸುರಕ್ಷಿತ ಸಂವಹನದಿಂದ 100 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಪ್ರತ್ಯೇಕಿಸಲು ಪ್ರಯತ್ನಿಸುವುದು ಹಿಮ್ಮುಖ ಹೆಜ್ಜೆಯಾಗಿದೆ ಮತ್ತು ರಷ್ಯಾದಲ್ಲಿ ಜನರಿಗೆ ಸುರಕ್ಷತೆ ಕಡಿಮೆಯಾಗಲು ಕಾರಣವಾಗಬಹುದು ಹೇಳಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net