ಟ್ರಂಪ್ ಮಾಡಿದ್ದನ್ನು ನೀವು ಯಾಕೆ ಮಾಡಬಾರದು?; ವೆನಿಜುವೆಲಾ ಘಟನೆ ಬಗ್ಗೆ ಮೋದಿಗೆ ಓವೈಸಿ ಹೇಳಿದ್ದೇನು? | Asaduddin Owaisi

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
Published on
ಹೈದರಾಬಾದ್: ವೆನಿಜುವೆಲಾ ರಾಜಧಾನಿ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕಾ ಸೇನೆ ಬಂಧಿಸಿದದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ AIMIM ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ(Asaduddin Owaisi), ಪ್ರಧಾನಿ ಮೋದಿಯವರೇ ಟ್ರಂಪ್ ಮಾಡಿದಂತೆ ನೀವು ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್​ನಲ್ಲಿ ಮಾತನಾಡಿರುವ ಓವೈಸಿ, ವೆನೆಜುವೆಲಾದಲ್ಲಿ ಮಿಲಿಟರಿ ಕ್ರಮ ಕೈಗೊಂಡು ಅಲ್ಲಿನ ಅಧ್ಯಕ್ಷರನ್ನು ಸೆರೆಹಿಡಿದಾಗ ಅಮೆರಿಕಾ ಸೆರೆ ಹಿಡಿಯಬಹುದಾದರೆ, ನೀವು ಪಾಕಿಸ್ತಾನಕ್ಕೆ ಹೋಗಿ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್‌ಗಳನ್ನು ಸೆರೆಹಿಡಿಯಬಹುದಿತ್ತು ಎಂದು ಹೇಳಿದ್ದಾರೆ.
ಡೊನಾಲ್ಡ್​ ಟ್ರಂಪ್ ಅದನ್ನು ಮಾಡಲು ಸಾಧ್ಯವಾಗಿದೆ ಅಂದ್ರೆ, ನಿಮ್ಮಿಂದ ಯಾಕೆ ಸಾಧ್ಯವಿಲ್ಲ?, ಮುಂಬೈ ದಾಳಿಯ ಸಂಚು ರೂಪಿಸಿದ ಕ್ರೂರಿಗಳನ್ನು ಅದು ಮಸೂದ್ ಅಜರ್ ಆಗಿರಲಿ, ಅಥವಾ ಲಷ್ಕರ್-ಎ-ತೈಬಾ ಉಗ್ರರಾಗಿರಲಿ ಎಲ್ಲರನ್ನೂ ಕರೆತರಬೇಕು ಎಂದು ಒತ್ತಾಯಿಸಿದ್ದಾರೆ.

ಓವೈಸಿ ಹೇಳಿಕೆಯನ್ನು ಖಂಡಿಸಿದ ಬಿಜೆಪಿ

ಟ್ರಂಪ್ ಮಾಡಿದ್ದನ್ನು ನೀವು ಯಾಕೆ ಮಾಡಬಾರದು ಎಂಬ ಓವೈಸಿ ಹೇಳಿಕೆಯನ್ನು ಬಿಜೆಪಿ ಸಂಸದ ಬಿಜೆಪಿ ಸಂಸದ ಗುಲಾಮ್ ಅಲಿ ಖತಾನಾ, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದೆಯೇ ಹೊರೆತು ದೇಶಗಳನ್ನಲ್ಲ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಮ್ಮ ನೆರೆಹೊರೆಯವರೊಂದಿಗೆ ಸ್ನೇಹಪರವಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net