ಮಹಾರಾಷ್ಟ್ರ ಇನ್ನೊಂದು ಯುಪಿ, ಬಿಹಾರದಂತೆ ಪರಿವರ್ತನೆ; ಮಹಾಯುತಿ ಸರ್ಕಾರದ ವಿರುದ್ಧ ಠಾಕ್ರೆ ಬ್ರದರ್ಸ್ ಕಿಡಿ | Thackeray Brothers

ಉದ್ದವ್ ಠಾಕ್ರೆ ಮತ್ತು ರಾಜ್ ಠಾಕ್ರೆ
ಉದ್ದವ್ ಠಾಕ್ರೆ ಮತ್ತು ರಾಜ್ ಠಾಕ್ರೆ
Published on
ಮುಂಬೈ: ಮಹಾರಾಷ್ಟ್ರವನ್ನು ಇನ್ನೊಂದು ಉತ್ತರ ಪ್ರದೇಶ, ಬಿಹಾರ ರಾಜ್ಯದ ರೀತಿ ಪರಿವರ್ತಿಸಲಾಗುತ್ತಿದೆ ಎಂದು ಭಾನುವಾರ(ಜ. 04) ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರದ ವಿರುದ್ಧ ಠಾಕ್ರೆ ಬ್ರದರ್ಸ್(Thackeray Brothers)​ ವಾಗ್ದಾಳಿ ನಡೆಸಿದ್ದಾರೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಇಂದು ಎಂಎನ್‌ಎಸ್ ಮತ್ತು ಶಿವಸೇನೆ(ಯುಬಿಟಿ) ಜಂಟಿಯಾಗಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮ ಮುಂಬೈನ ಶಿವಸೇನಾ ಭವನದಲ್ಲಿ ನಡೆದಿದೆ. 20 ವರ್ಷಗಳ ಬಳಿಕ ರಾಜ್ ಠಾಕ್ರೆ ಶಿವಸೇನಾ ಭವನಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಠಾಜ್​ ಠಾಕ್ರೆ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಯಾರಾದರೂ ಭಾವಿಸಿದ್ರೆ ಅದು ತಪ್ಪು. ಮಹಾರಾಷ್ಟ್ರ ಇಡೀ ದೇಶಕ್ಕೆ ದಾರಿ ತೋರಿಸಿದೆ. ಅಂತಹ ರಾಜ್ಯವನ್ನು ಇಂದು ಬಿಹಾರ, ಯುಪಿ ರೀತಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ರಾಜ್ಯದಲ್ಲಿ ಚುನಾವಣೆಗೂ ಮುನ್ನವೇ ಎನ್​ಡಿಎ ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಟೀಕಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ ಬಿಜೆಪಿ ಸುಪ್ರೀಂಕೋರ್ಟ್ ಅನ್ನು ಸಂಪರ್ಕಿಸುತ್ತದೆ. ಈಗ ಬಿಎಂಸಿ ಅಭ್ಯರ್ಥಿಗಳ ಅವಿರೋಧದ ಆಯ್ಕೆ ಬಗ್ಗೆ ಏನು ಹೇಳುತ್ತದೆ? ಅವಿರೋಧವಾಗಿ ಆಯ್ಕೆಯಾದ ಸ್ಥಳಗಳಲ್ಲಿ ಚುನಾವಣೆ ರದ್ದುಗೊಳಿಸಬೇಕು. ಮರು ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಜನವರಿ 15ರಂದು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಒಟ್ಟು 29 ಪುರಸಭೆ, 890 ವಾರ್ಡ್​ಗಳಿದ್ದು, 2,869 ಸ್ಥಾನಳಿಗೆ ಚುನಾವಣೆ ನಡೆಯಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net