ನೆಹರೂ-ಗಾಂಧಿ ಕುಟುಂಬದಿಂದ ಮನೇಕಾ ಗಾಂಧಿ ದೂರಾಗಿದ್ದೇಕೆ? ಏನಾಯಿತು? ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಹೇಳಿದ್ದೇನು? | Sonia Gandhi

ನೆಹರೂ-ಗಾಂಧಿ ಕುಟುಂಬದ ಕಿರಿಯ ಸೊಸೆ ಮನೇಕಾ ಗಾಂಧಿಯವರು ಕಳೆದ ಕೆಲವು ದಶಕಗಳಿಂದ ಕುಟುಂಬದಿಂದ ದೂರವಿದ್ದಾರೆ. ಅವರು ಸೋನಿಯಾ ಗಾಂಧಿ ಕುಟುಂಬವನ್ನು ಎಂದಿಗೂ ಭೇಟಿ ಮಾಡಿಲ್ಲ. ಈ ನಿಟ್ಟಿನಲ್ಲಿ, ಸೋನಿಯಾ ಗಾಂಧಿಯವರು ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ನಲ್ಲಿ ಮನೇಕಾ ಗಾಂಧಿಯವರು ಕುಟುಂಬದಿಂದ ದೂರಾಗಿದ್ದೇಕೆ? ಮತ್ತು ತಮ್ಮ ಅವರ ಸಂಬಂಧದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನೆಹರೂ-ಗಾಂಧಿ ಕುಟುಂಬದಿಂದ ಮನೇಕಾ ಗಾಂಧಿ ದೂರಾಗಿದ್ದೇಕೆ? ಏನಾಯಿತು? ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಹೇಳಿದ್ದೇನು? | Sonia Gandhi
Published on: 

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಇಂದು(ನ. 10) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಅದರಲ್ಲಿ ನೆಹರೂ-ಗಾಂಧಿ ಕುಟುಂಬದ ಹಲವು ವಿಷಯಗಳನ್ನು ಬಹಿರಂಗಪಡಿಡಿಸಿದ್ದಾರೆ.

ಪ್ರಮುಖವಾಗಿ ನೆಹರೂ-ಗಾಂಧಿ ಕುಟುಂಬದ ಕಿರಿಯ ಸೊಸೆ ಮನೇಕಾ ಗಾಂಧಿಯವರು ಕಳೆದ ಕೆಲವು ದಶಕಗಳಿಂದ ಕುಟುಂಬದಿಂದ ದೂರವಿದ್ದಾರೆ. ಅವರು ಸೋನಿಯಾ ಗಾಂಧಿ ಕುಟುಂಬವನ್ನು ಎಂದಿಗೂ ಭೇಟಿ ಮಾಡಿಲ್ಲ. ಈ ನಿಟ್ಟಿನಲ್ಲಿ, ಸೋನಿಯಾ ಗಾಂಧಿಯವರು ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ನಲ್ಲಿ ಮನೇಕಾ ಗಾಂಧಿಯವರು ಕುಟುಂಬದಿಂದ ದೂರಾಗಿದ್ದೇಕೆ? ಮತ್ತು ತಮ್ಮ ಅವರ ಸಂಬಂಧದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವ ಅವರದೇ ಮಾತುಗಳಲ್ಲಿ.. '1973ರಲ್ಲಿ, ಸಂಜಯ್ ಗಾಂಧಿಯವರಿಗೆ ಮನೇಕಾ ಗಾಂಧಿ ಪರಿಚಯವಾಯಿತು. ಅವರು ಸುಂದರ, ಕ್ರಿಯಾಶೀಲ ಹುಡುಗಿ. ಸಂಜಯ್ ಗಿಂತ ಹತ್ತು ವರ್ಷ ಚಿಕ್ಕವರು. ಆ ಸಮಯದಲ್ಲಿ ಅವರು ಇನ್ನೂ ಅಪ್ರಾಪ್ತರಾಗಿದ್ದರು. ಅವರು ಒಂದು ವರ್ಷದೊಳಗೆ ವಿವಾಹವಾದರು. 18 ವರ್ಷದ ಹುಡುಗಿ ಗಾಂಧಿ ಕುಟುಂಬದ ಭಾಗವಾದಳು.

ಉತ್ಸಾಹಭರಿತ ಸೊಸೆಯ ಆಗಮನದೊಂದಿಗೆ, ಇಡೀ ಮನೆ ಮೊದಲಿಗೆ ಸಂತೋಷವಾಗಿ ಕಾಣುತ್ತಿತ್ತು. ಕ್ರಮೇಣ, ಕಿರಿಕಿರಿಗಳು ಪ್ರಾರಂಭವಾದವು. ಅವಳು ಕಠೋರವಾಗಿ ಮಾತನಾಡಿದಾಗಲೆಲ್ಲಾ, ಮನೆಯಲ್ಲಿ ಶಾಂತಿ ಕದಡದಂತೆ ನಾನು ಮೌನವಾಗಿರುತ್ತಿದ್ದೆ. ಆದರೆ ಆ ಮಾತುಗಳು ಮಟ್ಟವನ್ನು ಮೀರಿದರೆ, ನಾನು ನೇರ ಉತ್ತರವನ್ನು ನೀಡುತ್ತಿದ್ದೆ ಎಂದಿದ್ದಾರೆ.

Also Read
ಮಹತ್ವಕಾಂಕ್ಷೆ ಅಪರಾಧವೇ? ಆಘಾತ ಪಡುವಂಥದ್ದೇನಿದೆ?: ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ಕೌಂಟರ್ | Pranab Mukherjee's daughter
ನೆಹರೂ-ಗಾಂಧಿ ಕುಟುಂಬದಿಂದ ಮನೇಕಾ ಗಾಂಧಿ ದೂರಾಗಿದ್ದೇಕೆ? ಏನಾಯಿತು? ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಹೇಳಿದ್ದೇನು? | Sonia Gandhi

ಮನೆಯ ಇಬ್ಬರು ಸೊಸೆಯಂದಿರನ್ನು ಹೇಗೆ ಸಂಬೋಧಿಸಲಾಗುತ್ತಿತ್ತು ಎಂಬಲ್ಲಿಂದಲೇ ಇದು ಶುರುವಾಯಿತು. ಹಿರಿಯ ಸೊಸೆಯಾದ ನನ್ನನ್ನು ಮನೆಯ ಸಿಬ್ಬಂದಿ 'ಬಹುರಾಣಿ' ಎಂದು ಕರೆಯುತ್ತಿದ್ದರು. ಇನ್ನು ಕಿರಿಯ ಮಗನ ಪತ್ನಿಯಾದ ಮನೇಕಾರನ್ನು 'ಛೋಟಿ ಬಹು' ಎಂದು ಕರೆಯಲಾಗುತ್ತಿತ್ತು.

ಮತ್ತು ಅತ್ತೆ ಇಂದಿರಾ ಗಾಂಧಿ ಅವರು ತಮ್ಮಿಬ್ಬರನ್ನೂ ಮನೆಯ ಸಮಾನ ಪುತ್ರಿಯರು ಎಂದು ಪರಿಗಣಿಸಿದ್ದರೂ, ಮನೇಕಾ ಅವರು ಇದನ್ನು ತಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಭಾವಿಸಿದ್ದರು. ಅವರು ಒರಟಾಗಿ ಮಾತನಾಡಿದಾಗ, ಶಾಂತಿಯನ್ನು ಕಾಪಾಡಿಕೊಳ್ಳಲು ನಾನು ಹೆಚ್ಚಾಗಿ ಸುಮ್ಮನಿರುತ್ತಿದ್ದೆ. ಆದರೆ, ವಿಷಯ ಮಿತಿಮೀರಿದೆ ಎಂದು ಅನ್ನಿಸಿದಾಗ, ನಾನು ಮೌನ ಮುರಿದು ಖಾರವಾಗಿಯೇ ಪ್ರತಿಕ್ರಿಯಿಸುತ್ತಿದ್ದೆ ಎಂದು ಹೇಳಿದ್ದಾರೆ.

ಸಂಜಯ್ ಮತ್ತು ಮನೇಕಾ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವು. ಬಳಿಕ ಅವು ಶೀಘ್ರದಲ್ಲೇ ಕುಟುಂಬ ಸದಸ್ಯರಿಗೆ ತಿಳಿದವು. ರಾಜಕೀಯ ಕಾರ್ಯಕ್ರಮಗಳು ಮತ್ತು ಆಚರಣೆಗಳಿಗೆ ಸಂಜಯ್ ಜೊತೆ ಹೋಗಲು ಪ್ರಾರಂಭಿಸಿದ ಬಳಿಕ ಮನೇಕಾ ಸ್ವಲ್ಪ ಶಾಂತವಾದಂತೆ ತೋರುತ್ತಿತ್ತು. ಆದರೆ ಸಂಜಯ್ ಮೇಲೆ ಮೇನಕಾ ಪ್ರಭಾವ ಬೀರಿದ್ದರಿಂದ, ಸಹೋದರರ ನಡುವಿನ ಸಂಬಂಧ ಹದಗೆಡಲು ಪ್ರಾರಂಭಿಸಿತು. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡವು ಎಂದು ಹೇಳಿದ್ದಾರೆ.

1978ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅತ್ತೆ ಇಂದಿರಾ ಗಾಂಧಿಯವರ ಹೀನಾಯ ಸೋಲಿಗೆ ಸಂಜಯ್ ಗಾಂಧಿ ಕೂಡ ಕಾರಣ ಎಂದು ರಾಜೀವ್ ಹೇಳಿದ ನಂತರ ಮೇನಕಾ ಅವರಿಗೆ ನಮ್ಮ ಕುಟುಂಬದ ಮೇಲಿನ ದ್ವೇಷ ಹೆಚ್ಚಾಯಿತು. ಕುಟುಂಬದ ಚರ್ಚೆ ವೇಳೆ ನನ್ನ ತಾಯಿಯನ್ನು ಈ ಪರಿಸ್ಥಿತಿಗೆ ಸಿಲುಕಿಸಿದ್ದಕ್ಕಾಗಿ ನಾನು ನಿನ್ನನ್ನು ಕ್ಷಮಿಸಲು ಸಾಧ್ಯವಿಲ್ಲ, ಸಂಜಯ್ ಎಂದು ರಾಜೀವ್ ಹೇಳಿದರು.

Also Read
ಕೇವಲ ನಮಸ್ತೆ, ಯಾವುದೇ ಮಾತುಕತೆಯಿಲ್ಲ: ಪ್ರಧಾನಿ ಮೋದಿ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿ | Sonia Gandhi
ನೆಹರೂ-ಗಾಂಧಿ ಕುಟುಂಬದಿಂದ ಮನೇಕಾ ಗಾಂಧಿ ದೂರಾಗಿದ್ದೇಕೆ? ಏನಾಯಿತು? ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಹೇಳಿದ್ದೇನು? | Sonia Gandhi

ಆಗ ಮನೇಕಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಅತ್ತೆ ಇಲ್ಲ ಎಂದು ಹೇಳಬಲ್ಲಿರಾ? ಎಂದು ದೃಢವಾಗಿ ಕೇಳಿದಾಗ ಅವರು ಹಿಂದೆ ಸರಿದರು. ಬಳಿಕ ಅವರಿಗೆ ವಿಶೇಷವಾಗಿ ತಮ್ಮನ್ನು ಮತ್ತು ರಾಜೀವ್ ಗಾಂಧಿಯವರನ್ನು ಶತ್ರುಗಳೆಂದು ಪರಿಗಣಿಸಲು ಶುರು ಮಾಡಿದರು. ತಮ್ಮ ಸಂಪರ್ಕದಲ್ಲಿದ್ದ ಕೆಲವು ಪತ್ರಕರ್ತರಿಗೆ ಅವರು ತಮ್ಮ ಬಗ್ಗೆ ಸುಳ್ಳು ಪ್ರಚಾರವನ್ನು ಹರಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.

ಚುನಾವಣೆಯಲ್ಲಿನ ಸೋಲಿನ ಬಳಿಕ ನಾನು ಮತ್ತು ರಾಜೀವ್ ಗಾಂಧಿ ದೇಶದಿಂದ ಪಲಾಯನ ಮಾಡಲು ಬಯಸಿದ್ದರು ಎಂಬ ಸುದ್ದಿ, ಶುದ್ಧ ಸುಳ್ಳು ಮತ್ತು ಅದು ನಮಗೆ ಹೆಚ್ಚು ನೋವುಂಟು ಮಾಡಿದ ಸುದ್ದಿಯಾಗಿತ್ತು ಎಂದಿದ್ದಾರೆ. 1980 ಜೂನ್ 23ರಂದು ವಿಮಾನ ಅಪಘಾತದಲ್ಲಿ ಸಂಜಯ್ ನಿಧನರಾದ ಬಳಿಕ ಕುಟುಂಬದೊಂದಿಗಿನ ಅವರ ಸಂಬಂಧ ಮತ್ತಷ್ಟು ಹದಗೆಟ್ಟಿತು ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ಸಂಜಯ್‌ಗೆ ನಿಷ್ಠರಾಗಿದ್ದವರಿಗೆ, ಅವರ ಪತ್ನಿ ಮೇನಕಾ ಗಾಂಧಿ ಅವರಿಗೆ ರಾಜಕೀಯ ಹುದ್ದೆಯೊಂದನ್ನು ನೀಡುವಂತೆ ಒತ್ತಾಯಿಸಲು ಮೇನಕಾ ಅವರ ತಾಯಿ ಪ್ರೇರೇಪಿಸುತ್ತಿದ್ದರು ಎಂದು ತಿಳಿದು ಬಂದಿತು. ಆದರೆ, ಇಪ್ಪತ್ತಮೂರು ವರ್ಷದ ಮನೇಕಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲು ಅವರು ಇನ್ನೂ ತೀರಾ ಚಿಕ್ಕವರು ಮತ್ತು ಅಪಕ್ವವಾಗಿದ್ದಾರೆ ಎಂದು ಅತ್ತೆ ಭಾವಿಸಿದ್ದರು.

ಅಲ್ಲದೆ, ಅವರಿಗೆ ಮೂರು ತಿಂಗಳ ಮಗುವಿದ್ದಿದ್ದರಿಂದ, ಅವರು ಆ ಮಗುವಿನ ಆರೈಕೆಯಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಅವರು ಸ್ವಲ್ಪ ತಾಳ್ಮೆಯಿಂದಿರಬೇಕಿತ್ತು. ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮುಂದೆ ಸಾಕಷ್ಟು ಸಮಯವಿತ್ತು. ಆದರೆ, ಮೇನಕಾ ಅವರ ಗುರಿ ಬೇರೆಯದೇ ಆಗಿತ್ತು ಎಂಬುದು ಸ್ಪಷ್ಟವಾಯಿತು ಎಂದಿದ್ದಾರೆ.

1981ರ ಮಾರ್ಚ್‌ನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಆ ಸಮಯದಲ್ಲಿ ಮೇನಕಾ ಅವರು ತಮ್ಮ ಮಗ ಫಿರೋಜ್ ವರುಣ್ ಗಾಂಧಿ ಅವರ ಮೊದಲ ಹುಟ್ಟುಹಬ್ಬವನ್ನು ವಸುಂಧರಾ ರಾಜೇ ಅವರ ಮನೆಯಲ್ಲಿ ಆಚರಿಸಿದರು. ವಸುಂಧರಾ ರಾಜೇ ಅವರು ಆರ್‌ಎಸ್‌ಎಸ್‌ನ (RSS) ಕಟ್ಟಾ ಬೆಂಬಲಿಗರಾಗಿದ್ದರಲ್ಲದೆ, ಇಂದಿರಾ ಗಾಂಧಿ ಅವರ ರಾಜಕೀಯ ಎದುರಾಳಿಯೂ ಆಗಿದ್ದರು.

ನಂತರ, ಅತ್ತೆ ಇಂದಿರಾ ಗಾಂಧಿ ಲಂಡನ್‌ನಲ್ಲಿದ್ದಾಗ, ಮೇನಕಾ ತಮ್ಮ ವಸ್ತುಗಳನ್ನು ಮನೆಯಿಂದ ಹೊರಗೆ ಸಾಗಿಸಲು ಪ್ರಾರಂಭಿಸಿದರು. ಅತ್ತೆ ಇಂದಿರಾ ಗಾಂಧಿ ಅವರು ಹಿಂದಿರುಗಿ ಬಂದಾಗ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಮೇನಕಾ ಅವರಿಗೆ ಒಂದು ಆಯ್ಕೆಯನ್ನು ನೀಡಿದರು. ಒಂದೋ ಈ ಕೆಲಸಗಳನ್ನು ನಿಲ್ಲಿಸಬೇಕು, ಇಲ್ಲವೇ ಬೇರೆ ಕಡೆ ಹೋಗಿ ವಾಸಿಸಬೇಕು ಎಂದದ್ದನ್ನು ಉಲ್ಲೇಖಿಸಿದ್ದಾರೆ.

Also Read
ದಿಮಾಗಿ ನಕ್ಸಲರನ್ನು ಮುಗಿಸುವುದೇ ಮುಂದಿನ ಗುರಿ: ಪ್ರಧಾನಿಯನ್ನು ಡಿಬೆಟ್​ಗೆ ಕರೆದ ರಾಹುಲ್ ಗಾಂಧಿಗೆ ಕಿರಣ್ ರಿಜಿಜು ತಿರುಗೇಟು | Kiren Rijiju
ನೆಹರೂ-ಗಾಂಧಿ ಕುಟುಂಬದಿಂದ ಮನೇಕಾ ಗಾಂಧಿ ದೂರಾಗಿದ್ದೇಕೆ? ಏನಾಯಿತು? ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಹೇಳಿದ್ದೇನು? | Sonia Gandhi

ಬಳಿಕ ಮನೇಕಾ ಅವರು ಅರೋಪಗಳಿಂದ ತುಂಬಿದ ಪತ್ರವೊಂದನ್ನು ಸಾರ್ವಜನಿಕವಾಗಿ ಪ್ರಕಟಿಸಿದರು. ಇದು ತಮ್ಮ ಅತ್ತೆಗೆ ಮುಜುಗರ ಉಂಟುಮಾಡುವ ಉದ್ದೇಶವನ್ನೇ ಹೊಂದಿತ್ತು. ಅವರು ಒಂದು ದೊಡ್ಡ ಗದ್ದಲವನ್ನು ಸೃಷ್ಟಿಸಿ, ಮನೆಯಿಂದ ಹೊರಹೋಗುವಾಗ ಸಾರ್ವಜನಿಕವಾಗಿ ಇಂದಿರಾ ಗಾಂಧಿ ಅವರ ಮೇಲೆ ದೋಷಾರೋಪಣೆ ಮಾಡಲು ನಿರ್ಧರಿಸಿದ್ದರು ಎಂಬುದು ಸ್ಪಷ್ಟವಾಯಿತು. ಈ ಯೋಜನೆಯ ಬಗ್ಗೆ ಅವರು ವಾರಗಳ ಹಿಂದೆಯೇ ತಮ್ಮ ಪತ್ರಕರ್ತ ಸ್ನೇಹಿತರೊಬ್ಬರಿಗೆ ತಿಳಿಸಿದ್ದರು ಎಂದಿದ್ದಾರೆ.

ಮೇನಕಾ ಅವರು ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ವಾಗ್ವಾದ ನಡೆದಾಗ, ನಾನು ಮತ್ತು ರಾಜೀವ್ ಮನೆಯಲ್ಲಿ ಇರಲಿಲ್ಲ. ಆದರೂ, ನಮ್ಮಿಬ್ಬರ ಮೇಲೆಯೇ ದೋಷ ಹೊರಿಸಲಾಯಿತು. ಈ ಸಂಪೂರ್ಣ ಘಟನೆಯನ್ನು ನಿರ್ವಹಿಸಿದ ರೀತಿ ಮತ್ತು ಅದರ ನಂತರ ನಡೆದ ಪ್ರಚಾರದ ಕೋಲಾಹಲವು, ಆ ಅಹಿತಕರ ಘಟನೆಯನ್ನು ಇಂದಿನ ಕಾಲದ ಭಾಷೆಯಲ್ಲಿ ಹೇಳುವುದಾದರೆ, ಒಂದು ರಿಯಾಲಿಟಿ ಶೋ ಎನ್ನಬಹುದು.

ಬಳಿಕ ತಮ್ಮ ಮೊಮ್ಮಗ ಫಿರೋಜ್ ವರುಣ್​ನನ್ನು ನೋಡುವ ಹಕ್ಕಿಗಾಗಿ ಅತ್ತೆ ಕಾನೂನು ಹೋರಾಟ ನಡೆಸಿತು. ಆದರೆ ತಾಯಿ ಮೇನಕಾ ಅವರು ಭೇಟಿಗೆ ಅವಕಾಶ ನೀಡಲು ನಿರಾಕರಿಸಿದ್ದು, ಅಪಹರಣ ಆರೋಪ ಮಾಡಿದ್ದು ಎಲ್ಲವನ್ನೂ ಹಂಚಿಕೊಂಡಿದ್ದಾರೆ (ಏಜೆನ್ಸೀಸ್).