ಮಹತ್ವಕಾಂಕ್ಷೆ ಅಪರಾಧವೇ? ಆಘಾತ ಪಡುವಂಥದ್ದೇನಿದೆ?: ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ಕೌಂಟರ್ | Pranab Mukherjee's daughter

ತಂದೆಯ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಸಮರ್ಥಿಸಿಕೊಂಡಿರುವ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, 'ಆಘಾತ'ಗೊಳ್ಳುವಂತದ್ದು ಏನಿದೆ? ಆಸೆಯನ್ನು ಹೊಂದಿರುವುದು ಅಪರಾಧವೇ? ವಿಶೇಷವಾಗಿ, ಆ 'ಆಸೆ'ಗೆ ರಾಜಕೀಯ ಮತ್ತು ಆಡಳಿತದಲ್ಲಿನ ದಶಕಗಳ ಅನುಭವ, ಕಠಿಣ ಪರಿಶ್ರಮ ಹಾಗೂ ಬೌದ್ಧಿಕ ಸಾಮರ್ಥ್ಯದ ಹಿನ್ನೆಲೆ ಅವರಿಗೆ ಬೆಂಬಲವಾಗಿತ್ತು ಎಂದು ಹೇಳಿದ್ದಾರೆ.
ಮಹತ್ವಕಾಂಕ್ಷೆ ಅಪರಾಧವೇ? ಆಘಾತ ಪಡುವಂಥದ್ದೇನಿದೆ?: ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ಕೌಂಟರ್ | Pranab Mukherjee's daughter
Published on: 

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಇಂದು(ನ. 10) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಎಲ್ಲಾ ಪುಸ್ತಕ ಮಳಿಗೆಗಳಿಗೆ ರವಾನೆಯಾಗಿದೆ. ಪುಸ್ತಕದಲ್ಲಿ ಅವರು ಹಲವು ಮಹತ್ವದ ವಿಚಾರಗಳನ್ನು ಬೆಳಕು ಚೆಲ್ಲಿದ್ದಾರೆ.

2010ರಲ್ಲಿ ಪ್ರಣಬ್ ಮುಖರ್ಜಿ ಅವರೊಂದಿಗಿನ ತಮ್ಮ ಸಂವಾದದ ಕುರಿತು ಮಾಹಿತಿ ನೀಡಿದ್ದು, ಅಂದಿನ ವಿತ್ತ ಸಚಿವ ಪಿ. ಚಿದಂಬರಂ ಹಾಗೂ ಪ್ರಣಬ್​ ಮುಖರ್ಜಿ ಅವರಲ್ಲಿ ಏನೋ ಮನಸ್ಥಾಪವಿತ್ತು. ಬಳಿಕ ಒಂದು ದಿನ ಅವರು, ನನ್ನ ಜತೆ ಚರ್ಚೆ ಮಾಡುತ್ತಾ, ನಮ್ಮ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ಅಗತ್ಯವಾಗಿದೆ. ಎಲ್ಲರನ್ನು ಹಿಡಿತಕ್ಕೆ, ವಿಶ್ವಾಸಕ್ಕೆ ತೆಗೆದುಕೊಳ್ಳುವವರಿಗೆ ಮಾನ್ಯತೆ ಮತ್ತು ಜವಾಬ್ದಾರಿ ನೀಡಬೇಕೆಂದು ಹೇಳಿದ್ದರು. ಇದು ನನಗೆ ಆಘಾತ ನೀಡಿತ್ತು ಎಂದು ಬರೆದುಕೊಂಡಿದ್ದಾರೆ.

Also Read
ಕೇವಲ ನಮಸ್ತೆ, ಯಾವುದೇ ಮಾತುಕತೆಯಿಲ್ಲ: ಪ್ರಧಾನಿ ಮೋದಿ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿ | Sonia Gandhi
ಮಹತ್ವಕಾಂಕ್ಷೆ ಅಪರಾಧವೇ? ಆಘಾತ ಪಡುವಂಥದ್ದೇನಿದೆ?: ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ಕೌಂಟರ್ | Pranab Mukherjee's daughter

ಮುಂದುವರೆದು, ಅವರು ನನ್ನ ಬಳಿ ನೇರವಾಗಿ ಹೇಳದಿದ್ದರೂ, ಪ್ರಧಾನಿ ಹುದ್ದೆ ಮೇಲೆ ಅವರಿಗೆ ಆಸಕ್ತಿ ಇದೆ ಎನ್ನುವುದನ್ನು ನಾನು ಗ್ರಹಿಸಿದೆ. ಕೂಡಲೇ ನಾನು ಆ ವಿಷಯವನ್ನು ಮರೆಸಿದೆ. ಅದು ಅವರ ಬೇಸರಕ್ಕೆ ಕೂಡ ಕಾರಣವಾಗಿರಬಹುದು. ಆದರೆ ಅವರು ನನ್ನ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ ಎನ್ನವುದು ಮಾತ್ರ ಸತ್ಯ ಎಂದು ಹೇಳಿದ್ದಾರೆ.

ಶರ್ಮಿಷ್ಠ ಮುಖರ್ಜಿ ಸಮರ್ಥನೆ

ಇದಕ್ಕೆ ಕೌಂಟರ್ ನೀಡಿ ತಮ್ಮ ತಂದೆಯ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಸಮರ್ಥಿಸಿಕೊಂಡಿರುವ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, 'ಆಘಾತ'ಗೊಳ್ಳುವಂತದ್ದು ಏನಿದೆ? ಆಸೆಯನ್ನು ಹೊಂದಿರುವುದು ಅಪರಾಧವೇ? ವಿಶೇಷವಾಗಿ, ಆ 'ಆಸೆ'ಗೆ ರಾಜಕೀಯ ಮತ್ತು ಆಡಳಿತದಲ್ಲಿನ ದಶಕಗಳ ಅನುಭವ, ಕಠಿಣ ಪರಿಶ್ರಮ ಹಾಗೂ ಬೌದ್ಧಿಕ ಸಾಮರ್ಥ್ಯದ ಹಿನ್ನೆಲೆ ಅವರಿಗೆ ಬೆಂಬಲವಾಗಿತ್ತು ಎಂದು ಹೇಳಿದ್ದಾರೆ.

ಒಮ್ಮೆ ನಾನು ಅವರನ್ನು, 'ನೀವು ಪ್ರಧಾನಿಯಾಗಲು ಬಯಸುತ್ತೀರಾ?' ಎಂದು ಕೇಳಿದಾಗ, ಅವರು ಬಹಳ ಮುಕ್ತವಾಗಿ, 'ತನ್ನ ಕೆಲಸದಲ್ಲಿ ಸಮರ್ಥನಾದ ಯಾವುದೇ ರಾಜಕಾರಣಿಗೆ ಇಂತಹ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ ಎಂದಿದ್ದರು ಎಂದು ತಿಳಿಸಿದ್ದಾರೆ.

Also Read
ತುರ್ತು ಪರಿಸ್ಥಿತಿ ಸಮರ್ಥನೆಗೆ ಯತ್ನ; ಸೋನಿಯಾ ಗಾಂಧಿಯವರು ತಮ್ಮ ಆತ್ಮಚರಿತ್ರೆಗೆ ವೈಟ್​ವಾಶಿಂಗ್ ಎಂದು ಹೆಸರಿಡಬೇಕಿತ್ತು: ಬಿಜೆಪಿ | BJP
ಮಹತ್ವಕಾಂಕ್ಷೆ ಅಪರಾಧವೇ? ಆಘಾತ ಪಡುವಂಥದ್ದೇನಿದೆ?: ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ಕೌಂಟರ್ | Pranab Mukherjee's daughter

ನನ್ನ ತಂದೆ ಬಹಳ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಅವರು ತಮ್ಮ ಜೀವನದಲ್ಲಿ ಸಾಧಿಸಿದ್ದೆಲ್ಲವೂ ಅವರ ಸ್ವಂತ ಅರ್ಹತೆ ಮತ್ತು ಕಠಿಣ ಪರಿಶ್ರಮದ ಫಲ. ವಂಶಪಾರಂಪರ್ಯ ಹಕ್ಕಿನ ಕಾರಣದಿಂದ, ಪ್ರಧಾನ ಮಂತ್ರಿ ಹುದ್ದೆಯೂ ಸೇರಿದಂತೆ ಯಾವುದೇ ಹುದ್ದೆಗಳನ್ನು ಅವರಿಗೆ ಯಾರೂ ಸುಲಭವಾಗಿ ತಟ್ಟೆಯಲ್ಲಿ ಇಟ್ಟು ನೀಡಲಿಲ್ಲ.

ನಿಜವಾಗಿಯೂ ಅರ್ಹತೆ ಇರುವ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿಯಾಗಬೇಕೆಂದು ಆಕಾಂಕ್ಷೆ ಪಡುವುದರಲ್ಲಿ ತಪ್ಪೇನಿದೆ? ಗಾಂಧಿ-ನೆಹರು ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಇಂತಹ ಆಕಾಂಕ್ಷೆಯನ್ನು ಹೊಂದುವ ಧೈರ್ಯ ಮಾಡಿದ್ದನ್ನು, ಮತ್ತು ಅದನ್ನು ಸೋನಿಯಾ ಜಿ ಅವರ ಮುಂದೆ ಪ್ರಸ್ತಾಪಿಸುವ ಸಾಹಸವನ್ನೂ ಮಾಡಿದ್ದನ್ನು ಕಂಡು ಅವರು 'ಆಘಾತ'ಗೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್).