ತುರ್ತು ಪರಿಸ್ಥಿತಿ ಸಮರ್ಥನೆಗೆ ಯತ್ನ; ಸೋನಿಯಾ ಗಾಂಧಿಯವರು ತಮ್ಮ ಆತ್ಮಚರಿತ್ರೆಗೆ ವೈಟ್​ವಾಶಿಂಗ್ ಎಂದು ಹೆಸರಿಡಬೇಕಿತ್ತು: ಬಿಜೆಪಿ | BJP

ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆ ಕೃತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಪುಸ್ತಕಕ್ಕೆ 'ವೈಟ್‌ವಾಶಿಂಗ್'(ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನ) ಎಂದು ಹೆಸರಿಟ್ಟಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು ಎಂದು ಕಿಡಿಕಾರಿದೆ.
Indira's assassination, Sonia Gandhi!
Published on: 

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಇಂದು(ನ. 10) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಎಲ್ಲಾ ಪುಸ್ತಕ ಮಳಿಗೆಗಳಿಗೆ ರವಾನೆಯಾಗಿದೆ. ಏತನ್ಮಧ್ಯ, ಆತ್ಮಚರಿತ್ರೆ ಬಿಡುಗಡೆಯಾದ ದಿನವೇ ಬಿಜೆಪಿ ಕೃತಿಯ ಕುರಿತಂತೆ ಟೀಕೆಗಳನ್ನು ವ್ಯಕ್ತಪಡಿಸಿದೆ.

ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆ ಕೃತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಪುಸ್ತಕಕ್ಕೆ 'ವೈಟ್‌ವಾಶಿಂಗ್'(ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನ) ಎಂದು ಹೆಸರಿಟ್ಟಿದ್ದರೆ ಹೆಚ್ಚು ಸೂಕ್ತವಾಗಿರುತ್ತಿತ್ತು ಎಂದು ಕಿಡಿಕಾರಿದೆ.

1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಸೋನಿಯಾ ಗಾಂಧಿ, ಅದೊಂದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಕಾಲಕ್ರಮೇಣ ಇದೇ ಅಭಿಪ್ರಾಯಕ್ಕೆ ಬಂದಿದ್ದರು ಎಂದು ತಮಗೆ ಅನ್ನಿಸುತ್ತದೆ ಎಂದು ಬರೆದಿದ್ದಾರೆ.

Also Read
ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ; 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿದ್ದೇಕೆ? ವಿವರಿಸಿರುವ ಕಾಂಗ್ರೆಸ್ ಅಧಿನಾಯಕಿ | Sonia Gandhi
Indira's assassination, Sonia Gandhi!

ಮುಂದುವರೆದು, ತಮ್ಮ ಪತಿ ರಾಜೀವ್ ಗಾಂಧಿ ಅವರ ಸಹೋದರ ಸಂಜಯ್ ಗಾಂಧಿ ಅವರ ಚಟುವಟಿಕೆಗಳನ್ನು ನಿಯಂತ್ರಣದಲ್ಲಿ ಇರಿಸಿದ್ದಿದ್ದರೆ, ತುರ್ತು ಪರಿಸ್ಥಿತಿಯಿಂದ ಉಂಟಾದ ಹೆಚ್ಚಿನ ಹಾನಿಯನ್ನು ತಡೆಯಬಹುದಿತ್ತು ಉಲ್ಲೇಖಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್.ಕೇಶವನ್, ನೆಹರು-ಗಾಂಧಿ ಕುಟುಂಬ ಎಸಗಿದ ಐತಿಹಾಸಿಕ ತಪ್ಪುಗಳನ್ನು ಮರೆಮಾಚಲು ಮತ್ತು ಕಾಂಗ್ರೆಸ್ ಪಕ್ಷದ ಹಿಂದಿನ ಕೃತ್ಯಗಳ ಗಂಭೀರತೆಯನ್ನು ಕಡಿಮೆ ಮಾಡಿ ತೋರಿಸಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಗೆ 'ಬಿಲಾಂಗಿಂಗ್' ಎಂದು ಹೆಸರಿಸುವ ಬದಲು 'ವೈಟ್‌ವಾಶಿಂಗ್' ಎಂದು ಹೆಸರಿಸಬಹುದಿತ್ತು. ಯಾಕೆಂದರೆ, ನೆಹರು-ಗಾಂಧಿ ಕುಟುಂಬ ಎಸಗಿದ ಐತಿಹಾಸಿಕ ತಪ್ಪುಗಳನ್ನು ಸೌಮ್ಯವಾಗಿ ಬಿಂಬಿಸಲು ಮತ್ತು ಕಾಂಗ್ರೆಸ್ ಪಕ್ಷ ಮಾಡಿದ ಗಂಭೀರ ತಪ್ಪುಗಳನ್ನು ಮರೆಮಾಚಲು ಈ ಪುಸ್ತಕವನ್ನು ಬರೆದಂತೆ ತೋರುತ್ತದೆ ಎಂದಿದ್ದಾರೆ.

Also Read
ಪ್ರಧಾನಿ ಹುದ್ದೆ ಬಯಸಿದ್ರಾ ಪ್ರಣಬ್​ ಮುಖರ್ಜಿ? ಸೋನಿಯಾ ಗಾಂಧಿ ಬಳಿ ಮಾಜಿ ರಾಷ್ಟ್ರಪತಿ ಹೇಳಿದ್ದೇನು? Pranab Mukherjee
Indira's assassination, Sonia Gandhi!

ಬಾಬ್ರಿ ಮಸೀದಿಯ ಕುರಿತು ಅವರು ಮಾಡಿರುವ ಉಲ್ಲೇಖಗಳನ್ನು ಪ್ರಶ್ನಿಸಿದ ಕೇಶವನ್, 1984ರ ಸಿಖ್ ವಿರೋಧಿ ಹಿಂಸಾಚಾರದ ವೇಳೆ ಸಾವಿರಾರು ಜನರು ಹತ್ಯೆಯಾದಾಗಲೂ ಅವರು ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದರೇ ಎಂದು ಕೇಳಿದ್ದಾರೆ. ಬಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣವನ್ನು ಪ್ರಸ್ತಾಪಿಸಿರುವ ಅವರು, ಆರೋಪಿಗಳ ಪರವಾಗಿ ಸೋನಿಯಾ ಗಾಂಧಿ ಸಹಾನುಭೂತಿ ವ್ಯಕ್ತಪಡಿಸಿದ್ದನ್ನು ಪ್ರಶ್ನಿಸಿದ್ದಾರೆ. ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಯ ಬಗ್ಗೆಯೂ ಅವರು ಇದೇ ರೀತಿ ಕಣ್ಣೀರಾಕಿದ್ದಾರೆಯೇ ಎಂದು ಕಿಡಿಕಾರಿದ್ದಾರೆ.

ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಮತ್ತು ಅದನ್ನು ಸಹಜ ಸಂಗತಿಯನ್ನಾಗಿ ಬಿಂಬಿಸಲು ಸೋನಿಯಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸಂವಿಧಾನವನ್ನು ದುರ್ಬಲಗೊಳಿಸಲಾಯಿತು. ಮತ್ತು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಕೇಂದ್ರದಲ್ಲಿ ಸುಮಾರು 55 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಭಾರತೀಯ ಪ್ರಜಾಪ್ರಭುತ್ವಕ್ಕೆ ಅಪಾರ ಹಾನಿ ಉಂಟುಮಾಡಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).