ಪ್ರಧಾನಿ ಹುದ್ದೆ ಬಯಸಿದ್ರಾ ಪ್ರಣಬ್​ ಮುಖರ್ಜಿ? ಸೋನಿಯಾ ಗಾಂಧಿ ಬಳಿ ಮಾಜಿ ರಾಷ್ಟ್ರಪತಿ ಹೇಳಿದ್ದೇನು? Pranab Mukherjee

In her autobiography 'Belonging: A Journey of Love', Congress leader Sonia Gandhi recalls the days of the Manmohan Singh government, as well as former President Pranab Mukherjee.
ತಮ್ಮ ಆತ್ಮಕತೆ ‘ಬಿಲಾಂಗ್‌ಗಿಂಗ್: ಅ ಜರ್ನಿ ಆಫ್ ಲವ್’ನಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಮನಮೋಹನ್ ಸಿಂಗ್ ಸರ್ಕಾರದ ದಿನಗಳನ್ನು ನೆನಪಿಸಿಕೊಂಡ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ.
Published on: 

ನವದೆಹಲಿ: ಕಳೆದ ಕೆಲ ದಿನಗಳಿಂದ ಮಾಜಿ ರಾಜ್ಯಸಭಾ ಸಂಸದೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್​ ನಾಯಕಿ, ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯ ಪುಸ್ತಕ ಭಾರೀ ಸದ್ದನ್ನು ಮಾಡುತ್ತಿದೆ. ತಮ್ಮ ಆತ್ಮಕತೆಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಹಾಗೂ ರಾಷ್ಟ್ರೀಯ ಕಾಂಗ್ರೆಸ್​ ಜತೆಗಿನ ಬಂಧವನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ.

ಬಿಲಾಂಗ್​ಗಿಂಗ್​: ಅ ಜರ್ನಿ ಆಫ್​ ಲವ್​ (Belonging: A Journey of Love) ಎನ್ನುವುದು ಸೋನಿಯಾ ಅವರ ಆತ್ಮಕತೆಯಾಗಿದ್ದು, ಈಗ ಈ ಪುಸ್ತಕದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಕುರಿತು ಉಲ್ಲೇಖಿಸಿರುವ ಕೆಲ ಸಂಗತಿಗಳು ಈಗ ಚರ್ಚೆಗೆ ಗ್ರಾಸವಾಗಿದೆ.

ಪ್ರಣಬ್​ ಮುಖರ್ಜಿ ಪ್ರಧಾನಿಯಾಗಬೇಕಿತ್ತು!

ತಮ್ಮ ಆತ್ಮಕಥನದಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್​ನ ಹಿರಿಯ ನಾಯಕರಾದ, ಪ್ರಣಬ್​ ಮುಖರ್ಜಿ, ಮಧ್ಯಪ್ರದೇಶದ ಮಾಜಿ ಸಿಎಂ ಅರ್ಜುನ್​ ಸಿಂಗ್​, ಕೇರಳದ ಮಾಜಿ ಸಿಎಂ ಎ.ಕೆ. ಅಂಟೋನಿ ಮೊದಲಾದವರು ತಮ್ಮ ಜತಗೆ ರಾಜಕೀಯ ಚರ್ಚೆ ಹಾಗೂ ಕಾಂಗ್ರೆಸ್​ನ ಕಾರ್ಯರೀತಿ ಹೇಗಿರಬೇಕೆಂದು ಸಹಲೆ ಹಾಗೂ ಚರ್ಚೆ ನಡೆಸುತ್ತಿದ್ದರೆಂದು ತಿಳಿಸಿದ್ದಾರೆ.

ಒಂದು ಹಂತದಲ್ಲಿ ಅಂದಿನ ವಿತ್ತ ಸಚಿವ ಪಿ. ಚಿದಂಬರಂ ಹಾಗೂ ಪ್ರಣಬ್​ ಮುಖರ್ಜಿ ಅವರಲ್ಲಿ ಏನೋ ಮನಸ್ಥಾಪವಿತ್ತು. ನಂತರ, ಒಂದು ದಿನ 2010 ರಲ್ಲಿ ಪ್ರಣಬ್​ ಮುಖರ್ಜಿ, "ನನ್ನ (ಸೋನಿಯಾ) ಜತೆ ಚರ್ಚೆ ಮಾಡುತ್ತಾ, ನಮ್ಮ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ಅಗತ್ಯವಾಗಿದೆ. ಎಲ್ಲರನ್ನು ಹಿಡಿತಕ್ಕೆ, ವಿಶ್ವಾಸಕ್ಕೆ ತೆಗೆದುಕೊಳ್ಳುವವರಿಗೆ ಮಾನ್ಯತೆ ಮತ್ತು ಜವಾಬ್ದಾರಿ ನೀಡಬೇಕೆಂದು ಹೇಳಿದ್ದರು".

Also Read
ಅಮೆರಿಕ-ಇರಾನ್ ಸಂಘರ್ಷಕ್ಕೆ ಎಂಟ್ರಿಕೊಟ್ಟ ಪುಟಿನ್; ಮಧ್ಯಪ್ರಾಚ್ಯದಲ್ಲಿ ನಾನೇ ಶಾಂತಿ ಸ್ಥಾಪಿಸುತ್ತೇನೆ; ರಷ್ಯಾ ಅಧ್ಯಕ್ಷರ ಭರವಸೆ! Vladimir Putin
In her autobiography 'Belonging: A Journey of Love', Congress leader Sonia Gandhi recalls the days of the Manmohan Singh government, as well as former President Pranab Mukherjee.

ಅವರು ನನ್ನ ಬಳಿ ನೇರವಾಗಿ ಹೇಳದಿದ್ದರೂ, ಇವರಿಗೆ ಪ್ರಧಾನಿ ಹುದ್ದೆ ಮೇಲೆ ಆಸಕ್ತಿ ಇದೆ ಎನ್ನುವುದನ್ನು ನಾನು ಗ್ರಹಿಸಿದೆ. ಕೂಡಲೇ ನಾನು ಆ ವಿಷಯವನ್ನು ಮರೆಸಿದೆ. ಅದು ಅವರ ಬೇಸರಕ್ಕೆ ಕೂಡ ಕಾರಣವಾಗಿರಬಹುದು. ಆದರೆ ಅವರು ನನ್ನ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ ಎನ್ನವುದು ಮಾತ್ರ ಸತ್ಯ ಎಂದಿದ್ದಾರೆ.

ರಾಷ್ಟ್ರಪತಿಯಾದ ಮುಖರ್ಜಿ!

ನಂತರ 2012 ರಲ್ಲಿ ಅಂದಿನ ಯುಪಿಎ ಸರ್ಕಾರ ಪ್ರಣಬ್​ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಪರ್ಧಿಯನ್ನಾಗಿ ಘೋಷಿಸಿ, ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿತು. ಈ ಮೂಲಕ ಅವರು ದೇಶದ ಅತ್ಯುನ್ನತ ಪದವಿಯನ್ನು ಪ್ರಣಬ್​ ಮುಖರ್ಜಿ ಪಡೆಯುವಂತಾಯಿತು. ಅವರು ರಾಷ್ಟ್ರಪತಿ ಸ್ಥಾನದಲ್ಲಿದ್ದಾಗಲೂ ನಾನು ಅವರನ್ನು ಆಗ್ಗಾಗೆ ಭೇಟಿಯಾಗುತ್ತಿದೆ. ಅವರಂತ ವಿದ್ವತ್ಪೂರ್ಣ ಹಾಗೂ ಜ್ಞಾನಿ ರಾಜಕಾರಣಿ ಜತೆ ಸಂಭಾಷಣೆ ನಡೆಸಲು ನಾನು ಹೀಗೆ ಮಾಡುತ್ತಿದ್ದೆ ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.

Also Read
"ಸಾಯುವುದಿದ್ದರೆ ನನ್ನ ದೇಶದ ಮಣ್ಣಿನಲ್ಲೇ ಸಾಯುವೆ": ಗಲ್ಲು ಶಿಕ್ಷೆಯ ಬೆದರಿಕೆಯಲ್ಲೂ ಬಾಂಗ್ಲಾಗೆ ಮರಳಲು ಶೇಖ್ ಹಸೀನಾ ಶಪಥ! Sheikh Hasina
In her autobiography 'Belonging: A Journey of Love', Congress leader Sonia Gandhi recalls the days of the Manmohan Singh government, as well as former President Pranab Mukherjee.

ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ!

ಇನ್ನು 2004 ರಿಂದ 2014 ರ ವರೆಗೆ ಪ್ರಧಾನ ಮಂತ್ರಿಯಾಗಿದ್ದ, ಮನಮೋಹನ್​ ಸಿಂಗ್​ ಅವರ ಅಧಿಕಾರದ ಸಮಯದಲ್ಲಿ, ಸೋನಿಯಾ ಗಾಂಧಿ ಅಧಿಕಾರ ದರ್ಬಳಿಕೆ ಮಾಡಿಕೊಂಡು, ಪ್ರಧಾನಿ ಮಂತ್ರಿಗಳ ಕಚೇರಿ ಕೆಲಸದಲ್ಲಿ ಕೂಡ ಮೂಗುತೂರಿಸುತ್ತಿದ್ದರು. ಪ್ರಮುಖ ಸ್ಥಾನಗಳ ನೇಮಕಾತಿ ತಾವೇ ಮಾಡುತ್ತಿದ್ದರು. ಸರ್ಕಾರಿ ಕಾಗದ ಪತ್ರಗಳನ್ನೂ ಅವರೇ ನಿರ್ವಹಣೆ ಮಾಡುತ್ತಿದ್ದರೆಂಬ ಆರೋಪಗಳು ಸೋನಿಯಾ ಗಾಂಧಿ ಮೇಲೆ ದಶಕಗಳಿಂದ ಕೇಳಿ ಬರುತ್ತಿವೆ.

ಆದರೆ, ಈ ಎಲ್ಲಾ ಆರೋಪಗಳನ್ನು ಸೋನಿಯಾ ಗಾಂಧಿ ಅವರ, ಆತ್ಮಕತೆಯಲ್ಲಿ ಅಲ್ಲಗೆಳಿದಿದ್ದಾರೆ. ನಾನು ಪ್ರಧಾನಿ ಮಂತ್ರಿಗಳ ಕೆಲಸಕ್ಕೆ ಅಡ್ಡ ಪಡಿಸುತ್ತಿರಲಿಲ್ಲ. ನಾನು ನನ್ನ ಕಾಂಗ್ರೆಸ್​ ಪಕ್ಷವನ್ನು ಮುನ್ನಡೆಸುತ್ತಿದೆ. ಆದರೆ, ಅವರಿಗೆ ದೇಶದ ಹಿತ ದೃಷ್ಟಿಯಿಂದ ಕೆಲ ಸಲಹೆ, ಸೂಚನೆ ಹಾಗೂ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್​).