ನಾನು ಚಿಕ್ಕವಳಿದ್ದಾಗ ಐದು ಜನ ನನ್ನನ್ನು..... ಬ್ಯಾಲದ ಕಹಿ ಘಟನೆ ಬಗ್ಗೆ ಮೌನ ಮುರಿದ ಟಾಲಿವುಡ್ ನಟಿ | Varalaxmi Sarathkumar
ಬಾಲ್ಯದಲ್ಲಿ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದ ನಿರ್ದೇಶಕಿ ವರಲಕ್ಷ್ಮಿ ಶರತ್‌ಕುಮಾರ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಚಿತ್ರ ಎಸ್. ಸರಸ್ವತಿ ಸಿನಿಮಾ ವಿವಾದ
ನಾನು ಬರೆದ ಕಥೆಯನ್ನೇ ಅತ್ಯಾಚಾರ ಮಾಡಿದ್ದಾರೆ ಎಂದ ಸಾಯಿ ಮಾಧವ್ ಬುರ್ರಾ
ಬಾಲ್ಯದಲ್ಲಿ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದ ನಿರ್ದೇಶಕಿ ವರಲಕ್ಷ್ಮಿ ಶರತ್‌ಕುಮಾರ್
ಹೈದರಾಬಾದ್: ಸಿನಿಮಾ ರಂಗದಲ್ಲಿ ನಿರ್ದೇಶಕರು ಮತ್ತು ಬರಹಗಾರರ ನಡುವಿನ ಕಿತ್ತಾಟ ಹೊಸದೇನಲ್ಲ. ಆದರೆ, ಇದೀಗ ನಟಿ ಹಾಗೂ ನಿರ್ದೇಶಕಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಅವರ ಚೊಚ್ಚಲ ಚಿತ್ರ ಎಸ್. ಸರಸ್ವತಿ ಬಿಡುಗಡೆಯಾದ ಬೆನ್ನಲ್ಲೇ ಒಂದು ದೊಡ್ಡ ವಿವಾದ ಭುಗಿಲೆದ್ದಿದೆ.
ಚಿತ್ರದ ಮೂಲ ಕಥೆಯನ್ನು ಬರೆದಿದ್ದ ಖ್ಯಾತ ಬರಹಗಾರ ಸಾಯಿ ಮಾಧವ್ ಬುರ್ರಾ, ಚಿತ್ರತಂಡದ ವಿರುದ್ಧ ಸಿಟ್ಟಿಗೆದ್ದು ಮಾಡಿರುವ ಆರೋಪಗಳು ಈಗ ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಆರೋಪವೇನು?
ಚಿತ್ರ ಬಿಡುಗಡೆಯಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ತೋಡಿಕೊಂಡ ಸಾಯಿ ಮಾಧವ್ ಬುರ್ರಾ, ನಾನು ಬರೆದ ಕಥೆಗೂ, ತೆರೆ ಮೇಲೆ ಕಾಣಿಸುತ್ತಿರುವ ಚಿತ್ರಕ್ಕೂ ಸಂಬಂಧವೇ ಇಲ್ಲ. ನಾನು ಬರೆದ ಮೂಲ ನಿರೂಪಣೆಯನ್ನು ಅವರು ಮನಬಂದಂತೆ ಬದಲಾಯಿಸಿದ್ದಾರೆ. ನನ್ನ ಕಥೆಯನ್ನು ಅವರು ಅತ್ಯಾಚಾರ (Rape) ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ತಿಳಿಸದೆಯೇ ಕಥೆಯ ತಿರುಳನ್ನೇ ಬದಲಿಸಿರುವುದು ನನಗೆ ಅತೀವ ಬೇಸರ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಈ ಆರೋಪಕ್ಕೆ ವರಲಕ್ಷ್ಮಿ ಶರತ್‌ಕುಮಾರ್ ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಯಿ ಮಾಧವ್ ಬುರ್ರಾ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಅವರು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದ ಕಾರಣ ಸ್ಕ್ರಿಪ್ಟ್ ಅಪ್‌ಡೇಟ್ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಸಿನಿಮಾ ಮೇಕಿಂಗ್ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳು ಸಹಜ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಬುರ್ರಾ ಬಳಸಿದ ಭಾಷೆಯ ಬಗ್ಗೆ ವರಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರದಂತಹ ಸೂಕ್ಷ್ಮ ವಿಷಯದ ಬಗ್ಗೆ ಸಿನಿಮಾ ಮಾಡುತ್ತಿರುವಾಗ, ಕಥೆಗೆ ಅತ್ಯಾಚಾರ ಮಾಡಿದ್ದಾರೆ ಎಂಬ ಪದಬಳಕೆ ಮಾಡುವುದು ಎಷ್ಟು ಸರಿ? ಇದು ತುಂಬಾ ಅಸಭ್ಯ ಮತ್ತು ಅಸಂವೇದನಾಶೀಲ ಎಂದು ವರಲಕ್ಷ್ಮಿ ಎಂದು ಹೇಳಿದ್ದಾರೆ.
ತನ್ನ ಬಾಲ್ಯದ ಕಹಿ ಘಟನೆ ಹಂಚಿಕೊಂಡ ವರಲಕ್ಷ್ಮಿ!
ಈ ಸುದ್ದಿಗೋಷ್ಠಿಯಲ್ಲಿ ವರಲಕ್ಷ್ಮಿ ತಮಗೆ ಬಾಲ್ಯದಲ್ಲಿ ಆದ ಅನ್ಯಾಯದ ಬಗ್ಗೆಯೂ ಧೈರ್ಯವಾಗಿ ಮಾತನಾಡಿದ್ದಾರೆ. ನಾನು ಚಿಕ್ಕವಳಿದ್ದಾಗ ಐವರು ಪುರುಷರಿಂದ ದೌರ್ಜನ್ಯಕ್ಕೊಳಗಾಗಿದ್ದೆ. ಅಂದು ಮನೆಗಳಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಲೈಂಗಿಕ ಶಿಕ್ಷಣದ ನಂತರವೇ ನನಗೆ ಆ ಘಟನೆಯ ಗಂಭೀರತೆ ಅರಿವಾಯಿತು ಎಂದು ಭಾವುಕರಾದರು. ದೌರ್ಜನ್ಯಕ್ಕೊಳಗಾದವರು ಮೌನವಾಗಿರದೆ, ಇಂತಹ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎಂದು ಅವರು ಕರೆ ನೀಡಿದ್ದಾರೆ.
ಒಟ್ಟಿನಲ್ಲಿ, ಸಿನಿಮಾ ಕಥೆಯ ವಿವಾದದ ನಡುವೆ ವರಲಕ್ಷ್ಮಿ ಅವರ ವೈಯಕ್ತಿಕ ಹೇಳಿಕೆ ಈಗ ಎಲ್ಲರ ಗಮನ ಸೆಳೆದಿದೆ. ಒಂದು ಕಡೆ ಕಲಾತ್ಮಕ ಭಿನ್ನಾಭಿಪ್ರಾಯ, ಇನ್ನೊಂದು ಕಡೆ ಬಾಲ್ಯದ ನೋವಿನ ಕಥೆ ಈ ಎರಡೂ ವಿಚಾರಗಳು ಈಗ ಚಿತ್ರದ ಸುತ್ತ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿರುವುದು ಮಾತ್ರ ನಿಜವಾಗಿದೆ,(ಏಜನ್ಸೀಸ್).