ಫ್ಲೈಟ್‌ನಲ್ಲಿ ಚಿಕನ್ ಫೈಟ್​: ಮಾಂಸಾಹಾರಿ ಯುವಕ ವರ್ಸಸ್ ಸಸ್ಯಾಹಾರಿ ಯುವತಿ; ವಿಡಿಯೋ ವೈರಲ್ | Viral Video

ವಿಮಾನದಲ್ಲಿ ಚಿಕನ್​ ಫೈಟ್​
ವಿಮಾನದಲ್ಲಿ ಚಿಕನ್​ ಫೈಟ್​
Published on

ಪ್ರಮುಖ ಮುಖ್ಯಾಂಶಗಳು

  • ವಿಮಾನದಲ್ಲಿ ಚಿಕನ್​ ತಿಂದಿದ್ದಕ್ಕೆ ಸಿಟ್ಟಾದ ಸಸ್ಯಹಾರಿ ಯುವತಿ
  • ಇದು ನನ್ನ ವೈಯಕ್ತಿಕ ಸ್ವಾತಂತ್ರ್ಯ ಎಂದ ಮಾಂಸಹಾರಿ ಯುವಕ
  • ಇಬ್ಬರ ಜಗಳ ಫುಲ್​ ವೈರಲ್​
Viral Video: ವಿಮಾನಯಾನ ಅಂದರೆ ಅದು ಒಂದು ರೀತಿ ಐಷಾರಾಮಿ ಮತ್ತು ಆರಾಮದಾಯಕ ಪ್ರಯಾಣವಾಗಿರುತ್ತದೆ. ಮೋಡಗಳ ನಡುವೆ ಹಾಯಾಗಿ ಕುಳಿತು ಫ್ಲೈಟ್ ನೀಡುವ ತಿಂಡಿ-ತಿನಿಸುಗಳನ್ನು ಸವಿಯುವುದು ಎಲ್ಲರಿಗೂ ಇಷ್ಟ. ಆದರೆ, ಇದೇ ಫ್ಲೈಟ್‌ನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರದ ವಿಚಾರಕ್ಕೆ ದೊಡ್ಡ ಮಟ್ಟದ ಗಲಾಟೆಯಾಗಿದೆ ಅಂದರೆ ನಂಬುತ್ತೀರಾ? ಸದ್ಯ ಇಂತಹದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಏನಿದು ಘಟನೆ?

ಫ್ಲೈಟ್ ಸೀಟಿನಲ್ಲಿ ಕುಳಿತಿದ್ದ ಒಬ್ಬ ಯುವಕ ತನ್ನ ಆರ್ಡರ್ ಪ್ರಕಾರ ಕೋಳಿ ಮಾಂಸದ ಖಾದ್ಯವನ್ನು ಸವಿಯುತ್ತಿದ್ದ. ಆದರೆ, ಅವನ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಇದು ಅತೀವ ಸಿಟ್ಟು ತಂದಿದೆ. ತಾನು ಶುದ್ಧ ಸಸ್ಯಾಹಾರಿ, ತನ್ನ ಪಕ್ಕದಲ್ಲಿ ಯಾರಾದರೂ ಮಾಂಸಾಹಾರ ತಿನ್ನುವುದನ್ನು ತನಗೆ ಸಹಿಸಲಾಗದು ಎಂದು ಆಕೆ ವಾದಕ್ಕಿಳಿದಿದ್ದಾಳೆ.
ಆಕೆ ಅಷ್ಟಕ್ಕೆ ಸುಮ್ಮನಾಗದೆ ಪ್ರಾಣಿಗಳನ್ನು ಹಿಂಸಿಸಿ ತಿನ್ನುವುದೇ ತಪ್ಪು, ಇಂತಹದ್ದನ್ನು ತನ್ನ ಕಣ್ಣೆದುರೇ ಮಾಡಬಾರದು ಎಂದು ಆಕೆ ಗಲಾಟೆ ಮಾಡಲು ಪ್ರಾರಂಭಿಸಿದಳು. ತನ್ನ ಸೀಟಿನ ಪಕ್ಕದಲ್ಲಿ ಕುಳಿತು ಆತ ಕೋಳಿ ತಿನ್ನುತ್ತಿದ್ದ ದೃಶ್ಯವೇ ಆಕೆಗೆ ಕಿರಿಕಿರಿ ಉಂಟುಮಾಡಿತು.

ಹಿಂದೇಟು ಹಾಕದ ಯುವಕ!

ಪಕ್ಕದಲ್ಲಿ ಕುಳಿತಿದ್ದ ಹುಡುಗನೂ ಕಮ್ಮಿ ಇರಲಿಲ್ಲ.ತಾನು ವಿಮಾನದಲ್ಲಿ ಆರ್ಡರ್ ಮಾಡಿದ ಆಹಾರವನ್ನು ತಿನ್ನಲು ತನಗೆ ಸಂಪೂರ್ಣ ಹಕ್ಕಿದೆ, ತನಗೆ ಕೋಳಿ ಮಾಂಸ ಅಂದ್ರೆ ತುಂಬಾ ಇಷ್ಟ, ಹೀಗಿರುವಾಗ ನೀನು ತಡೆಯಲು ಯಾರು ಎಂದು ಆತ ಖಾರವಾಗಿಯೇ ಉತ್ತರಿಸಿದ್ದಾನೆ. ಇಬ್ಬರ ನಡುವಿನ ವಾದ ತಾರಕಕ್ಕೇರಿ, ವಿಮಾನದಲ್ಲಿ ಇದ್ದಕ್ಕಿದ್ದಂತೆ ವಾತಾವರಣ ಬಿಸಿಯಾಗಿದೆ. ವಿಮಾನ ಸಿಬ್ಬಂದಿ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸುವಷ್ಟರಲ್ಲಿ ಇವರಿಬ್ಬರ ಗಲಾಟೆ ಎಲ್ಲೆಡೆ ಸದ್ದು ಮಾಡಿತ್ತು.

ನೆಟ್ಟಿಗರ ರಿಯಾಕ್ಷನ್ ಹೇಗಿದೆ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜನ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು, ಯಾರು ಏನು ಬೇಕಾದರೂ ತಿನ್ನಲಿ, ಅದರಲ್ಲಿ ಇನ್ನೊಬ್ಬರಿಗೆ ತೊಂದರೆ ಕೊಡೋದು ಸರಿಯಲ್ಲ ಅಂದಿದ್ದರೆ, ಇನ್ನೊಬ್ಬರು ಸಸ್ಯಾಹಾರಿಗಳು ಹೆಚ್ಚು ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಇನ್ನು ಕೆಲವರು, ನಾನು ಈಗ ಚಿಕನ್ ತಿನ್ನುತ್ತಲೇ ಈ ವಿಡಿಯೋ ನೋಡುತ್ತಿದ್ದೇನೆ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net