ಅಕಸ್ಮಾತ್ ಇಂತಹ ನೀತಿ ಏನಾದರೂ ಭಾರತದಲ್ಲಿ ಜಾರಿ ಆಗಿದ್ದೇ ಆದರೆ, ವಾಟ್ಸ್ಆ್ಯಪ್ ಜತೆ ಇನ್ಸ್ಟಾಗ್ರಾಮ್, ಟೆಲಿಗ್ರಾಮ್, ಸ್ನ್ಯಾಪ್ಚಾಟ್, ಸಿಗ್ನಲ್ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ, ಸದ್ಯಕ್ಕೆ ಇದೆಲ್ಲಾ ಊಹಾಪೋಹ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಮತ್ತು ಮೆಟಾ ಸಂಸ್ಥೆಯಿಂದ ಹೊರಬೀಳುವ ಅಧಿಕೃತ ಮಾಹಿತಿಯೇ ಅಂತಿಮ ದೃಢೀಕರಣ ಎಂಬುದು ಗೊತ್ತಿರಲಿ,(ಏಜೆನ್ಸೀಸ್).