ಇದೆಲ್ಲವೂ ಭಾರತದ ಯುವಜನತೆಯ ಸಾಮರ್ಥ್ಯದಿಂದ ಸಾಧ್ಯ: ಮೈಸೂರಿನಲ್ಲಿ 'ನಮೋ' ಭಾಷಣದ ಮುಖ್ಯಾಂಶಗಳು

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
  • ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರ
  • ಕಳೆದ 12 ವರ್ಷಗಳಲ್ಲಿ 650 ವಿವಿ ಸ್ಥಾಪನೆ
ಮೈಸೂರು: ವಿಶೇಷ ಸೇನಾ ಹೆಲಿಕಾಪ್ಟರ್​ ಮೂಲಕ ಸಾಂಸ್ಕ್ರತಿಕ ನಗರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದರು.

ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರ

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ, ಮೊದಲು ತಾಯಿ ಚಾಮುಂಡೇಶ್ವರಿಗೆ ನನ್ನ ನಮನ ತಿಳಿಸುವೆ. ಎರಡು ದಿನಗಳ ಹಿಂದೆಯಷ್ಟೇ ನಾವೆಲ್ಲರೂ ಗುರು ಪೂರ್ಣಿಮೆ ಆಚರಿಸಿದ್ದೇವೆ. ನನ್ನ ಜೀಚವನದ ಯಾತ್ರೆಯಲ್ಲಿ ರಾಮಕೃಷ್ಣ ಆಶ್ರಮ ಮಹತ್ವದ ಪಾತ್ರವನ್ನು ಹೊಂದಿದೆ ಎಂದರು.
ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿನ ಪವಿತ್ರ ನೆಲದಲ್ಲಿ ವಿಭಿನ್ನ ಶಕ್ತಿಯ ಅನುಭವ ನನಗಾಗಿದೆ. ಸಾಂಸ್ಕೃತಿಕ ನಗರಿಯ ದೇಗುಲಗಳು, ನಾಡಹಬ್ಬ ದಸರಾ, ಅರಮನೆ ವಿಶ್ವ ಪ್ರಸಿದ್ಧ. ಮೈಸೂರು ಇಂದಿಗೂ ತನ್ನ ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಗುಣಗಾನ ಮಾಡಿದರು.

ಕಳೆದ 12 ವರ್ಷಗಳಲ್ಲಿ 650 ವಿವಿ

ಯುವಕರ ಕೊಡುಗೆಯಿಂದ ಒಂದು ದೇಶ ಅಭಿವೃದ್ಧಿ ಹೊಂದುತ್ತದೆ. ಭಾರತದಲ್ಲಿ ಕಳೆದ 12 ವರ್ಷಗಳಲ್ಲಿ 650 ವಿವಿಗಳು, 4000ಕ್ಕೂ ಅಧಿಕ ಐಟಿಐ, 9 ಐಐಎಂ. 7 ಐಐಟಿ, 813 ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗಿದೆ. ಬಾಹ್ಯಾಕಾಶದ ಕ್ಷೇತ್ರದಲ್ಲಿ ಯುವಕರು ಇತಿಹಾಸ ಸೃಷ್ಟಿಸಿದ್ದಾರೆ. ಈ ಅಭಿಯಾನಗಳ ಯಶಸಸ್ಸಿನಲ್ಲಿ ಯುವಜನತೆಯ ಪಾಲು ದೊಡ್ಡದು ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ

ಮೊಬೈಲ್ ಉತ್ಪಾದನೆ, ಎಐ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರ ಭಾರತ. ನಮ್ಮ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಇದಕ್ಕೆ ಯುವಜನತೆಯ ಕೊಡುಗೆ ತುಂಬಾ ದೊಡ್ಡದಿದೆ. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು ಎಂದು ಹೇಳಿದರು. ಅಂತಿಮವಾಗಿ, ರಾಮಕೃಷ್ಣ ಆಶ್ರಮದ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿಗಳನ್ನು ಮೈಸೂರಿಗೆ ಸ್ವಾಗತಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಪ್ರಧಾನಿಗಳ ಜತೆ ರಾಮಕೃಷ್ಣ ಆಶ್ರಮಕ್ಕೆ ಆಗಮಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಕೆ.ಹರೀಶ್‌ಗೌಡ ಸೇರಿದಂತೆ ಹಲವರು ರಾಜಕೀಯ ನಾಯಕರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net