

ಪ್ರಮುಖ ಮುಖ್ಯಾಂಶಗಳು
ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ನಾಯಕತ್ವದಲ್ಲಿ ಈ ಹೋರಾಟ ನಡೆದಿದ್ದು, ಕೇಂದ್ರ ಸರ್ಕಾರ ಈ ಪ್ರತಿಭಟೆನೆಗೆ ಬೆಲೆಕೊಟ್ಟು ಪರೀಕ್ಷೆಯಲ್ಲಿ ಅನೇಕ ಬದಲಾವಣೆಯನ್ನು ತಂದಿದೆ.
ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುವುದು, ಹೋರಾಟ ಮಾಡುವುದು ತಪ್ಪಲ್ಲ. ಆದರೆ ಈ ಅಭಿಜಿತ್ ದೀಪ್ಕೆ ವಿದ್ಯಾರ್ಥಿ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಅವನು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ವಿದ್ಯಭ್ಯಾಸ ಮಾಡಿದ್ದು ಅಮೆರಿಕದಲ್ಲಿ, ಈಗ ಹೋರಾಟ ಮಾಡಿದ್ದು ದೆಹಲಿಯಲ್ಲಿ. ಅವನು ಕೇವಲ ಆಮ್ ಆದ್ಮಿ ಕಾರ್ಯಕರ್ತ, ಅದನ್ನು ಬಿಟ್ಟು ಅವನನ್ನು ವಿದ್ಯಾರ್ಥಿ ನಾಯಕ ಎಂದೆಲ್ಲಾ ಸಂಬೋಧಿಸುವುದು ಸರಿಯಲ್ಲ ಎಂದಿದ್ದಾರೆ.
ಪ್ರತಿಭಟನಾ ವೇದಿಕೆಯನ್ನೇರಿ, ಪ್ರಧಾನಿಗಳಿಗೆ, ಅವರ ಕುಟುಂಬ ವರ್ಗದವರಿಗೆ ಬೈಯುತ್ತಾ, ದೇಶ ವಿಭಜಕ ಶಕ್ತಿಗಳಿಗೆ ಜೈಕಾರ ಹಾಕಲಾಯಿತು. ಆದರೆ ಬಿಜೆಪಿ ಜೆನ್-ಜೀಗಳ ಆವೇಗ ಮತ್ತು ಆಕ್ರೋಶವನ್ನು ಅರಿಯುವಲ್ಲಿ ಸಫಲವಾದ ಹಿನ್ನಲೆ, ಮಾತುಕತೆ ಮೂಲಕ ಪರಿಹಾರ ಕಂಡುಕೊಂಡಿದ್ದೆವೆ ಎಂದು ರಿಜುಜು ತಿಳಿಸಿದ್ದಾರೆ,
(ಏಜನ್ಸೀಸ್).