

ಪ್ರಮುಖ ಮುಖ್ಯಾಂಶಗಳು
ಆಕೆ ಯಾರು? ಅವಳ ಬಾಲ್ಯ ಹಾಗೂ ಯೌವನದ ದಿನಗಳು ಹೇಗಿದ್ದವು? ಅವಳು ಇಲ್ಲಿವರೆಗೆ ಏನೇನು ಮಾಡಿದ್ದಾಳೆ? ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಹೀಗೆ ಈಡೀ ಪೀಳಿಗೆಯನ್ನೇ ಗಟರ್ಗೆ ಹೋಲಿಸುವುದು ತಪ್ಪು, ಇದು ಆಕೆಯ ಹಾಳಾಗಿರುವ ಮಾನಸಿಕತೆಯನ್ನು ತೋರಿಸುತ್ತದೆ ಎಂದು ರಾಮ್ದೇವ್ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಾಮ್ದೇವ್, ಆಕೆ ನನ್ನನ್ನು, ನನ್ನ ಯೋಗವನ್ನು ಮೆಚ್ಚಿದರೆ, ನಾನು ಅವಳು ಹೇಳುವ ಎಲ್ಲಾ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆಯೇ ಅವಳು ಮಾಡುವ ಪಾಪವನ್ನು ಮರೆಮಾಚಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಹಾಗೆಯೇ, ಇವತ್ತಿನ ಯುವ ಪೀಳಿಗೆಯನ್ನು ಜಾತಿಯ ಆಧಾರದಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಈಗಿರುವ ಎಲ್ಲಾ ಯುವಕರು ಬ್ರಾಹ್ಮಣ, ಕ್ಷತ್ರೀತ, ವೈಶ್ಯ, ಶೂದ್ರ, ಆದಿವಾಸಿ, ವನವಾಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮ್ಮಿಶ್ರಣವಾಗಿದ್ದಾರೆ. ಇವರು ದೇಶದ ಮುಂದಿನ ಭವಿಷ್ಯವಾಗಿದ್ದಾರೆ, ಅವರನ್ನು ಹೀಗೆ ಗಟರ್ ಪೀಳಿಗೆ ಎಂದು ಹೀಯಾಳಿಸುವುದನ್ನು ನಾನಂತೂ ಒಪ್ಪಲು ಸಾಧ್ಯವಿಲ್ಲ ಎಂದು ಬಾಬಾ ರಾಮ್ದೇವ್ ಕಡ್ಡಿ ಮುರಿದಂತೆ ಹೇಳಿದ್ದಾರೆ,
(ಏಜನ್ಸೀಸ್).