ಪಶ್ಚಿಮ ಬಂಗಾಳ ಚುನಾವಣೆ; 10ನೇ ತರಗತಿ ಪಾಸಾದ ನಿರುದ್ಯೋಗಿ ಯುವಕರಿಗೆ 1,500 ರೂ. ಭತ್ಯೆ; ಸಿಎಂ ಮಮತಾ ಬ್ಯಾನರ್ಜಿ ಘೋಷಣೆ | CM Mamata Banerjee
ಸಿಎಂ ಮಮತಾ ಬ್ಯಾನರ್ಜಿ
Published on:
Copied
Follow Us
ಕೋಲ್ಕತ್ತಾ: ಕೆಲವೇ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಇಂದು(ಮಾ. 07) ಸಿಎಂ ಮಮತಾ ಬ್ಯಾನರ್ಜಿ(CM Mamata Banerjee), ರಾಜ್ಯದ ನಿರುದ್ಯೋಗ ಯುವಕರನ್ನು ಗುರಿಯಾಗಿಸಿ 10ನೇ ತರಗತಿ ಪಾಸಾದ ಯುವಕರಿಗೆ ಪ್ರತಿ ತಿಂಗಳ 1,500 ರೂ. ನೀಡುವ ಯುವ ಸತಿ ಯೋಜನೆ ಘೋಷಣೆ ಮಾಡಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬ್ಯಾನರ್ಜಿ ಈ ಯೋಜನೆ ಘೋಷಣೆ ಮಾಡಿದ್ದು, ವಾಸ್ತವವಾಗಿ ಈ ಯೋಜನೆಯನ್ನು ಏಪ್ರಿಲ್ನಿಂದ ಪ್ರಾರಂಭಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇಂದಿನಿಂದಲೇ ಈ ಯೋಜನೆ ಜಾರಿಗೆ ಬಂದಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ತಮ್ಮ ಸರ್ಕಾರ ನಿರುದ್ಯೋಗವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿರುವ ಅವರು, ತಮ್ಮ ಆಡಳಿತದ ಅವಧಿಯಲ್ಲಿ ನಿರುದ್ಯೋಗವು ಶೇಕಡಾ 40 ರಷ್ಟು ಕಡಿಮೆಯಾಗಿದೆ. 40 ಲಕ್ಷ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ. ಅದರಲ್ಲಿ 10 ಲಕ್ಷ ಯುವಕರಿಗೆ ಕೆಲಸ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಪ್ರಕಾರ, ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ 21-40 ವರ್ಷದೊಳಗಿನ ಯುವಕ-ಯುವತಿಯರು ನಿರುದ್ಯೋಗ ಭತ್ಯೆಯಡಿಯಲ್ಲಿ ಪ್ರತಿ ತಿಂಗಳು ಸರ್ಕಾರದಿಂದ 1,500 ರೂ. ಪಡೆಯುತ್ತಾರೆ ಎನ್ನಲಾಗಿದೆ. ಆದಾಗ್ಯೂ, ವಿದ್ಯಾರ್ಥಿ ವೇತನ ಪಡೆಯದೇ ವ್ಯಾಸಂಗ ಮಾಡಲು ಮಾಡುತ್ತಿರುವವರು ಪಡೆಯಬಹುದಾಗಿದೆ (ಏಜೆನ್ಸೀಸ್).