ನಾವು ಜೆನ್​-ಜೀ, ಇದನ್ನೆಲ್ಲಾ ಸಹಿಸಲ್ಲ: ಲಡಾಖ್​ನಲ್ಲಿ ಸೇನೆ ವಿರುದ್ಧ ಯುವತಿ ಆಕ್ರೋಶ; ನೆಟ್ಟಿಗರಿಂದ ತರಾಟೆ, ವಿಡಿಯೋ ವೈರಲ್​! GenZ Women on Indian Army

ಮಿಲಿಟರಿ ಸಿಬ್ಬಂದಿ ವಿರುದ್ಧ ಯುವತಿ ಆಕ್ರೋಶ
ಮಿಲಿಟರಿ ಸಿಬ್ಬಂದಿ ವಿರುದ್ಧ ಯುವತಿ ಆಕ್ರೋಶ
Published on

ಪ್ರಮುಖ ಮುಖ್ಯಾಂಶಗಳು

  • ಲಡಾಖ್​ನಲ್ಲಿ ಸೇನೆಯಿಂದ ವಾಹನ ತಪಾಸಣೆ
  • ಮಿಲಿಟರಿ ಸಿಬ್ಬಂದಿ ವಿರುದ್ಧ ಯುವತಿ ಆಕ್ರೋಶ
  • ನಾವು ಜೆನ್​-ಜೀ ನಾವು ಇದನ್ನು ಸಹಿಸಲ್ಲ ಎಂದ ಯುವತಿ
  • ನೆಟ್ಟಿಗರಿಂದ ಯುವತಿಗೆ ಫುಲ್​ ಕ್ಲಾಸ್​​
ಲಡಾಖ್​: ಕಾಶ್ಮೀರದ ಲಡಾಖ್​ನ ಮಿನಿಮಾರ್ಗ್​ನ ಗಡಿ ಪ್ರದೇಶದಲ್ಲಿ ಭದ್ರತಾ ದೃಷ್ಟಿಯಿಂದ ನಡೆಯುತ್ತಿದ್ದ ತಪಾಸಣೆಯನ್ನು ಯುವತಿಯೊಬ್ಬಳು ವಿರೋಧಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.
ನಾಕಾ ಬಂಧಿಯಲ್ಲಿದ್ದ, ಮಿಲಿಟರಿ ಸಿಬ್ಬಂದಿ ಮೇಲೆ ಕೂಗಾಡಿರುವ ಮಹಿಳಾ (GenZ Women on Indian Army)  ಪ್ರವಾಸಿಯೊಬ್ಬಳು, ನಾವು ಕಳೆದ ಐದು ಗಂಟೆಗಳಿಂದ ಇಲ್ಲೇ ನಿಂತಿದ್ದಿವಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

ನಾನು ಜೆನ್​-ಜೀ; ಇವನೆಲ್ಲಾ ಸಹಿಸಲ್ಲ!

ಭಾರತೀಯ ಸೈನ್ಯದವರು ಭದ್ರತೆ ಹಿನ್ನಲೆಯಲ್ಲಿ ಮಿನಿಮಾರ್ಗ್​ಗೆ ಸಾಗುವ ಗಡಿಯಲ್ಲಿ,  ಸಂಚರಿಸುವ ವಾಹನಗಳ ತಪಾಸಣೆ ನಡೆಸಿದ್ದಾರೆ. ಲಡಾಖ್​ಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಕಾರಣ, ವಾಹನ ತಪಾಸಣೆ ನಿಧಾನ ಗತಿಯಲ್ಲಿ ನಡೆದಿದೆ.

ಆದರೆ, ಇದರಿಂದ ಕುಪಿತಳಾದ ಯುವತಿಯೊಬ್ಬಳು, ತಪಾಸಣೆ ನಡೆಸುತ್ತಿದ್ದ ಸೈನಿಕರ ಮೇಲೆ ರೇಗಿದ್ದು, ನೀವು ಇಷ್ಟು ವರ್ಷ ಕಾಶ್ಮೀರದ ಜನರಿಗೆ ಕಾಟ ಕೊಟ್ಟಿದ್ದಿರಿ, ಈಗ ನಮಗೆ ತೊಂದರೆ ಮಾಡುತ್ತಿದ್ದಿರಿ, ನಾವು ಜೆನ್​​-ಜೀಗಳು ನಾವು ಇದನ್ನೆಲ್ಲಾ ಸಹಿಸಲ್ಲ ಎಂದು ಹೇಳಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.


ಸೇನೆ ಹೇಳಿದ್ದೇನು?

ಈ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕರ್ನಲ್​ ನಿಕುಜ್​ ಧಾಮಾ, ಇದು ಅತ್ಯಂತ ಸೂಕ್ಷ್ಮ ಪ್ರದೇಶ, ಇಲ್ಲಿ ಸಂಚರಿಸುವ ಪ್ರತಿ ವಾಹನ ಹಾಗೂ ವ್ಯಕ್ತಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಪ್ರವಾಸಿಗರೇನ್ನುವ ಕಾರಣಕ್ಕೆ ನಿಯಮವನ್ನು ಮೀರಲು ಸಾಧ್ಯವಿಲ್ಲ. ಇಲ್ಲಿಯ ನಿಯಮಗಳು ಎಲ್ಲರಿಗೂ ಅನ್ವಯಿಸುತ್ತವೆ ಎಂದು ಖಡಕ್​ ಸೂಚನೆ ನೀಡಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?


ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ನೆಟ್ಟಿಗರು ಆ ಜೆನ್​-ಜೀ ಯವತಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನಗೆ ಅಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದ ಮೇಲೆ ಅಲ್ಲಿ ಏಕೆ ಹೋಗಿದ್ದೆ? ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. 

ಸೈನ್ಯದವರು ನಮಗಾಗಿ ಪ್ರಾಣವನ್ನು ಪಣಕಿಟ್ಟು ಕೆಲಸ ಮಾಡುತ್ತಿದ್ದಾರೆ, ಅದರೆ ಇವಳಿಗೆ ಕೆಲ ಗಂಟೆಗಳ ಕಾಲ ವೇಟ್​ ಮಾಡಲು ಆಗಲ್ಲ ಎಂದರೆ ಎಷ್ಟು ಸೊಕ್ಕಿರಬೇಕೆಂದು ಇನ್ನೊಬ್ಬರು ಕಿಡಿ ಕಾರಿದ್ದಾರೆ. 

ಪರೀಕ್ಷೆ ಮಾಡುವುದಕ್ಕೆ ಅಡ್ಡ ಪಡಿಸುತ್ತೀರಿ,ಉಗ್ರರ ದಾಳಿ ನಡೆದರೆ ಸರ್ಕಾರದ ವಿರುದ್ಧ ಬೊಬ್ಬೆ ಹಾಕುತ್ತಿರಿ, ಇಂತವರಿಗೆ ಮೊದಲು ಗುಂಡು ಹಾಕಿ ಕೊಲ್ಲಬೇಕೆಂದು ಮತ್ತೊಬ್ಬರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net