ಅಮೆರಿಕದಲ್ಲಿ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ಸ್ ಅರೆಸ್ಟ್: ಲಾರೆನ್ಸ್​​ ಬಿಷ್ಣೋಯ್​ನ ಪ್ರತಿಸ್ಪರ್ಧಿ ಹಿಮಾನ್ಶು, ನೀರಜ್ ಫರೀದ್‌ಪುರಿಯಾ ಬಂಧನ

 ಅಮೆರಿಕದಲ್ಲಿ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ಸ್ ಅರೆಸ್ಟ್: ಲಾರೆನ್ಸ್​​ ಬಿಷ್ಣೋಯ್​ನ ಪ್ರತಿಸ್ಪರ್ಧಿ ಹಿಮಾನ್ಶು, ನೀರಜ್ ಫರೀದ್‌ಪುರಿಯಾ ಬಂಧನ
Published on: 
  • ಗಂಭೀರ ಅಪರಾಧ ಕೇಸ್​ಗಳಿಗೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್ ​​​​ಗ್ಯಾಂಗ್​ಸ್ಟರ್ ಅರೆಸ್ಟ್.

  • ಹಿಮಾಂಶು ಮತ್ತು ನೀರಜ್ ಫರೀದ್‌ಪುರಿಯಾ ಅಮೆರಿಕದಲ್ಲಿ ಬಂಧನ.

  • ಕೊಲೆ-ಸುಲಿಗೆ, ಅಪಹರಣ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿ.

ನವದೆಹಲಿ: ಕೊಲೆ-ಸುಲಿಗೆ, ಅಪಹರಣ ಸೇರಿದಂತೆ ಹಲವು ಗಂಭೀರ ಅಪರಾಧ ಕೇಸ್​ಗಳಿಗೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್ ​​​​ ಭಾರತೀಯ ಗ್ಯಾಂಗ್‌ಸ್ಟರ್‌ಗಳಾದ ಹಿಮಾಂಶು ಮತ್ತು ನೀರಜ್ ಫರೀದ್‌ಪುರಿಯಾ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

ಅಮೆರಿಕದ ವಲಸೆ ಜಾರಿ ಸಂಸ್ಥೆ (ಐಸಿಇ) ಹರಿಯಾಣದ ವಿಶೇಷ ಕಾರ್ಯಪಡೆ ನೀಡಿದ ನಿಖರ ಮಾಹಿತಿ ಮೇರೆಗೆ ಅ.22ರಂದು ಇಬ್ಬರನ್ನು ಲಾಸ್ ವೇಗಾಸ್‌ನಲ್ಲಿ ಬಂದಿಸಲಾಗಿದೆ. ಭಾರತಕ್ಕೆ ಗಡಿಪಾರು ಮಾಡಲು ಹರಿಯಾಣ ಎಸ್‌ಟಿಎಫ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಅಮೆರಿಕದ ಅಧಿಕಾರಿಗಳೊಂದಿಗೆ ಪರಸ್ಪರ ಮಾತನಾಡಿಕೊಳ್ಳುತ್ತಿವೆ ಎನ್ನಲಾಗಿದೆ.

ಮೋಸ್ಟ್​ ವಾಂಟೆಡ್ ಅರೆಸ್ಟ್

ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ನ ಪ್ರತಿಸ್ಪರ್ಧಿಯಾಗಿರುವ ಹಿಮಾಂಶು ಹರಿಯಾಣ ಮತ್ತು ದೆಹಲಿ ಪೊಲೀಸರ ಮೋಸ್ಟ್​ ವಾಂಟೆಡ್​ ಪಟ್ಟಿಯಲ್ಲಿದ್ದ. ದೆಹಲಿಯಿಂದ ಹಿಡಿದು ಉತ್ತರಪ್ರದೇಶದವರೆಗೆ ಈತ ಮತ್ತು ಈತನ ಸಹಚರರ ಮೇಲೆ ಹತ್ಯೆ, ಅಪಹರಣ ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿದೆ. ಈ ಕುಖ್ಯಾತ ಗ್ಯಾಂಗ್‌ಸ್ಟರ್ ವಿರುದ್ಧ ಇಂಟರ್‌ಪೋಲ್ ನೋಟಿಸ್ ಕೂಡ ಜಾರಿಯಲ್ಲಿತ್ತು ಎನ್ನಲಾಗಿದೆ.

Also Read
ಜೈಲಿನಿಂದ ಹೊರಗೆ ಬರೋ ಹಾಗಿಲ್ಲ, ಪೊಲೀಸರು ಮುಟ್ಟೋ ಹಾಗಿಲ್ಲ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಕಸ್ಟಡಿಗೆ ಸಿಗದಿರಲು ಕಾರಣವೇನು? Lawrence Bishnoi
 ಅಮೆರಿಕದಲ್ಲಿ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ಸ್ ಅರೆಸ್ಟ್: ಲಾರೆನ್ಸ್​​ ಬಿಷ್ಣೋಯ್​ನ ಪ್ರತಿಸ್ಪರ್ಧಿ ಹಿಮಾನ್ಶು, ನೀರಜ್ ಫರೀದ್‌ಪುರಿಯಾ ಬಂಧನ

ಯಾರು ಈ ಹಿಮಾಂಶು

ಪೊಲೀಸರ ಪ್ರಕಾರ, ಹಿಮಾಂಶು ಭಾರತ ತೊರೆಯುವ ಮುನ್ನ ನಕಲಿ ದಾಖಲೆಗಳನ್ನು ಬಳಸಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದನು. ಈತ ಪೋರ್ಚುಗಲ್‌ನಲ್ಲಿ ನೆಲೆಸಿ ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದ, ಅಲ್ಲದೆ ನೀರಜ್ ಬಾವನಾ ಮತ್ತು ನವೀನ್ ಬಾಲಿ ಗ್ಯಾಂಗ್‌ಗಳ ಜತೆಗೆ ನಂಟು ಹೊಂದಿದ್ದ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ..

ಇನ್ನೊಬ್ಬ ಆರೋಪಿಯಾದ ಹರಿಯಾಣದ ಪಲ್ವಾಲ್ ಜಿಲ್ಲೆಯ ನಿವಾಸಿ ನೀರಜ್ ಫರೀದ್‌ಪುರಿಯಾ ಕೂಡ ಬಂಧನದ ಸಮಯದಲ್ಲಿ ಅಮೆರಿಕದಲ್ಲಿದ್ದನು. ಈತನ ವಿರುದ್ಧ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2012ರಲ್ಲಿ ಹರಿಯಾಣ ಪೊಲೀಸರು ಎನ್‌ಕೌಂಟರ್ ಬಳಿಕ ಈತನನ್ನು ಬಂಧಿಸಿದ್ದರು. 2015ರಲ್ಲಿ ಕೋರ್ಟ್ ಈತನಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ 2019ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈತನಿಗೆ ಜಾಮೀನು ಮಂಜೂರು ಮಾಡಿತ್ತು.

ಫರಿದಾಬಾದ್‌ನಲ್ಲಿ 2019 ಜೂನ್ 26ರಂದು ಕಾಂಗ್ರೆಸ್ ರಾಜ್ಯ ವಕ್ತಾರ ವಿಕಾಸ್ ಚೌಧರಿ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಬೆಳಕಿಗೆ ಬಂದಿತು. ಇದರ ನಂತರ ಆತ ದುಬೈ ಮೂಲಕ ಕೆನಾಡಗೆ ಪರಾರಿಯಾಗಿದ್ದ ಎನ್ನುವ ಮಾಹಿತಿ ಇದೆ. ಷ್ಣೋಯ್ ಗ್ಯಾಂಗ್‌ನ ಪ್ರತಿಸ್ಪರ್ಧಿಯಾದ 'ಬಂಬಿಹಾ ಗ್ಯಾಂಗ್' ಜವಾಬ್ದಾರಿಯನ್ನು ಹಿಮಾಂಶು ಹೊತ್ತಿದ್ದ ಎನ್ನಲಾಗಿದೆ.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗುಂಡಿನ ದಾಳಿ

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ನಡೆದಿರುವ ಸರಣಿ ಗುಂಡಿನ ದಾಳಿ ಹಾಗೂ ಹತ್ಯೆ ಪ್ರಕರಣಗಳ ಹಿಂದೆ ಹಿಮಾಂಶು ಗ್ಯಾಂಗ್‌ನ ಕೈವಾಡವಿರುವ ಬಗ್ಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹೊಣೆ ಹೊತ್ತುಕೊಂಡಿರುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದಕ್ಷಿಣ ದೆಹಲಿಯ ಅಯಾನಗರದಲ್ಲಿ ಸೆಪ್ಟೆಂಬರ್‌ನಲ್ಲಿ ಜಿಮ್ ಟ್ರೈನರ್ ವಿಜಯ್ ಕುಮಾರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಪ್ರಕರಣವೂ ಇದರಲ್ಲಿ ಸೇರಿದೆ. ಹನ್ಸಾ ಚೌಕ್ ಬಳಿ ಇಬ್ಬರು ದುಷ್ಕರ್ಮಿಗಳು ಅಂದಾಜು 15 ಸುತ್ತು ಗುಂಡು ಹಾರಿಸಿ ವಿಜಯ್ ಕುಮಾರ್ ಅವರನ್ನು ಹತ್ಯೆ ಮಾಡಿದ್ದರು.

ಇದೇ ವರ್ಷ ಅಯಾನಗರ ಪ್ರದೇಶದಲ್ಲಿಯೇ 55 ವರ್ಷದ ಹೈನುಗಾರಿಕಾ ಉದ್ಯಮಿ ರತನ್ ಲೋಹಿಯಾ ಅವರೂ ಕೂಡ ಗುಂಡೇಟಿಗೆ ಬಲಿಯಾಗಿದ್ದರು. ಈ ಕೊಲೆ ಪ್ರಕರಣದ ಹಿಂದೆಯೂ ಗ್ಯಾಂಗ್‌ಸ್ಟರ್ ನೀರಜ್ ಫರೀದ್‌ಪುರಿಯಾ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net