

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ, ಕರಡು ಮತದಾರರ ಪಟ್ಟಿಯಿಂದ 'ಗೈರುಹಾಜರಿ, ಸ್ಥಳಾಂತರ, ಮೃತಪಟ್ಟವರು ಅಥವಾ ನಕಲಿ' ಎಂಬ ವರ್ಗಗಳ ಅಡಿಯಲ್ಲಿ ಹೆಸರುಗಳನ್ನು ಕೈಬಿಡಲಾದ ಮತದಾರರಿಗೆ ಮತ್ತೊಂದು ಅವಕಾಶವನ್ನು ನೀಡುವಂತೆ ಶುಕ್ರವಾರ(ನ. 06) ನಿರ್ದೇಶನ ನೀಡಿದೆ.
ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಹಾಗೂ ನಾಗಾಲ್ಯಾಂಡ್ನ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಕೇಂದ್ರ ಚುನಾವಣಾ ಆಯೋಗವು, ಎಎಸ್ಡಿಡಿ ಅಡಿಯಲ್ಲಿ ಕೈಬಿಡಲಾದ ಮತದಾರರಿಗೆ, ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು, ಮತ್ತು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಮತ್ತೊಂದು ಅವಕಾಶವನ್ನು ನೀಡುವಂತೆ ಸೂಚನೆ ನೀಡಿದೆ.
ಪರಿಶೀಲನಾ ಪ್ರಕ್ರಿಯೆಯಲ್ಲಿ ದೋಷಗಳು ಅಥವಾ ವ್ಯತ್ಯಾಸಗಳಿಂದಾಗಿ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಅವಕಾಶದಿಂದ ಯಾವುದೇ ಅರ್ಹ ಮತದಾರರು ವಂಚಿತರಾಗಬಾರದು ಎಂದು ಆಯೋಗ ಹೇಳಿದೆ.
ಅದೇ ಸಮಯದಲ್ಲಿ, ಮತದಾರರ ಪಟ್ಟಿಯ ನಿಖರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವಾಗ ನಕಲಿ ದಾಖಲಾತಿಗಳನ್ನು ತಡೆಗಟ್ಟುವ ಅಗತ್ಯವನ್ನು ಆಯೋಗವು ಒತ್ತಿ ಹೇಳಿದೆ (ಏಜೆನ್ಸೀಸ್).