ಮೇ.10ರಂದು ಟಿವಿಕೆ ಮುಖ್ಯಸ್ಥ ವಿಜಯ್ ಅವರು ಬ್ಲಾಕ್ ಸೂಟ್ಗೆ ಬಿಳಿ ಬಣ್ಣದ ಶರ್ಟ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಡೀ ದಕ್ಷಿಣ ಭಾರತದಲ್ಲೇ ತಲ್ಲಣವನ್ನು ಸೃಷ್ಟಿಸಿತ್ತು. ಇದು ಪೆರಿಯಾರ್ ಮತ್ತು ಇ.ವಿ. ರಾಮಸ್ವಾಮಿ ಅವರ ವಿಚಾರಧಾರೆಯನ್ನು ಬಿತ್ತರಿಸುವ ಪರಿಕಲ್ಪನೆ ಎನ್ನಲಾಗಿತ್ತು. ಆದರೆ, ಸಿಎಂ ವಿಜಯ್ ಅವರ ಈ ನಡೆ ಮತ್ತು ಕರುಣಾನಿಧಿ ಮತ್ತು ಎಂಕೆ ಸ್ಟಾಲಿನ್ರ ಪಂಚೆ ರಾಜಕೀಯದ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.