ದೇಸಿ ಕಾರ್​ ನೋಡಲು, ಲಕ್ಷ್ಯುರಿ ವಾಹನ ನಿಲ್ಲಿಸಿದ ಸಚಿನ್ ತೆಂಡೂಲ್ಕರ್​; ಮಕ್ಕಳ ಐಡಿಯಾಗೆ 'ಮಾಸ್ಟರ್ ಬ್ಲಾಸ್ಟರ್' ಫಿದಾ..Sachin Tendulkar

Sachin Tendulkar
Sachin Tendulkar
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಕೈಯಿಂದ ತಯಾರಾದ ವಿಶಿಷ್ಟ 'ದೇಸಿ ಕಾರನ್ನು' ಕಂಡು ಸಚಿನ್ ತೆಂಡೂಲ್ಕರ್ ಬೆರಗು
  • ರಸ್ತೆಯಲ್ಲೇ ಐಷಾರಾಮಿ ಕಾರು ನಿಲ್ಲಿಸಿ ಮಕ್ಕಳ ಬಳಿ ಮಾತನಾಡಿಸಿದ ಸಚಿನ್​
  • ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್
Sachin Tendulkar : ಇತ್ತೀಚಿನ ದಿನಗಳಲ್ಲಿ ಹಲವರು ತರಹೇವಾರಿ ಕಾರು, ಬೈಕ್​, ಮೊಬೈಲ್​ ಸೇರಿದಂತೆ ಹಲವು ವಸ್ತುಗಳು ನಮ್ಮ ಬಳಿ ಇರಬೇಕು ಎಂದು ಬಯಸುತ್ತಾರೆ. ಒಬ್ಬರಿಂದ ಒಒಬ್ಬರು ಆಕರ್ಷಕರಾಗಿ ಖರೀದಿಗೆ ಮುಂದಾಗುತ್ತಾರೆ. ಆದರೆ,  ಇಲ್ಲೊಂದು ಗ್ರಾಮೀಣ ಭಾಗದ ಮಕ್ಕಳ ತಂಡ ತಮ್ಮದೇ ಶೈಲಿಯಲ್ಲಿ  ವಾಹನವೊಂದು ತಯಾರಿ ಮಾಡಿ,  ರಸ್ತೆಯಲ್ಲಿ ಆಟವಾಡುತ್ತಿದ್ದ  ದೃಶ್ಯ ಕಂಡು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಐಷಾರಾಮಿ ಕಾರನ್ನು ನಿಲ್ಲಿಸಿ, ಮಕ್ಕಳ ಬಳಿ ಮಾತನಾಡಿ ಅವರ ಐಡಿಯಾವನ್ನು ಹಾಡಿ ಹೊಗಳಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. 
ಭಾರತೀಯ ಕ್ರಿಕೆಟ್​ ಆಟಗಾರ ಸಚಿನ್​ ಅವರು ಹಳ್ಳಿಯೊಂದರಲ್ಲಿ ತಮ್ಮ  ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ  ಹುಡುಗರ ಗುಂಪೊಂದು ವಾಹನದಲ್ಲಿ ಆಟವಾಡುತ್ತಿದ್ದರು. ಇದು ದುಬಾರಿ ಕಾರಲ್ಲ, ಆಟಿಕೆಯಲ್ಲ ಆದರೆ, ಮಕ್ಕಳು ತಾವಾಗಿಯೇ ತಯಾರಿಸಿ ಆಡುತ್ತಿದ್ದ ವಾಹನವಾಗಿತ್ತು.  ಇದನ್ನು ಕಂಡ ಸಚಿನ್​ ಅವರು ಗ್ರಾಮೀಣ ಭಾಗದ ಯುವಕರ ಪ್ರತಿಭೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಯುವಕರು ಮರದ ಎರಡು ದೊಡ್ಡ ಕೊಂಬೆಗಳನ್ನು ನುಣುಪಾಗಿ ಎಳೆಯುವ ಅಸ್ತ್ರವಾಗಿ ಮಾಡಿಕೊಂಡು,  ಅದಕ್ಕೆ ಸೈಕಲ್​ ಚಕ್ರ ಅಳವಡಿಸಿ, ಅದರ ಕೆಳಗೆ ಎರಡು ಕೋಲುಗಳನ್ನು ಕೂರವಂತೆ ಮಾಡಿಕೊಂಡಿದ್ದಾರೆ. ಅದರೊಳಗೆ ಒಬ್ಬ ಕೂತಿದ್ದರೆ ಮತ್ತೊಬ್ಬ ಆ ದೇಸಿ ಗಾಡಿಯನ್ನು ಎಳೆಯುವುದು ವಿಡಿಯೋದಲ್ಲಿ ಇದೆ.
ಭಾರತದ ಗ್ರಾಮೀಣ ಭಾಗದಲ್ಲಿ ಸಂಚರಿಸುವಾಗ, ನಮ್ಮ ಕಣ್ಣಿಗೊಂದು ಕಾರು ಕಂಡಿತು. ಅದನ್ನು ನೋಡಲು ಕೆಳೆಗೆ ಇಳಿದೆವು. ನನಗೆ ಕುತೂಹಲವಿತ್ತು. ಇದು ಶೋ ರೂಂನಿಂದ ಕೊಂಡ ಐಷಾರಾಮಿ ಕಾರಲ್ಲ. ಬದಕಾಗು  ಕೇವಲ ಗ್ರಾಮೀಣ ಬಾಲಕರ ಕಲ್ಪನೆಯಿಂದ ಬಂದದ್ದು.  ಹಳ್ಳಿಯಲ್ಲಿ ಬೆಳೆದ ಬಾಲಕರ ಈ ವಿಡಿಯೋ ನಿಜಕ್ಕೂ ನನಗೆ ಇಷ್ಟವಾಯಿತು. ಇದೊಂದು ಅದ್ಭುತ. ಇಂತಹ ಅನ್ವೇಷಣೆಗೆ ಬೇಕಾಗಿರುವುದು ಅವಕಾಶ ಮಾತ್ರ. ದೊಡ್ಡ ವಿಷಯಗಳು ಯಾವಾಗಲೂ ಸಣ್ಣ ಪ್ಯಾಕೇಜ್‌ಗಳಲ್ಲಿ ಬರುತ್ತವೆ ಎಂದು ಹೇಳಿಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು?

Ministry of Random Affairs ಎನ್ನುವ ಖಾತೆಯಿಂದ ಸಚಿನ್​ ಅವರ ವಿಡಿಯೋಗೆ ಟ್ವೀಟ್ ಮಾಡಿದ್ದು, ಮೈದಾನದ ಒಳಗೆ ಮತ್ತು ಹೊರಗೆ ಜನರನ್ನು ಪ್ರೋತ್ಸಾಹಿಸುವ ಅದ್ಭುತ ವ್ಯಕ್ತಿತ್ವವನ್ನು  ಸಚಿನ್ ತೆಂಡೂಲ್ಕರ್  ಹೊಂದಿದ್ದಾರೆ. ಭಾರತದ ಬೀದಿಗಳಲ್ಲಿರುವ ಪ್ರತಿಭೆಗಳು ಅಪಾರವಾಗಿವೆ. ಅವರಿಗೆ ಸರ್ಕಾರದ ಸಂಪೂರ್ಣ ಬೆಂಬಲ ಬೇಕು. ನಮ್ಮ ಸರ್ಕಾರಗಳು ಉಚಿತ ಕೊಡುಗೆಗಳಿಗಾಗಿ ಖರ್ಚು  ಮಾಡುತ್ತಿವೆ. ಆದರೆ, ಅದೇ ಹಣವನ್ನು ಇಂತಹ ಪ್ರತಿಭಾವಂತ ಜನರಿಗೆ ಖರ್ಚು ಮಾಡಲಿ ಎಂದಿದ್ದಾರೆ. 
ಅಮೋಲ್​ ಎಂಬುವವರು ಟ್ವೀಟ್ ಮಾಡಿ ಇಂತಹ ಪ್ರತಿಭೆಗಳು ಮತ್ತು ಹಳ್ಳಿ ಸೊಗಡಿನ ಕಾರು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾಣೋದು ಸಾಮಾನ್ಯ ಎಂದು ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net