ಕಳೆದ 23 ಗಂಟೆಗಳಲ್ಲಿ ಮುಂಬೈನ ಕೆಲವು ಭಾಗಗಳಲ್ಲಿ ಬರೋಬ್ಬರಿ 250 ರಿಂದ 300 ಮಿಮೀ ಭಾರಿ ಮಳೆಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಭಾರತ ಹವಾಮಾನ ಇಲಾಖೆ ಮುಂಬೈ ಮತ್ತು ರಾಯಗಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕೊಂಕಣ, ಗೋವಾ ಮತ್ತು ಗುಜರಾತ್ ಭಾಗಗಳಲ್ಲೂ ಮುಂದಿನ ದಿನಗಳಲ್ಲಿ ಇಂತಹುದೇ ಭಾರಿ ಮಳೆಯಾಗುವ ಮುನ್ಸೂಚನೆ ಇದೆ, (ಏಜನ್ಸೀಸ್).